Malaika Arora - Arjun Kapoor: ಮಲೈಕಾ ಅರೋರಾ- ಅರ್ಜುನ್ ಕಪೂರ್ ಮದುವೆ ಡೇಟ್ ಫಿಕ್ಸ್? ಗಾಸಿಪ್ಗಳಿಗೆ ಉತ್ತರಿಸಿದ ನಟ
ಮಲೈಕಾ ಮತ್ತು ಅರ್ಜುನ್ ಕಪೂರ್ ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ. ನವೆಂಬರ್ ಅಥವಾ ಡಿಸೆಂಬರ್ ವೇಳೆ ಈ ಜೋಡಿ ವಿವಾಹವಾಗಲಿದ್ದಾರೆ ಎಂದು ಇನ್ಸ್ಟಾಗ್ರಾಂ ನ ಇನ್ಸ್ಟಂಟ್ ಬಾಲಿವುಡ್ ಎಂಬ ಪೇಜ್ ನಲ್ಲಿ ವರದಿಯಾಗಿದೆ. ಆದರೆ ಈ ಕುರಿತ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಬಾಲಿವುಡ್ ನಲ್ಲಿ ಸದ್ಯ ನವ ಜೋಡಿಗಳ ಸುದ್ದಿ ಹೆಚ್ಚು ಕೇಳಿಬರುತ್ತಿದೆ. ಇವರುಗಳ ಸಾಲಿಗೆ ಇದೀಗ ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಅಲ್ಲಿಲ್ಲಿ ಇಬ್ಬರೂ ಜೋಡಿಯಾಗಿ ಕಾಣಿಸಿಕೊಲ್ಳುವ ಮೂಲಕ ಪ್ರೀತಿ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
2/ 7
ಆದರೆ ಇದೀಗ ಇನ್ಸ್ಟಾಗ್ರಾಂ ನ ಇನ್ಸ್ಟಂಟ್ ಬಾಲಿವುಡ್ ಎಂಬ ಪೇಜ್ ನಲ್ಲಿ ಈ ಜೋಡಿಯು ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ. ಆದರೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
3/ 7
ವರದಿ ಪ್ರಕಾರ ಮಲೈಕಾ ಮತ್ತು ಅರ್ಜುನ್ ಕಪೂರ್ ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ. ನವೆಂಬರ್ ಅಥವಾ ಡಿಸೆಂಬರ್ ವೇಳೆ ಈ ಜೋಡಿ ವಿವಾಹವಾಗಲಿದ್ದಾರೆ ಎಂದುತಿಳಿದುಬಂದಿದೆ.
4/ 7
ಇನ್ನು, ಇವರಿಬ್ಬರ ನಡುವಿನ ಮದುವೆಯ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದಂತೆ, ಈ ವಿಚಾರ ಅರ್ಜುನ್ ಕಪೂರ್ ಕಿವಿಗೂ ಬಿದ್ದಿದೆ. ಹೀಗಾಗಿ ಇದಕ್ಕೆ ಸ್ಪಷ್ಟನೆ ನೀಡುವ ಸಲುವಾಗಿ ಅವರು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
5/ 7
ಈ ವಿಚಾರವಾಗಿ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನನ್ನ ಜೀವನದ ಬಗ್ಗೆ ನನಗಿಂತ ಹೆಚ್ಚು ಉಳಿದವರಿಗೇ ತಿಳಿದಿರುವುದಜನ್ನು ನೋಡಲು ಖುಷಿಯಾಗುತ್ತದೆ‘ ಎಂದು ವ್ಯಂಗ್ಯವಾಡುವ ಮೂಲಕ ವಿವಾಹದ ಬಗ್ಗೆ ಮಾತನಾಡಿದ್ದಾರೆ.
6/ 7
ಇನ್ನೂ ಕೆಲ ವರದಿಗಳ ಪ್ರಕಾರ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಈ ಜೋಡಿ ವಿವಾಹವಾಗಲಿದ್ದು, ಸರಳವಾಗಿ ಮದುವೆಯಾಗಲಿದ್ದಾರೆ ಎಂಬ ಮಾಹಿತಿಗಳೂ ಹರಿದಾಡುತ್ತಿವೆ.
7/ 7
ಅಂದಹಾಗೆ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ನಡುವಿನ ವಯಸ್ಸಿನ ಅಂತರ ತೀರಾ ಹೆಚ್ಚಳವಾಗಿದೆ. ಮಲೈಕಾಗಿಂತ ಅರ್ಜುನ್ 12 ವರ್ಷ ಚಿಕ್ಕವರಾಗಿದ್ದು, ಅರ್ಜುನ್ ಕಪೂರ್ ಗೆ 36 ವರ್ಷ ಹಾಗೂ ಮಲೈಕಾ ಅರೋರಾ ಅವರಿಗೆ 48 ವರ್ಷ ವಯಸ್ಸಾಗಿದೆ.