ಮಹೇಶ್ ಬಾಬು ದಕ್ಷಿಣದ ಸೂಪರ್ ಸ್ಟಾರ್ ಆಗಿದ್ದಾರೆ. 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 8 ನಂದಿ ಪ್ರಶಸ್ತಿಗಳು, 5 ಫಿಲ್ಮ್ಫೇರ್ ತೆಲುಗು ಪ್ರಶಸ್ತಿಗಳು, 4 SIIMA ಪ್ರಶಸ್ತಿಗಳು, 3 CineMAA ಪ್ರಶಸ್ತಿಗಳು ಮತ್ತು IIFA ಉತ್ಸವಮ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಪ್ರೊಡಕ್ಷನ್ ಹೌಸ್ ಜಿ. ಮಹೇಶ್ ಬಾಬು ಎಂಟರ್ ಟೈನ್ ಮೆಂಟ್ ಮಾಲೀಕರೂ ಆಗಿದ್ದು, ಮಹೇಶ್ ಬಾಬು ಮದ್ಯವನ್ನು ಮುಟ್ಟುವುದಿಲ್ಲ ಎಂದು ವರದಿಯಾಗಿದೆ.
ಸೌತ್ ಸೂಪರ್ಸ್ಟಾರ್ ಪ್ರಭಾಸ್ ಟಾಲಿವುಡ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಟರಲ್ಲಿ ಒಬ್ಬರಾಗಿದ್ದಾರೆ. ಪ್ರಭಾಸ್ 2015 ರಿಂದ ಮೂರು ಬಾರಿ ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರು 7 ಫಿಲ್ಮ್ಫೇರ್ ಪ್ರಶಸ್ತಿ ಸೌತ್ ನಾಮನಿರ್ದೇಶನಗಳನ್ನು ಪಡೆದಿದ್ದಾರೆ ನಂದಿ ಪ್ರಶಸ್ತಿಗಳು ಮತ್ತು SIIMA ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ಪ್ರಭಾಸ್ ಮದ್ಯಪಾನ ಅಷ್ಟೇ ಅಲ್ಲ ಸಿಗರೇಟ್ ಕೂಡ ಮುಟ್ಟುವುದಿಲ್ಲವಂತೆ. ಆರೋಗ್ಯಕರ ಜೀವನ ಶೈಲಿ ಅನುಸರಿಸುತ್ತಿದ್ದಾರೆ.
ಈ ಪಟ್ಟಿಯಲ್ಲಿ ನಾಲ್ಕನೇ ಹೆಸರು ತಮಿಳು ಸ್ಟಾರ್ ನಟ ಸೂರ್ಯ, ಕಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಸೂರ್ಯ ಕೂಡ ಒಬ್ಬರಾಗಿದ್ದಾರೆ. 2 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 6 ಫಿಲ್ಮ್ಫೇರ್ ಪ್ರಶಸ್ತಿಗಳು ಪಡೆದಿದ್ದಾರೆ. ಫೋರ್ಬ್ಸ್ ಇಂಡಿಯಾದ 100 ಸೆಲೆಬ್ರಿಟಿ ಪಟ್ಟಿಯಲ್ಲಿ ಸೂರ್ಯ 6 ಬಾರಿ ಕಾಣಿಸಿಕೊಂಡಿದ್ದಾರೆ. ಸೂರ್ಯ ಕೂಡ ಮದ್ಯವನ್ನು ಮುಟ್ಟುವುದಿಲ್ಲ. ಕುಡಿತದ ಚಟದಿಂದ ದೂರವಿದ್ದಾರೆ.