Mahesh Babu | SSMB 28 - ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಸರ್ಕಾರ ವಾರಿ ಪಟ ಚಿತ್ರದ ಯಶಸ್ಸಿನ ಬಳಿಕ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡ್ತಿದ್ದಾರೆ. ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರ ತನ್ನ ಮೊದಲ ಶೆಡ್ಯೂಲ್ ಕೂಡ ಪೂರ್ಣಗೊಳಿಸಿದೆ.
ಮಹೇಶ್ ಬಾಬು ತಂದೆ ಕೃಷ್ಣ ಹಠಾತ್ ನಿಧನದಿಂದ ಈ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿತ್ತು. ನಾಳೆಯಿಂದ ಈ ಚಿತ್ರದ ಹೊಸ ಶೆಡ್ಯೂಲ್ ಶುರುವಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ. ಸಿನಿಮಾ ಆ್ಯಕ್ಷನ್ ಜೊತೆಗೆ ಫ್ಯಾಮಿಲಿ ಎಂಟರ್ಟೈನರ್ ಆಗಲಿದೆ. ಮ್ಯೂಸಿಕ್ ಸಿಟ್ಟಿಂಗ್ ಗಾಗಿ ತಂಡ ಈಗಾಗಲೇ ದುಬೈಗೆ ಹೋಗಿದೆಯಂತೆ.
2/ 8
ತಂದೆ-ತಾಯಿ ಸಾವಿನ ನೋವಿನಿಂದ ಚೇತರಿಸಿಕೊಂಡಿರುವ ಮಹೇಶ್ ಬಾಬು ಈ ಸಿನಿಮಾದ ಹೊಸ ಶೆಡ್ಯೂಲ್ ನಲ್ಲಿ ಭಾಗಿಯಾಗಿದ್ದಾರೆ. ಹೈದರಾಬಾದ್ನ ಸಾರಥಿ ಸ್ಟುಡಿಯೋದ ಬೃಹತ್ ಸೆಟ್ನಲ್ಲಿ ಸಿನಿಮಾ ಶೂಟಿಂಗ್ ಕೂಡ ನಡೀತಿದೆ
3/ 8
ಈ ಇತ್ತೀಚಿನ ಶೆಡ್ಯೂಲ್ನಲ್ಲಿ ನಾಯಕಿಯರೊಂದಿಗೆ ಪ್ರಮುಖ ದೃಶ್ಯಗಳನ್ನು ಶೂಟ್ ಮಾಡಲಾಗುತ್ತೆ. ಜೊತೆಗೆ ಮಹೇಶ್ ಬಾಬು ಅವರ ಅದ್ಧೂರಿ ಸಾಹಸ ದೃಶ್ಯದ ಚಿತ್ರೀಕರಣ ಕೂಡ ನಡೆಯಲಿದೆಯಂತೆ.
4/ 8
ಆಗಸ್ಟ್ 11, 2023 ರಂದು ಈ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲು ನಿರ್ದೇಶಕರು ಮತ್ತು ನಿರ್ಮಾಪಕರು ಪ್ಲಾನ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದೆ.
5/ 8
ನೆಟ್ಫ್ಲಿಕ್ಸ್ ಚಿತ್ರದ ನಂತರದ ಥಿಯೇಟ್ರಿಕಲ್ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ನೆಟ್ಫ್ಲಿಕ್ಸ್ ಈ ಕುರಿತು ಅಧಿಕೃತ ಪ್ರಕಟಣೆಯನ್ನು ಸಹ ಹೊರಡಿಸಿದೆ.
6/ 8
ಕಾಲಿನ ಗಾಯದಿಂದ ಚೇತರಿಸಿಕೊಂಡಿರುವ ಪೂಜಾ ಹೆಗಡೆ ಕೂಡ ಈ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಆ್ಯಕ್ಷನ್ ಹಾಗೂ ಫ್ಯಾಮಿಲಿ ಡ್ರಾಮಾ ಆಗಿರೋ ಈ ಚಿತ್ರದಲ್ಲಿ ಶ್ರೀಲೀಲಾ ಮತ್ತೊಬ್ಬ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
7/ 8
ಸುಮಾರು 12 ವರ್ಷಗಳ ನಂತರ ತ್ರಿವಿಕ್ರಮ್ ಮಹೇಶ್ ಬಾಬು ಜೊತೆ ಈ ಸಿನಿಮಾ ಮಾಡುತ್ತಿರುವುದು ಎಲ್ಲರ ನಿರೀಕ್ಷೆಗೆ ಮತ್ತಷ್ಟು ಹೆಚ್ಚಿಸಿದ್ದು, ತೆರೆ ಮೇಲೆ ಈ ಜೋಡಿ ಮೋಡಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.
8/ 8
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫ್ಯಾಮಿಲಿ ಎಂಟರ್ಟೈನರ್ ಆಗಿ ಬರುತ್ತಿರುವ ಈ ಚಿತ್ರದ ಮೇಲೆ ಉತ್ತಮ ನಿರೀಕ್ಷೆಗಳಿವೆ. ಈ ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆಯಂತೆ. ತೆಲುಗು ಜೊತೆಗೆ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡೋ ಪ್ಲಾನ್ ಮಾಡಲಾಗಿದೆ.