Alia Bhatt: ನೂರಾರು ಕೋಟಿ ಒಡತಿ ಆಲಿಯಾ ಭಟ್! 50 ವರ್ಷಗಳಾದ್ರೂ ಮಗಳಷ್ಟು ಹಣ ಮಾಡಲಿಲ್ಲ ಮಹೇಶ್ ಭಟ್!

ಬಾಲಿವುಡ್​ನ ಬಹುಬೇಡಿಕೆಯ ನಟಿ ಆಲಿಯಾ ಭಟ್, ಹಿರಿಯ ನಟಿ ಸೋನಿ ರಜ್ದಾನ್ ಮತ್ತು ಸಿನಿಮಾ ನಿರ್ಮಾಪಕ ಮಹೇಶ್ ಭಟ್ ಅವರ ಪುತ್ರಿಯಾಗಿದ್ದಾರೆ. ಆಲಿಯಾ ಬಾಲಿವುಡ್​ನಲ್ಲಿ ತನ್ನದೇ ಚಾಪು ಮೂಡಿಸಿದ್ದಾರೆ. ಬಾಲಿವುಡ್​ಗೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ಆಲಿಯಾ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ.

First published:

  • 18

    Alia Bhatt: ನೂರಾರು ಕೋಟಿ ಒಡತಿ ಆಲಿಯಾ ಭಟ್! 50 ವರ್ಷಗಳಾದ್ರೂ ಮಗಳಷ್ಟು ಹಣ ಮಾಡಲಿಲ್ಲ ಮಹೇಶ್ ಭಟ್!

    ಆಲಿಯಾ ಭಟ್ ಅಭಿನಯದ ‘ಗಂಗೂಬಾಯಿ ಕಥಿಯಾವಾಡಿ’ ಯಶಸ್ಸಿನ ನಂತರ ‘ಬ್ರಹ್ಮಾಸ್ತ್ರ’ ಸಿನಿಮಾ ಕೂಡ ಹಿಟ್ ಆಯ್ತು, ಇದೀಗ ನಟಿ ಹಾಲಿವುಡ್​ನತ್ತ ಹೆಜ್ಜೆ ಹಾಕಿದ್ದಾರೆ. ಆಲಿಯಾ ಕಡಿಮೆ ಸಮಯದಲ್ಲಿ ಜನಪ್ರಿಯತೆ ಪಡೆದಿದ್ದು ಮಾತ್ರವಲ್ಲದೆ ಭರ್ಜರಿ ಸಂಪಾದನೆ ಕೂಡ ಮಾಡಿದ್ದಾರೆ. ನಟನೆಯ ಜೊತೆಗೆ ಉದ್ಯಮ ಕೂಡ ನಡೆಸುತ್ತಿದ್ದಾರೆ. ಮಗಳ ಯಶಸ್ಸಿನ ಬಗ್ಗೆ ಮಹೇಶ್ ಭಟ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. aliaabhatt/maheshfilm/Instagram)

    MORE
    GALLERIES

  • 28

    Alia Bhatt: ನೂರಾರು ಕೋಟಿ ಒಡತಿ ಆಲಿಯಾ ಭಟ್! 50 ವರ್ಷಗಳಾದ್ರೂ ಮಗಳಷ್ಟು ಹಣ ಮಾಡಲಿಲ್ಲ ಮಹೇಶ್ ಭಟ್!

    ದಾದಾ ಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್​ನಲ್ಲಿ ಪ್ರಶಸ್ತಿ ಪಡೆದ ಆಲಿಯಾ ಅವರನ್ನು ಬಾಲಿವುಡ್ ಲೆಜೆಂಡ್ ನಟಿ ರೇಖಾ ಭವಿಷ್ಯದ ದಂತಕಥೆ ಎಂದು ಕರೆದಿದ್ದಾರೆ. ಸಿನಿಮಾಗಳಲ್ಲಿ ಆಲಿಯಾ ಅಭಿನಯವನ್ನು ನೋಡಿ ರೇಖಾ ಅವರು  ನಟಿ ಬಗ್ಗೆ ಮೆಚ್ಚುಗೆಯ ಮಾತಾಡಿದ್ದಾರೆ. (pc:twitter@ani_digital)

    MORE
    GALLERIES

  • 38

    Alia Bhatt: ನೂರಾರು ಕೋಟಿ ಒಡತಿ ಆಲಿಯಾ ಭಟ್! 50 ವರ್ಷಗಳಾದ್ರೂ ಮಗಳಷ್ಟು ಹಣ ಮಾಡಲಿಲ್ಲ ಮಹೇಶ್ ಭಟ್!

