Actress: ಖ್ಯಾತ ನಟಿ ಬಾತ್ ರೂಂನಲ್ಲಿ ಸಿಕ್ಕಿತ್ತು ಹಣದ ರಾಶಿ! ವೇಶ್ಯಾವಾಟಿಕೆಯಿಂದ ಸಂಪಾದಿಸಿದ್ದು ಎಂದ ಗಟ್ಟಿಗಿತ್ತಿ!
ಆಕೆ ಸ್ಫುರದ್ರೂಪಿ, ಅಭಿನಯದಲ್ಲೂ ಪಳಗಿದವಳೇ. ಅಂದ ಮೇಲೆ ಕೇಳಬೇಕಾ? ಬಾಲಿವುಡ್ ಆಕೆಗೆ ರೆಡ್ ಕಾರ್ಪೆಟ್ ಹಾಸಿತ್ತು. ಸಿನಿ ರಂಗದ ಉತ್ತುಂಗದಲ್ಲಿದ್ದಾಗಲೇ ಆಕೆ ಮತ್ತೊಂದು ಕಾರಣಕ್ಕಾಗಿ ಸುದ್ದಿಯಾದಳು. ಆಕೆ ಮನೆಯ ಬಾತ್ ರೂಂನಲ್ಲಿ ಕಂತೆ ಕಂತೆ ಹಣ ಸಿಕ್ಕಿದ್ದು, ಅದು ವೇಶ್ಯಾವಾಟಿಕೆಯಿಂದ ಸಂಪಾದಿಸಿದ್ದು ಅಂತ ಹೇಳಿದ್ದಳು ಆ ಗಟ್ಟಿಗಿತ್ತಿ!
'ಧೀರೆ ಧೀರೆ ಚಲ್ ಚಂದ್ ಗಗನ್ ಮೇ' ಜೊತೆಗೆ 'ಆಪ್ಕಿ ನಜ್ರೋನ್ ನೇ ಸಮ್ಜಾ ಪ್ಯಾರ್ ಕೆ ಕಾಬಿಲ್ ಮುಜೆ' ಹಾಡು ನಿಮಗೆ ನೆನಪಿರಬೇಕು, ತನ್ನ ಮೋಹಕ ನಗುವಿನಿಂದ ಜನರನ್ನು ಹುಚ್ಚೆಬ್ಬಿಸುವಂತೆ ಮಾಡಿದ ಮಾಲಾ ಸಿನ್ಹಾ 40 ವರ್ಷಗಳ ಕಾಲ ಬಾಲಿವುಡ್ ಅನ್ನು ಆಳಿದ್ದವರು.
2/ 8
0ರಿಂದ 80ರ ದಶಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಈಕೆಯ ಹೆಸರೂ ಸೇರಿತ್ತು ಎನ್ನಲಾಗುತ್ತಿದೆ.ಈಕೆಯ ಸೌಂದರ್ಯ ನೋಡಿ ಎಲ್ಲರೂ ಮನಸೋತಿದ್ದು ಅವರ ನಟನೆ ಪ್ರೇಕ್ಷಕರಿಗೆ ಖುಷಿ ಕೊಟ್ಟಿತ್ತು.
3/ 8
ಆದರೆ ಆ ಇಮೇಜ್ ಹೊರತುಪಡಿಸಿ, ಅವರು ತಮ್ಮ ನಿಜ ಜೀವನದಲ್ಲಿ ಬಾಲಿವುಡ್ನ ಅತ್ಯಂತ ಜಿಪುಣ ನಟಿ ಎಂದು ಪರಿಗಣಿಸಲ್ಪಟ್ಟರು. ವಿವಾದಿತ ನಟಿಯೂ ಆದರು!
4/ 8
ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು ಎನ್ನಲಾಗಿದೆ. ಇದೇ ವೇಳೆ ಮಾಲಾ ತನ್ನ ಹಣ ಉಳಿಸಲು ಮಾಧ್ಯಮ ಹಾಗೂ ನ್ಯಾಯಾಲಯದ ಮುಂದೆ ಏನೋ ಹೇಳಿದ್ದು ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದರು.
5/ 8
ಇದು 1978ರ ಮಾತು... ಮಾಲಾ ಸಿನ್ಹಾ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಅವರ ಜೀವನದಲ್ಲಿ ಒಂದು ಘಟನೆ ನಡೆಯಿತು. ಅದು ಅವರ ಸಂತೋಷವನ್ನು ಕಸಿದುಕೊಂಡು ಜೀವನದ ಶಾಂತಿಯನ್ನು ಕದಡಿತು. ಈ ಪ್ರಕರಣ ಆದಾಯ ತೆರಿಗೆಗೆ ಸಂಬಂಧಿಸಿದ್ದಾಗಿತ್ತು.
6/ 8
ಮಾಧ್ಯಮ ವರದಿಗಳ ಪ್ರಕಾರ, 1978 ರಲ್ಲಿ ಮುಂಬೈನಲ್ಲಿರುವ ಮಾಲಾ ಸಿನ್ಹಾ ಅವರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಅವರ ಸ್ನಾನಗೃಹದಲ್ಲಿ 12 ಲಕ್ಷ ಮೂಟೆಗಳು ಪತ್ತೆಯಾಗಿದ್ದವು. ಆಗಿನ ಕಾಲದಲ್ಲಿ 12 ಲಕ್ಷ ರೂಪಾಯಿ ದೊಡ್ಡ ಮೊತ್ತವಾಗಿತ್ತು.
7/ 8
ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರುವಷ್ಟು ದೊಡ್ಡದಾಗಿತ್ತು. ತನ್ನ ಸಂಪಾದನೆಯನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳಬಹುದೆಂಬ ಆಲೋಚನೆಯಲ್ಲಿ ಮಾಲಾ ಸಿನ್ಹಾ ಬೇಸರಗೊಂಡಿದ್ದಳು. ಹಾಗಾಗಿ ವಕೀಲರು ಹಾಗೂ ಆಕೆಯ ತಂದೆ ಆಲ್ಬರ್ಟ್ ಸಿನ್ಹಾ ಅವರ ಮನವಿ ಮೇರೆಗೆ ವೇಶ್ಯಾವಾಟಿಕೆ ಮೂಲಕ ಈ ಹಣವನ್ನು ಸಂಪಾದಿಸಿರುವುದಾಗಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದರು!
8/ 8
ಮಾಲಾ ಅವರ ಹೇಳಿಕೆಗೆ ಆಕೆ ಅಭಿಮಾನಿಗಳು ಅಷ್ಟೇ ಅಲ್ಲ, ಸಾಮಾನ್ಯ ಜನರೂ ಬೆಚ್ಚಿ ಬಿದ್ದಿದ್ದರು. ಇದರಲ್ಲಿ ಎಷ್ಟು ಸತ್ಯವಿದೆ ಎಂಬುದು ದೇವರಿಗೆ ಮತ್ತು ನಟಿಗೆ ಮಾತ್ರ ಗೊತ್ತು! ಆದರೆ ನಂತರ ಆಕೆ ಇಮೇಜ್ ಹಾಳಾಗಿ ಹೋಯ್ತು!