ಸಮಂತಾ ಶಿವನ ಭಕ್ತೆಯಾಗಿದ್ದಾರೆ. ಈ ಹಬ್ಬವನ್ನು ಆಚರಿಸಲು ಪ್ರತಿ ವರ್ಷ ಕೊಯಮತ್ತೂರ್ಗೆ ಹೋಗುತ್ತಾರಂತೆ. ಅಷ್ಟೇ ಅಲ್ಲದೇ ದಕ್ಷಿಣದ ಅನೇಕ ತಾರೆಯರು ಸಹ ಸದ್ಗುರು ಸ್ಥಾಪಿಸಲ್ಪಟ್ಟ ಆದಿಯೋಗಿಯಲ್ಲಿ ನಂಬಿಕೆಯನ್ನು ಹೊಂದಿದ್ದಾರೆ. ಸಮಂತಾ ಅವರು ಲಕ್ಷ್ಮಿ ಮಂಚು, ಫ್ಯಾಷನ್ ಡಿಸೈನರ್ ಮತ್ತು BFF ಗಳಾದ ಶಿಲ್ಪಾ ರೆಡ್ಡಿ ಮತ್ತು ರಾಕುಲ್ ಪ್ರೀತ್ ಸಿಂಗ್ ಅವರೊಂದಿಗೆ . 2021ರಲ್ಲಿ ಕೊಯಮತ್ತೂರಿನಲ್ಲಿ ಶಿವರಾತ್ರಿ ಆಚರಿಸಿದ್ರು.
ಕಂಗನ್ ರನೌತ್ ಕೂಡ ಶಿವನ ಭಕ್ತೆ ಆಗಿದ್ದಾರೆ. ಕಂಗನಾ ಆಗಾಗ್ಗೆ ಉಜ್ಜಯಿನಿಯ ಮಹಾಕಾಲ್ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ಅವರು ಪ್ರತಿದಿನ ಮುಂಜಾನೆ 4 ಗಂಟೆಗೆ ನಡೆಯುವ ಭಸ್ಮ ಆರತಿಯಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವು ವರ್ಷಗಳ ಹಿಂದೆ ಕಂಗನಾ ಉಜ್ಜಯಿನಿಯ ಮಂಗಳನಾಥ ದೇವಸ್ಥಾನದಲ್ಲಿ ಭಾತ್ ಪೂಜೆ ನಡೆಸಿದ್ದರು. ಜೊತೆಗೆ 112 ಎತ್ತರದ ಆದಿಯೋಗಿ ದೇಗುಲಕ್ಕೂ ಭೇಟಿ ನೀಡಿದ್ರು. ಕಳೆದ ವರ್ಷ ಅವರು ಸದ್ಗುರುಗಳ ಇಶಾ ಸೆಂಟರ್ ಆಯೋಜಿಸಿದ್ದ ಮಹಾ ಶಿವರಾತ್ರಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.