    ನ್ಯೂಸ್ 18 ಜೊತೆ ಮಾತಾಡಿದ ಆಲಿಯಾ ತಂದೆ ಮಹೇಶ್ ಭಟ್, ಆಲಿಯಾ ಬಾಲ್ಯದಿಂದಲೂ ಸ್ಟಾರ್ ಆಗುವ ಕನಸು ಕಂಡಿದ್ರು. ಆಲಿಯಾ ನಟನೆ ಬಗ್ಗೆ ಬಹಳ ಆಸಕ್ತಿ ಹೊಂದಿದ್ದಳು. ನನಗಿಂತ ನನ್ನ ಮಗಳು ಹೆಚ್ಚು ಯಶಸ್ವಿಯಾಗಿದ್ದಾಳೆ ಎಂದು ಹೇಳಲು ನನಗೆ ಯಾವ ಹಿಂಜರಿಕೆಯಿಲ್ಲ ಎಂದು ಮಹೇಶ್ ಭಟ್ ಹೇಳಿದ್ದಾರೆ. (ಫೋಟೋ ಕ್ರೆಡಿಟ್ಸ್: /maheshfilm/Instagram)

    MORE
    GALLERIES

  • 48

    Alia Bhatt: ನೂರಾರು ಕೋಟಿ ಒಡತಿ ಆಲಿಯಾ ಭಟ್! 50 ವರ್ಷಗಳಾದ್ರೂ ಮಗಳಷ್ಟು ಹಣ ಮಾಡಲಿಲ್ಲ ಮಹೇಶ್ ಭಟ್!

    ತಮ್ಮ ಮಗಳ ಬಗ್ಗೆ ಮಾತಾಡಿದ ಮಹೇಶ್ ಭಟ್, ಆಲಿಯಾ ಯಾವಾಗಲೂ ನಿರ್ಭೀತಿಯಿಂದ ಕೆಲಸ ಮಾಡುತ್ತಾಳೆ. ಯಾವುದೇ ವಿಚಾರವನ್ನು ಕೂಡ ಸೂಕ್ಷ್ಮತೆಯಿಂದ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾಳೆ ಎಂದು ಹೇಳಿದರು. ಮಗಳ ಸಾಧನೆ ಕಂಡು ಮಹೇಶ್ ಭಟ್ ತುಂಬಾ ಖುಷಿಯಾಗಿದ್ದಾರೆ. (ಫೋಟೋ ಕ್ರೆಡಿಟ್ಸ್: /maheshfilm/Instagram)

    MORE
    GALLERIES

  • 58

    Alia Bhatt: ನೂರಾರು ಕೋಟಿ ಒಡತಿ ಆಲಿಯಾ ಭಟ್! 50 ವರ್ಷಗಳಾದ್ರೂ ಮಗಳಷ್ಟು ಹಣ ಮಾಡಲಿಲ್ಲ ಮಹೇಶ್ ಭಟ್!

    ತಮ್ಮ ಮಗಳ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಮಹೇಶ್ ಭಟ್, 'ಆಲಿಯಾ ಚಿಕ್ಕವಳಿದ್ದಾಗ ಪಾದಗಳಿಗೆ 500 ರೂ.ಗೆ ಕ್ರೀಮ್ ಹಚ್ಚುತ್ತಿದ್ದಳು. ಆಲಿಯಾ ತನ್ನ ಶ್ರಮದ ಫಲವಾಗಿ ಹೆಚ್ಚು ಸಂಪಾದನೆ ಮಾಡಿದ್ದು, ಈ ಹಣವನ್ನು 50 ವರ್ಷಗಳಾದರೂ ನಾನು ಗಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. (ಫೋಟೋ ಕ್ರೆಡಿಟ್ಸ್: /maheshfilm/Instagram)

    MORE
    GALLERIES

  • 68

    Alia Bhatt: ನೂರಾರು ಕೋಟಿ ಒಡತಿ ಆಲಿಯಾ ಭಟ್! 50 ವರ್ಷಗಳಾದ್ರೂ ಮಗಳಷ್ಟು ಹಣ ಮಾಡಲಿಲ್ಲ ಮಹೇಶ್ ಭಟ್!

