ಕಾಲಿವುಡ್ನ ಖ್ಯಾತ ನಟ ವಿಶಾಲ್ ಅವರು ತಮ್ಮ ನಿರ್ಮಾಣ ಕಂಪನಿ ವಿಶಾಲ್ ಫಿಲ್ಮ್ ಫ್ಯಾಕ್ಟರಿಯ ಸಿನಿಮಾ ನಿರ್ಮಾಣಕ್ಕಾಗಿ ಗೋಪುರಂ ಫಿಲ್ಮ್ಸ್‌ನ ಅನ್ಬುಚೆಜಿಯನ್ ಅವರಿಂದ ಒಟ್ಟು 21.29 ಕೋಟಿ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದರು. ಈ ಮೊತ್ತ ಇನ್ನೂ ಪಾವತಿಸಲು ಬಾಕಿ ಇದ್ದಾಗಲೇ ಲೈಕಾ ಪ್ರೊಡಕ್ಷನ್ಸ್ ಇದಕ್ಕೆ ಎಂಟ್ರಿ ಕೊಟ್ಟಿದೆ. ಅನ್ಬುಚೆಜಿಯನ್‌ಗೆ ಹಣವನ್ನು ಲೈಕಾ ಪಾವತಿ ಮಾಡಿತು. ಈ ನಿಟ್ಟಿನಲ್ಲಿ ವಿಶಾಲ್ ಮತ್ತು ಲೈಕಾ ನಡುವೆ ಒಪ್ಪಂದ ನಡೆದಿತ್ತು. ಸಂಪೂರ್ಣ ಸಾಲದ ಮೊತ್ತವನ್ನು ಮರುಪಾವತಿ ಮಾಡುವವರೆಗೆ ಎಲ್ಲಾ ವಿಶಾಲ್ ಫಿಲ್ಮ್ ಕಂಪನಿ ನಿರ್ಮಾಣದ ಹಕ್ಕುಗಳನ್ನು ಲೈಕಾ ಪಡೆಯುತ್ತದೆ ಎಂದು ಒಪ್ಪಂದವಾಗಿತ್ತು.
ನಾನು ಲೈಕಾ ಪ್ರೊಡಕ್ಷನ್ಸ್ನಿಂದ ಸಾಲ ಪಡೆದಿಲ್ಲ ಎಂದು ವಿಶಾಲ್ ವಾದಿಸಿದ್ದಾರೆ. ಹೆಚ್ಚುವರಿಯಾಗಿ ಲೈಕಾ ಕೇಸ್ ದಾಖಲಿಸಿದ ಕಾರಣವನ್ನು ವಿರೋಧಿಸಿದ್ದಾರೆ. ಲೈಕಾ ಅವರ ಕೆಲವು ವಾದಗಳು ಸ್ಥಿರವಾಗಿಲ್ಲ ಎಂದು ಹೇಳಲಾಗಿದೆ. ಒಪ್ಪಂದವನ್ನು ಉಲ್ಲೇಖಿಸಿದ ಲೈಕಾ ಪ್ರೊಡಕ್ಷನ್ಸ್ ಕಂಪನಿ ವಿಶಾಲ್ ಅವರ ಸಾಲದ ಖಾತೆಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಪತ್ರಿಕೆಗಳಲ್ಲಿ ಸ್ಪಷ್ಟವಾಗಿ ಹೇಳಿದೆ. ಇದಕ್ಕೆ ಬದಲಾಗಿ, ವಿಶಾಲ್ ಲೈಕಾಗೆ ಮರುಪಾವತಿ ಮಾಡಬೇಕಾಗಿತ್ತು ಎಂದು ತಿಳಿಸಿದೆ.