Vijay: ರೀಲ್ ಹೀರೋಗಳು ತೆರಿಗೆ ಕಟ್ಟಲು ಹಿಂಜರಿಯುತ್ತಾರೆ ಎಂದು ತಲಪತಿ ವಿಜಯ್ಗೆ ಛೀಮಾರಿ ಹಾಕಿದ ಮದ್ರಾಸ್ ಹೈ ಕೋರ್ಟ್
ತಮಿಳಿನ ಖ್ಯಾತ ನಟ ವಿಜಯ್ ಅವರಿಗೆ ಮದ್ರಾಸ್ ಹೈ ಕೋರ್ಟ್ ಶಾಕ್ ಕೊಟ್ಟಿದೆ. ಕಾಲಿವುಡ್ನಲ್ಲಿ ತಲಪತಿ ಎಂದೇ ಖ್ಯಾತರಾಗಿರುವ ನಟ ವಿಜಯ್ ಅವರಿಗೆ ಒಂದು ಲಕ್ಷ ದಂಡ ವಿಧಿಸುವುದರೊಂದಿಗೆ ಕಠಿಣ ಪದಗಳ ಮೂಲಕ ಟೀಕಿಸಿದೆ. (ಚಿತ್ರಗಳು ಕೃಪೆ: ಟ್ವಿಟರ್)
ನಟ ವಿಜಯ್ ಅವರಿಗೆ ಮದ್ರಾಸ್ ಹೈ ಕೋರ್ಟ್ ಒಂದು ಲಕ್ಷ ದಂಡ ವಿಧಿಸುವುದರೊಂದಿಗೆ ರೀಲ್ ಹೀರೋಗಳು ತೆರೆಗೆ ಕಟ್ಟಲು ಹಿಂದೇಟು ಹಾಕುತ್ತಾರೆ ಎಂದು ಟೀಕಿಸಿದೆ.
2/ 8
ಅಷ್ಟಕ್ಕೂ ವಿಜಯ್ ಅವರಿಗೆ ಮದ್ರಾಸ್ ಹೈಕೋರ್ಟ್ ದಂಡ ವಿಧಿಸಲು ಕಾರಣವೇನು ಅಂತೀರಾ..?
3/ 8
ಸಿನಿಮಾಗಳ ಮೂಲಕ ಕೋಟಿ ಕೋಟಿ ದುಡಿಯುವ ವಿಜಯ್ ಅವರು ಇಂಗ್ಲೆಂಡ್ನಿಂದ 2012ರಲ್ಲಿ ಐಷಾರಾಮಿ ಕಾರನ್ನು ಆಮದು ಮಾಡಿಕೊಂಡಿದ್ದರು. ಅದಕ್ಕೆ ನಿಯಮದಂತೆ ಪ್ರವೇಶ ತೆರಿಗೆ ಕೊಡಬೇಕಿತ್ತು. ಆದರೆ ಲಕ್ಷಗಳಲ್ಲಿ ಕಟ್ಟಬೇಕಿದ್ದ ತೆರಿಗೆಯನ್ನು ಕಟ್ಟಲು ವಿರೋಧ ವ್ಯಕ್ತಪಡಿಸಿದ್ದರು.
4/ 8
3 ಕೋಟಿಗೂ ಅಧಿಕ ಬೆಲೆಯ ಕಾರು ಖರೀದಿಸಿದ್ದ ನಟ ಲಕ್ಷಗಳಲ್ಲಿ ತೆರಿಗೆ ಹಣ ಕಟ್ಟಲು ಹಿಂದೇಟು ಹಾಕಿದ್ದರು. ಸಾಲದಕ್ಕೆ ತೆರಿಗೆ ವಿನಾಯಿತಿ ನೀಡಬೇಕೆಂದು ನ್ಯಾಯಾಲಯದ ಮೆಟ್ಟಿಲೇರಿದ್ದರು.
5/ 8
ಆಗಿನಿಂದ ನ್ಯಾಯಾಲಯದಲ್ಲಿದ್ದ ಈ ಪ್ರಕರಣಕ್ಕೆ ಈ ಅಂತ್ಯ ಹಾಡಲಾಗಿದೆ. ಈ ಪ್ರಕರಣದಲ್ಲಿ ವಿಜಯ್ ಅವರಿಗೆ ಒಂದು ಲಕ್ಷ ದಂಡ ವಿಧಿಸಿದೆ ಮದ್ರಾಸ್ ಹೈ ಕೋರ್ಟ್.
6/ 8
ರೀಲ್ ಹೀರೋಗಳು ಅಂದರೆ ತೆರೆ ಮೇಲೆ ನಾಯಕನಾಗಿ ಕಾಣಿಸಿಕೊಳ್ಳುವ ಇವರು ತೆರಿಗೆ ಕಟ್ಟಲು ಹಿಂದೇಟು ಹಾಕುತ್ತಾರೆ ಎಂದು ಹೈಕೋರ್ಟ್ ಟೀಕಿಸಿದೆ.
7/ 8
ಈ ಹಿಂದೆಯೂ ಬೆಂಗಳೂರಿನಲ್ಲಿ ವಿಜಯ್ ಅವರು ಟ್ರಾಫಿಕ್ ನಿಯಮ ಉಲ್ಲಂಘಿಸಿ ಸಂಚಾರಿ ಪೊಲೀಸರಿಂದ ದಂಡ ಹಾಕಿಸಿಕೊಂಡಿದ್ದರು.
8/ 8
ವಿಜಯ್ ಅವರು ಸದ್ಯ ಬೀಸ್ಟ್ ಸಿನಿಮಾದಲ್ಲಿ ನಟಿಸುತ್ತಿದ್ದು, ಅವರ ಹುಟ್ಟುಹಬ್ಬಕ್ಕೆ ಪೋಸ್ಟರ್ ರಿಲೀಸ್ ಆಗಿತ್ತು.