ಟಾಲಿವುಡ್ ಹೀರೋ ಮಹೇಶ್ ಬಾಬು ಅವರು ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ. ಬಿಗ್ ಬಜೆಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವ ನಟ ಮುಂದಿನ ಪ್ರಾಜೆಕ್ಟ್ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿದ್ದಾರೆ. ಈ ಪ್ರಾಜೆಕ್ಟ್ನ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ ಅಷ್ಟೇ.
2/ 8
ನಿರ್ದೇಶಕರೂ ಇದು ದೊಡ್ಡ ಸಿನಿಮಾ ಎಂದು ಹೇಳಿದ್ದಾರೆ. ಹಿಂದೂ ದೇವರು ಹನುಮಾನ್ ಪಾತ್ರದಿಂದ ಪ್ರೇರೇಪಿತವಾದ ಮಹೇಶ್ ಬಾಬು ಅವರ ಪಾತ್ರದ ಕುರಿತು ಈಗ ಹೊಸ ಅಪ್ಡೇಟ್ ಹೊರಬಿದ್ದಿದೆ. ಇದರಲ್ಲಿ ಏನದು ಎಕ್ಸೈಟಿಂಗ್ ಮಾಹಿತಿ ಗೊತ್ತಾ?
3/ 8
ಈ ಸಿನಿಮಾಗೆ ಇನ್ನೂ ಟೈಟಲ್ ಫೈನಲ್ ಮಾಡಿಲ್ಲ. ಈ ವರ್ಷದ ಕೊನೆಗೆ ಸಿನಿಮಾ ಆರಂಭಗೊಳ್ಳಲಿದೆ ಎನ್ನಲಾಗಿದ್ದರೂ ಈ ಬಗ್ಗೆ ಯಾವುದೇ ಫೈನಲ್ ಡೇಟ್ ಅನೌನ್ಸ್ ಆಗಿಲ್ಲ. ಈ ಸಿನಿಮಾ ಬಗ್ಗೆ ಮಾತನಾಡಿದ ಎಸ್ಎಸ್ ರಾಜಮೌಳಿ ಅವರ ತಂದೆ ಕೆ.ವಿ. ವಿಜಯೇಂದ್ರ ಅವರು, ಈ ಸಿನಿಮಾ ನಿಜ ಘಟನೆ ಆಧಾರಿತವಾಗಿದೆ ಎಂದಿದ್ದಾರೆ.
4/ 8
ಪಿಂಕ್ವಿಲ್ಲಾ ನೀಡಿದ ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ಭಾರತೀಯ ಪುರಾಣಗಳಿಂದ ಹಲವು ಅಂಶಗಳನ್ನು ಸೇರಿಸಲಾಗಿದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರ ಪಾತ್ರದ ಕುರಿತು ಮಹತ್ವದ ಅಪ್ಡೇಟ್ ಹೊರಬಿದ್ದಿದೆ.
5/ 8
ರಾಜಮೌಳಿ ಅವರಿಗೆ ರಾಮಾಯಣ ಹಾಗೂ ಮಹಾಭಾರತದಿಂದ ಕಥೆಗಳನ್ನು ಪ್ರೇರಣೆಯಾಗಿ ತೆಗೆದುಕೊಳ್ಳುವುದು ಇಷ್ಟ. ಅವರು ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿದ ಕಥೆಗಳನ್ನೇ ಸಿನಿಮಾ ಮಾಡುತ್ತಾರೆ. ಮಹೇಶ್ ಬಾಬು ಅವರ ಸಿನಿಮಾ ಕೂಡಾ ಇದಕ್ಕೆ ಹೊರತಲ್ಲ ಎಂದಿದ್ದಾರೆ.
6/ 8
ಈ ಸಿನಿಮಾವನ್ನು ಆಫ್ರಿಕಾದ ಕಾಡಿನಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಲಾಗಿದ್ದು ಮಹೇಶ್ ಬಾಬು ಅವರ ಹನುಮಾನ್ ಹೋಲಿಕೆಯ ಪಾತ್ರವನ್ನು ಮಾತ್ರ ವಿಶೇಷವಾಗಿ ಅಮೆಜಾನ್ ಮಳೆಕಾಡಿನಲ್ಲಿ ಶೂಟ್ ಮಾಡಲು ನಿರ್ಧರಿಸಲಾಗಿದೆ ಎನ್ನುವುದು ರಿವೀಲ್ ಆಗಿದೆ.
7/ 8
ಭಾರತೀಯ ಚಿತ್ರರಂಗದಲ್ಲಿಯೇ ಬಿಗ್ ಬಜೆಟ್ನಲ್ಲಿ ನಿರ್ಮಾಣವಾಗುವ ಈ ಸಿನಿಮಾ ಅಮೆಜಾನ್ ಮಳೆಕಾಡಿನಲ್ಲಿ ಶೂಟಿಂಗ್ ಆಗಲಿದೆ. ಸದ್ಯ ಭಾರತದ ಅತಿ ದೊಡ್ಡ ಪ್ರೊಡಕ್ಷನ್ ಹೌಸ್ಗಳಾದ ಡಿಸ್ನಿ ಹಾಗೂ ಸೋನಿ ಈ ಸಿನಿಮಾ ನಿರ್ಮಾಣ ಮಾಡಲು ಪೈಪೋಟಿ ನಡೆಸುತ್ತಿವೆ.
8/ 8
ಎಸ್ಎಸ್ ರಾಜಮೌಳಿ ಹಾಗೂ ಮಹೇಶ್ ಬಾಬು ಅವರ ಸಿನಿಮಾವನ್ನು ನಿರ್ಮಾಣ ಮಾಡಲು ಸೋನಿ ಪಿಕ್ಚರ್ಸ್ ಈಗಾಗಲೇ ಮಾತುಕತೆ ನಡೆಸುತ್ತಿದೆ. ಇದು ಡಿಸ್ನಿ ಹಾಗೂ ಸೋನಿ ನಡುವಿನ ಫೈಟ್. ಎರಡೂ ಪ್ರೊಡಕ್ಷನ್ ಹೌಸ್ಗಳೂ ಸಿನಿಮಾಗೆ ಬೇಕಾದ ಟೆಕ್ನಿಕಲ್ ಸಪೋರ್ಟ್ ಕೊಡುವುದಾಗಿ ಭರವಸೆ ಕೊಟ್ಟಿದೆ.