ಆದರೆ ಮಹೇಶ್ ಬಾಬು ಅವರ ಸಿನಿಮಾಗಳ ತಮಿಳಿನ ರಿಮೇಕ್ನಲ್ಲಿ ವಿಜಯ್ ನಟಿಸಿದ್ದ. ಮಹೇಶ್ ಬಾಬು ಮತ್ತು ವಿಜಯ್ ಇಬ್ಬರೂ ಆತ್ಮೀಯ ಗೆಳೆಯರು ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಮಹೇಶ್ ಬಾಬು ಅಭಿನಯದ ಒಕ್ಕುಡು ತೆಲುಗಿನಲ್ಲಿ ಭರ್ಜರಿ ಯಶಸ್ಸು ಕಂಡ ನಂತರ ತಮಿಳಿನಲ್ಲಿ ಗಿಲ್ಲಿ ಎಂಬ ಹೆಸರಿನಲ್ಲಿ ವಿಜಯ್ ನಟಿಸಿದ್ದರು. ಅಲ್ಲದೇ ಪೋಕಿರಿ ಕೂಡ ಮಹೇಶ್ ಬಾಬುಗೆ ತೆಲುಗಿನಲ್ಲಿ ಭರ್ಜರಿ ಹಿಟ್ ಕೊಟ್ಟಿತ್ತು.
ನಂತರ ಪೋಕಿರಿ ಸಿನಿಮಾವನ್ನು ವಿಜಯ್ ತಮಿಳಿನಲ್ಲಿ ನಟಿಸಿದರು. ಗಿಲ್ಲಿ ಮತ್ತು ಪೋಕಿರಿ ಎರಡೂ ವಿಜಯ್ ಅವರ ಸಿನಿ ವೃತ್ತಿಜೀವನದಲ್ಲಿ ದೊಡ್ಡ ಹಿಟ್ ಆಗಿವೆ. ಮಹೇಶ್ ಬಾಬು 1999ರವರೆಗೆ ಚೆನ್ನೈನಲ್ಲಿಯೇ ಇದ್ದರು. ಹಾಗಾಗಿಯೇ ಮಹೇಶ್ ಬಾಬು ತಮಿಳಿನಲ್ಲಿ ಸುಲಭವಾಗಿ ಮಾತನಾಡುತ್ತಾರೆ. ಎಲ್ಲದಕ್ಕಿಂತ ಮಿಗಿಲಾಗಿ ವಿಜಯ್ ಹಾಗೂ ಮಹೇಶ್ ಬಾಬು ಒಳ್ಳೆಯ ಸ್ನೇಹಿತರು. (ಇನ್ಸ್ಟಾಗ್ರಾಮ್/ಫೋಟೋ)