Mahesh Babu-SSMB28: ಡೈರೆಕ್ಟರ್ ತ್ರಿವಿಕ್ರಮ್ ಜೊತೆ ಮಹೇಶ್ ಬಾಬು ಡಿನ್ನರ್ ಪಾರ್ಟಿ
Mahesh Babu | SSMB28: ಸೂಪರ್ಸ್ಟಾರ್ ಮಹೇಶ್ ಬಾಬು ಇತ್ತೀಚೆಗಷ್ಟೇ ಸರ್ಕಾರ ವಾರಿ ಪಟ ಚಿತ್ರದ ಮೂಲಕ ಭಾರೀ ಸದ್ದು ಮಾಡಿದ್ರು. ಒಳ್ಳೆ ನಿರೀಕ್ಷೆಗಳ ನಡುವೆ ಬಂದ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಅವರು ತಮ್ಮ ಮುಂದಿನ ಚಿತ್ರವನ್ನು ತ್ರಿವಿಕ್ರಮ್ ಅವರ ಜೊತೆ ಮಾಡ್ತಿದ್ದು, ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರದ ಮೊದಲ ಶೆಡ್ಯೂಲ್ ಕಂಪ್ಲೀಟ್ ಆಗಿದೆ.
ಮಹೇಶ್ ಬಾಬು ತಂದೆ ಕೃಷ್ಣ ಅವರ ಹಠಾತ್ ನಿಧನದಿಂದ ಈ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿತ್ತು. ಈ ಚಿತ್ರದ ತಂಡ ಮ್ಯೂಸಿಕ್ ಸಿಟ್ಟಿಂಗ್ ಗಾಗಿ ದುಬೈಗೆ ತೆರಳಿದೆಯಂತೆ. ನಾಯಕ ಮಹೇಶ್ ಬಾಬು ಜೊತೆಗೆ ನಿರ್ದೇಶಕ ತ್ರಿವಿಕ್ರಮ್, ನಿರ್ಮಾಪಕ ವಂಶಿ, ಸಂಗೀತ ನಿರ್ದೇಶಕ ಥಮನ್ ಕೂಡ ಹೋಗಿದ್ದಾರೆ.
2/ 8
ಮಹೇಶ್ ಬಾಬು ಕುಟುಂಬ ಇತ್ತೀಚೆಗೆ ನಿರ್ದೇಶಕ ತ್ರಿವಿಕ್ರಮ್ ಜೊತೆಗೆ ಡಿನ್ನರ್ ಮಾಡುತ್ತಿದ್ದಾರೆ. ಇದೀಗ ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಡಿನ್ನರ್ ಪಾರ್ಟಿಯಲ್ಲಿ ಮಹೇಶ್ ಜೊತೆಗೆ ತ್ರಿವಿಕ್ರಮ್, ತಮನ್, ನಮ್ರತಾ ಮತ್ತು ಮೆಹರ್ ರಮೇಶ್ ಭಾಗವಹಿಸಿದ್ದರು.
3/ 8
ಈ ಸಿನಿಮಾದ ರಿಲೀಸ್ ಬಗ್ಗೆ ಲೇಟೆಸ್ಟ್ ಅಪ್ ಡೇಟ್ ಬಂದಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಚಿತ್ರವನ್ನು ಮುಂಬರುವ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಆಗಸ್ಟ್ 11, 2023 ರಂದು ಬಿಡುಗಡೆ ಮಾಡಲು ನಿರ್ದೇಶಕರು ಮತ್ತು ನಿರ್ಮಾಪಕರು ಪ್ಲಾನ್ ಮಾಡಿದ್ದಾರಂತೆ
4/ 8
SSMB28 ರ ಶೂಟಿಂಗ್ ಹೈದರಾಬಾದ್ನಲ್ಲಿ ಹೆಚ್ಚು ನಡೆಯಲಿದೆ. ಹೈದರಾಬಾದ್ನ ಹೊರವಲಯದಲ್ಲಿರುವ ಖಾನ್ಪುರದಲ್ಲಿ ಚಿತ್ರೀಕರಣ ನಡೆಯಲಿದೆ. ಕಾಲಿನ ಗಾಯದಿಂದ ಚೇತರಿಸಿಕೊಂಡಿರುವ ಪೂಜಾ ಹೆಗಡೆ ಕೂಡ ಈ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.
5/ 8
ಈ ಸಿನಿಮಾದಲ್ಲಿ ಪೂಜಾ ಜೊತೆಗೆ ಮತ್ತೊಬ್ಬ ನಾಯಕಿ ಕೂಡ ಸಿನಿಮಾಗೆ ಎಂಟ್ರಿ ಕೊಡ್ತಾರೆ ಎನ್ನುವ ಮಾತು ಕೇಳಿ ಬರ್ತಿದೆ. ತೇಜ ನಿರ್ದೇಶನದ ದಗ್ಗುಬಾಟಿ ಅಭಿರಾಮ್ ಅಭಿನಯಿಸುತ್ತಿರುವ ನಟಿ ಗೀತಿಕಾ ತಿವಾರಿ ಮಹೇಶ್ ಬಾಬು ಜೊತೆ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬರ್ತಿದೆ.
6/ 8
ಈ ಚಿತ್ರದ ಮೊದಲ ಶೆಡ್ಯೂಲ್ ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಪ್ರಾರಂಭವಾಯಿತು. ಒಂದು ವಾರ ಚಿತ್ರೀಕರಣ ಮಾಡಿದರು. ಈ ಮೊದಲ ಶೆಡ್ಯೂಲ್ನಲ್ಲಿ ಕೆಲವು ಹೈ ಆಕ್ಟೇನ್ ಎಪಿಕ್ ಆಕ್ಷನ್ ಸೀಕ್ವೆನ್ಸ್ಗಳನ್ನು ಚಿತ್ರೀಕರಿಸಲಾಗಿದೆ.
7/ 8
ಸದ್ಯದಲ್ಲೇ 2ನೇ ಶೆಡ್ಯೂಲ್ ಆರಂಭವಾಗಲಿದೆ ಎಂದು ನಿರ್ಮಾಪಕ ನಾಗವಂಶಿ ಹೇಳಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಹಾಕಲಾಗಿರುವ ಅದ್ಧೂರಿ ವಿಶೇಷ ಸೆಟ್ನಲ್ಲಿ ಈ ಎರಡನೇ ಶೆಡ್ಯೂಲ್ ಶೂಟಿಂಗ್ ರೆಸ್ಯೂಮ್ ಆಗಲಿದೆಯಂತೆ.
8/ 8
ಸುಮಾರು 12 ವರ್ಷಗಳ ನಂತರ ತ್ರಿವಿಕ್ರಮ್ ಮಹೇಶ್ ಬಾಬು ಜೊತೆ ಈ ಸಿನಿಮಾ ಮಾಡುತ್ತಿರುವುದು ಎಲ್ಲರ ನಿರೀಕ್ಷೆ ಹೆಚ್ಚಿಸಿದೆ