    ರಾಹಾ ಹುಟ್ಟಿದ ಮೇಲೆ ದುಪ್ಪಟ್ಟು ಖುಷಿ ಸಿಕ್ಕಿದೆ ಎಂದು ಮಹೇಶ್ ಭಟ್ ಹೇಳಿದ್ದಾರೆ. 2019ರ ಫೋರ್ಬ್ಸ್ ಮ್ಯಾಗಜಿನ್​ನಲ್ಲಿ ಅತಿ ಹೆಚ್ಚು ಸಂಪಾದನೆ ಮಾಡಿದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಆಲಿಯಾ ಹೆಸರನ್ನು ಸೇರಿಸಲಾಗಿದೆ ಎಂದು ಮಹೇಶ್ ಭಟ್ ಹೇಳಿದ್ರು. ಫೋಟೋ ಕ್ರೆಡಿಟ್ಸ್: /maheshfilm/Instagram)

    MORE
    GALLERIES

  • 78

    Alia Bhatt: ನೂರಾರು ಕೋಟಿ ಒಡತಿ ಆಲಿಯಾ ಭಟ್! 50 ವರ್ಷಗಳಾದ್ರೂ ಮಗಳಷ್ಟು ಹಣ ಮಾಡಲಿಲ್ಲ ಮಹೇಶ್ ಭಟ್!

    ಆಲಿಯಾ ಭಟ್ ಯಶಸ್ವಿ ನಟಿ, ಉದ್ಯಮಿಯೂ ಆಗಿದ್ದಾರೆ. ಮತ್ತೊಂದೆಡೆ ಕಪೂರ್ ಕುಟುಂಬದ ಸೊಸೆಯಾಗುವುದರ ಜೊತೆಗೆ ಮುದ್ದು ಮಗಳ ತಾಯಿಯಾಗಿ ತನ್ನ ಜವಾಬ್ದಾರಿಯನ್ನು ಆಲಿಯಾ ಭಟ್ ನಿಭಾಯಿಸುತ್ತಿದ್ದಾರೆ. (ಫೋಟೋ ಕೃಪೆ; ಅಲಿಯಾಭಟ್/ಇನ್ಸ್ಟಾಗ್ರಾಮ್)

    MORE
    GALLERIES

  • 88

    Alia Bhatt: ನೂರಾರು ಕೋಟಿ ಒಡತಿ ಆಲಿಯಾ ಭಟ್! 50 ವರ್ಷಗಳಾದ್ರೂ ಮಗಳಷ್ಟು ಹಣ ಮಾಡಲಿಲ್ಲ ಮಹೇಶ್ ಭಟ್!

    ಆಲಿಯಾ ಭಟ್ 2021ರಲ್ಲಿ ತನ್ನ ಸ್ವಂತ ನಿರ್ಮಾಣ ಸಂಸ್ಥೆ ಎಟರ್ನಲ್ ಸನ್​ ಸೈನ್ ಪ್ರೊಡಕ್ಷನ್ಸ್ ಅನ್ನು ಪ್ರಾರಂಭಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಆಲಿಯಾ ನಿವ್ವಳ ಆಸ್ತಿ 180 ಕೋಟಿಗೂ ಹೆಚ್ಚು ಎನ್ನಲಾಗ್ತಿದೆ. (ಫೋಟೋ ಕೃಪೆ; ಅಲಿಯಾಭಟ್/ಇನ್ಸ್ಟಾಗ್ರಾಮ್)

    MORE
    GALLERIES