ರಾಜಮೌಳಿ ಅವರು ಈ ವರ್ಷ ಎನ್ಟಿಆರ್, ರಾಮ್ ಚರಣ್ ಮತ್ತು ಅಜಯ್ ದೇವಗನ್ ಅವರ ಜೊತ ಮಾಡಿದ 'ಆರ್ಆರ್ಆರ್' ಚಿತ್ರ ಸೂಪರ್ ಹಿಟ್ ಎನಿಸಿಕೊಂಡಿತ್ತು. ಇದೀಗ ರಾಜಮೌಳಿ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆ ಮಾಡಲಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಸದ್ಯಕ್ಕೆ ಮಹೇಶ್ ಬಾಬು ನಟಿಸಿರುವ 'ಸರ್ಕಾರಿ ವಾರು ಪಾಟ' ಸಿನಿಮಾ ರಿಲೀಸ್ಗೆ ಆಗಲಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಮಹೇಶ್ ಬಾಬು, ರಾಜಮೌಳಿ ಜೊತೆ ಮಾಡಲಿರುವ ಸಿನಿಮಾದ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
ಮಹೇಶ್ ಬಾಬು ಅವರ ಅಭಿಮಾನಿಗಳು ರಾಜಮೌಳಿ ಅವರ ವೃತ್ತಿಜೀವನದ ದೊಡ್ಡ ಹಿಟ್ ಆಗುವ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಚಿತ್ರವನ್ನು ಹಿರಿಯ ನಿರ್ಮಾಪಕ ಕೆ.ಎಲ್.ನಾರಾಯಣ ನಿರ್ಮಿಸುತ್ತಿದ್ದಾರೆ. ಈ ನಡುವೆ ರಾಜಮೌಳಿ ಮಾಮೂಲಿ ಸಿನಿಮಾ ಮಾಡುವುದನ್ನು ನಿಲ್ಲಿಸಿದ್ದಾರೆ. ವಿಜಯೇಂದ್ರ ಪ್ರಸಾದ್ ಈಗಾಗಲೇ ಜಕ್ಕಣ್ಣ ಜೊತೆ ಮಹೇಶ್ ಬಾಬು ಅವರ ಮುಂಬರುವ ಚಿತ್ರದ ಕಥೆಯನ್ನು ಸಿದ್ಧಪಡಿಸುತ್ತಿದ್ದಾರೆ. ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಹಾಲಿವುಡ್ ಸಿನಿಮಾ 'ಇಂಡಿಯನ್ ಜೋನ್ಸ್' ಮಾದರಿಯಲ್ಲೇ ಆಫ್ರಿಕನ್ ಅಡ್ವೆಂಚರ್ ಥ್ರಿಲ್ಲರ್ ಆಗಿ ದೊಡ್ಡ ಮಟ್ಟದಲ್ಲಿ ತೆರೆ ಕಾಣಲಿದೆ ಎಂದು ಸಂದರ್ಶನವೊಂದರಲ್ಲಿ ಜಕ್ಕಣ್ಣ ತಂದೆ ವಿಜಯೇಂದ್ರ ಪ್ರಸಾದ್ ಬಹಿರಂಗಪಡಿಸಿದ್ದಾರೆ.