Mahalakshmi-Ravinder: ನೀನೂ ಚಂದ, ಲೈಫೂ ಚಂದ! ಗಂಡನ ಬಾಯ್ತುಂಬ ಹೊಗಳಿದ ಮಹಾಲಕ್ಷ್ಮಿ
ಲೈಫ್ ನಿನ್ನಷ್ಟೇ ಚಂದ ಎಂದು ಮಹಾಲಕ್ಷ್ಮಿ ಗಂಡನ ಮುಕ್ತವಾಗಿ ಹೊಗಳಿದ್ದಾರೆ. ಹೊಸ ಫೋಟೊ ಕೂಡಾ ಶೇರ್ ಮಾಡಿದ್ದಾರೆ.
1/ 8
ಕಾಲಿವುಡ್ ಜೋಡಿ ಮಹಾಲಕ್ಷ್ಮೀ ಹಾಗೂ ರವೀಂದ್ರನ್ ಅವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಜೋಡಿ ಮದುವೆಯಾದಾಗ ದೇಶಾದ್ಯಂತ ಸುದ್ದಿಯಾಗಿದ್ದರು.
2/ 8
ಬ್ಯಾಕ್ ಟು ಬ್ಯಾಕ್ ಟ್ರೋಲಿಂಗ್ ನಂತರವೂ ಈ ಜೋಡಿ ದೃಢವಾಗಿ ಜೊತೆಗೆ ನಿಂತರು. ಈಗಲೂ ಇಬ್ಬರೂ ಹಲವು ಬಾರಿ ಟ್ರೋಲ್ ಆಗುತ್ತಲೇ ಇರುತ್ತಾರೆ.
3/ 8
ಈಗ ಮಹಾಲಕ್ಷ್ಮಿ ಅವರು ಪತಿಯೊಂದಿಗೆ ಚೆನ್ನೈನಲ್ಲಿರುವ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಇದರೊಂದಿಗೆ ವಿಶೇಷವಾದ ಒಂದು ಕ್ಯಾಪ್ಶನ್ ಕೂಡಾ ಕೊಟ್ಟಿದ್ದಾರೆ.
4/ 8
ಬದುಕು ನಿಮ್ಮ ಹಾಗೆಯೇ ಸುಂದರ ಎಂದು ಗಂಡನ ಬಾಯ್ತುಂಬ ಹೊಗಳಿದ್ದಾರೆ ನಟಿ. ಆದರೆ ನೆಟ್ಟಿಗರು ಯಾರು ಚಂದ? ಲೈಫೋ ಗಂಡನೋ ಎಂದು ನಟಿಯ ಕಾಲೆಳೆಯುತ್ತಿದ್ದಾರೆ.
5/ 8
ಫೋಟೋದಲ್ಲಿ ಮಹಾಲಕ್ಷ್ಮಿ ಹಾಗೂ ರವೀಂದ್ರ ಇಬ್ಬರೂ ಬ್ಲ್ಯಾಕ್ ಔಟ್ಫಿಟ್ನಲ್ಲಿ ಕಂಡು ಬಂದಿದ್ದಾರೆ. ಮ್ಯಾಚಿಂಗ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ.
6/ 8
ರವೀಂದ್ರ ಅವರೂ ಕೂಡಾ ಪತ್ನಿಯ ಶೂಟಿಂಗ್ ಸೆಟ್ಗೆ ಅವರಿಗೆ ಆಹಾರ ತೆಗೆದುಕೊಂಡು ಹೋಗುವುದು, ಡಿನ್ನರ್ಗೆ ಕರೆದೊಯ್ಯುತ್ತಾ ಜಾಲಿಯಾಗಿದ್ದಾರೆ.
7/ 8
ಈ ಜೋಡಿ ಹಬ್ಬಗಳನ್ನೂ ಜೊತೆಯಾಗಿ ಆಚರಿಸುತ್ತಾರೆ. ತಡರಾತ್ರಿ ಡಿನ್ನರ್, ಬಿರಿಯಾನಿ ತಿನ್ನುವ ಫೋಟೋಸ್ ಇವೆಲ್ಲವನ್ನೂ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಾರೆ.
8/ 8
ಮಹಾಲಕ್ಷ್ಮಿ ಕಿರುತೆರೆ ನಟಿಯಾಗಿದ್ದು ಈಗಾಗಲೇ ಮದುವೆಯಾಗಿ ಒಬ್ಬ ಮಗನೂ ಇದ್ದಾನೆ. ಇದು ಅವರಿಗೆ ಎರಡನೇ ಮದುವೆ ಆಗಿದೆ.
First published: