ಪ್ರೀತಿ ಕುರುಡು ಅಂತಾರೆ. ಕಳೆದ ಒಂದು ವರ್ಷದಲ್ಲಿ ಭಾರಿ ಚರ್ಚೆಯಾಗಿರುವ ತಮಿಳುನಾಡಿನ ಸೆಲೆಬ್ರೆಟಿ ಜೋಡಿಯಾದ ಮಹಾಲಕ್ಷ್ಮಿ ಮತ್ತು ರವೀಂದರ್ ದಂಪತಿಯನ್ನು ನೋಡಿದರೆ ಈ ವಿಷಯ ನಿಜವೇ ಅನ್ನಿಸುತ್ತದೆ. ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರನ್ ಚಂದ್ರಶೇಖರನ್ ಮದುವೆಯಾಗಿ ಹಲವು ತಿಂಗಳುಗಳಾಗಿವೆ. ಆದರೆ ಈ ಜೋಡಿ ಆಗಾಗ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ ಮಹಾಲಕ್ಷ್ಮಿ ಅವರು ತಮ್ಮ ಪತಿ ರವೀಂದರ್ ಬಗ್ಗೆ ಮಾಡಿದ ಕಾಮೆಂಟ್‌ಗಳು ವೈರಲ್ ಆಗುತ್ತಿವೆ.
ಭಾರಿ ಪರ್ಸನಾಲಿಟಿ ಹೊಂದಿರುವ ಗಂಡ,ತಳ್ಳನೆಯ ಸುಂದರವಾದ ಮಹಾಲಕ್ಷ್ಮಿ. ಈ ದಂಪತಿಯನ್ನು ಅಕ್ಕಪಕ್ಕದಲ್ಲಿ ನಿಲ್ಲಿಸಿ ನೋಡಿದ್ರೆ ನಿಜವಾದ ದಾಂಪತ್ಯ ಶಾರೀರಿಕವಲ್ಲ, ಮಾನಸಿಕವಾಗಿ ಇರುತ್ತದೆ ಎಂಬುದು ನಿಜ ಎನ್ನಿಸಬಹುದು. ಈ ಸಂದರ್ಭದಲ್ಲಿ ಪತಿ ರವೀಂದ್ರನ ಬಗ್ಗೆ ಮನಸಾರೆ ಮಾತನಾಡಿರುವ ಮಹಾಲಕ್ಷ್ಮಿ, ತಮ್ಮ ಗಂಡನನನ್ನು ನನ್ನ ಶಕ್ತಿ ಮತ್ತು ದೌರ್ಬಲ್ಯ ಎಂದಿರುವ ಮಹಾಲಕ್ಷ್ಮಿ ಭಾವುಕರಾದ್ದಾಗಿದ್ದಾರೆ. (ಇನ್‌ಸ್ಟಾಗ್ರಾಮ್/ಫೋಟೋ)