ಮನೀಶಾ ಕೊಯಿರಾಲಾ ಹಿಂದಿ ಚಿತ್ರರಂಗದ ಹಿರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಈ ನಟಿ ತನ್ನ ಸುದೀರ್ಘ ಸಿನಿ ಕೆರಿಯರ್ನಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 52ರ ಹರೆಯದ ನಟಿಯ 'ಶೆಹಜಾದಾ' ಚಿತ್ರ ಕಳೆದ ತಿಂಗಳು ಬಿಡುಗಡೆಯಾಗಿತ್ತು. ಈಗ ಮನಿಶಾ ಕೊಯಿರಾಲಾ ಅವರ 'ಹಿರಾಮಾಂಡಿ' ಶೀಘ್ರದಲ್ಲೇ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. (ಫೋಟೋ ಕೃಪೆ-instagram @m_koirala)
ನೀನಾ ಗುಪ್ತಾಗೆ ಅವರಿಗೆ 63 ವರ್ಷ ವಯಸ್ಸಾಗಿದ್ರು ಈ ನಟಿ ಇನ್ನೂ ಚಲನಚಿತ್ರಗಳಲ್ಲಿ ಸಂಪೂರ್ಣವಾಗಿ ಸಕ್ರಿಯರಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ ನಟಿಯ 'ವಧ್' ಚಿತ್ರ ರಿಲೀಸ್ ಆಗಿತ್ತು. ಕಳೆದ ತಿಂಗಳು ಅವರ ಚಿತ್ರ 'ಶಿವ ಶಾಸ್ತ್ರಿ ಬಲ್ಬೋವಾ' ಬಿಡುಗಡೆ ಆಗಿದೆ. ಈ ನಟಿ ಬ್ಯಾಕ್-ಟು-ಬ್ಯಾಕ್ ಸಿನಿಮಾಗಳು ಹಾಗೂ ವೆಬ್ ಸೀರಿಸ್ನಲ್ಲಿ ಮಾಡುತ್ತಿದ್ದಾರೆ. ನೀನಾ ಗುಪ್ತಾ ಇನ್ನೂ ಫಿಟ್ ಆಗಿದ್ದಾರೆ. (ಫೋಟೋ ಕೃಪೆ-instagram @neena_gupta)