ತನ್ನ ಮೊದಲ ಪತಿ ಅನಿಲ್ಗೆ ಅಕ್ರಮ ಸಂಬಂಧವಿದ್ದು, ತನಗೆ ಕಿರುಕುಳ ನೀಡ್ತಿದ್ದಾರೆ ಎಂದು ಮಹಾಲಕ್ಷ್ಮಿ ಆರೋಪಿಸಿದ್ದರು. 2019ರಲ್ಲಿ ನಟಿ ಮೊದಲ ಮದುವೆಯನ್ನು ಮುರಿದುಕೊಳ್ಳಲು ಇದೇ ಕಾರಣವಾಗಿದ್ದು, ಮತ್ತೊಂದೆಡೆ ನಟ ಈಶ್ವರ್ ರಘುನಾಥ್ ಜೊತೆ ಮಹಾಲಕ್ಷ್ಮಿಗೆ ಅನೈತಿಕ ಸಂಬಂಧವಿದೆ ಎಂದು ಅನಿಲ್ ಆರೋಪಿಸಿದ್ರು. ಆದರೆ, ಮಹಾಲಕ್ಷ್ಮಿ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ರು. ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು.