Madhuri Dixit: ನಿರ್ದೇಶನ ಮಾಡೋ ಆಸೆ ಎಂದ ಮಾಧುರಿ ದೀಕ್ಷಿತ್ - ಯಾವಾಗ ಅಂತಿದ್ದಾರೆ ಅಭಿಮಾನಿಗಳು
Bollywood: ಧಕ್ ಧಕ್ ಕರ್ನೇ ಲಗಾ...' ಅಂತ ಪಡ್ಡೆಗಳ ಹೃದಯ ಬಡಿತ ಹೆಚ್ಚಿಸಿದ್ದ ನಟಿ ಮಾಧುರಿ ದೀಕ್ಷಿತ್ 55 ವರ್ಷವಾದರೂ ಸಹ ಇನ್ನು ಯುವತಿಯಂತೆ ಕಾಣುತ್ತಾರೆ. ಈಗಲೂ ಅಭಿಮಾನಿಗಳ ಹೃದಯದ ರಾಣಿಯಾಗಿ ಮೆರೆಯುತ್ತಿದ್ದಾರೆ. ಅದ್ಭುತ ನಟಿ ಹಾಗೂ ನೃತ್ಯಗಾರ್ತಿಯಾಗಿರುವ ಮಾಧುರಿಗೆ ನಿರ್ದೇಶನ ಮಾಡುವ ಆಸೆಯಂತೆ. ಹಾಗಂತ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಮಾಧುರಿ ದೀಕ್ಷಿತ್, ಬಾಲಿವುಡ್ನ ಧಕ್ ಧಕ್ ಹುಡುಗಿ,ಎಂದು ಪ್ರಸಿದ್ದ. ಇತ್ತೀಚೆಗೆ ಪಿಂಕ್ ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಿರ್ದೇಶನ ಮಾಡುವ ಕುರಿತು ಮಾತನಾಡಿದ್ದಾರೆ.
2/ 8
ಮಾಧುರಿ ದೀಕ್ಷಿತ್ ನೆನೆ ತನ್ನ ಇತ್ತೀಚೆಗೆ ಬಿಡುಗಡೆಯಾದ ಸಿಂಗಲ್ 'ತು ಹೈ ಮೇರಾ' ಅನ್ನು ಪ್ರಚಾರ ಮಾಡುತ್ತಿರುವ ಮಾಧುರಿ, ತಮ್ಮ ಮುಂದಿನ ಪ್ರಾಜೆಕ್ಟ್ ಹಾಗೂ ನಿರ್ದೇಶನ ಮಾಡುವ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
3/ 8
ಆಲ್ಬಮ್ಗೆ ಗಾಯಕಿ ಮತ್ತು ಬರಹಗಾರರಾದ ನಂತರ, ಶೀಘ್ರದಲ್ಲೇ ನಿರ್ದೇಶನಕ್ಕೆ ಮುಂದಾಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ನನಗೆ ನಿರ್ದೇಶನ ಮಾಡಬೇಕು ಎಂಬ ಆಸೆ ಇದೆ. ಒಂದು ಹಂತದಲ್ಲಿ ಅದನ್ನೂ ಮಾಡುವ ಎಂದಿದ್ದಾರೆ.
4/ 8
ಆದರೆ ನಾನು ಹೇಳಿದಂತೆ, ಇದೀಗ ನಾನು ಮಕ್ಕಳೊಂದಿಗೆ ಬ್ಯುಸಿಯಾಗಿದ್ದೇನೆ. ನನ್ನ ಕಿರಿಯ ಮಗ ಈಗ ಹನ್ನೊಂದನೇ ತರಗತಿ ಓದುತ್ತಿದ್ದಾನೆ, ಮುಂದಿನ ವರ್ಷ ಅವನು 12 ನೇ ತರಗತಿಯಲ್ಲಿರುತ್ತಾನೆ. ಅವನ ಭವಿಷ್ಯದ ವಿಚಾರವಾಗಿ ಅವನೊಂದಿಗೆ ನಾವು ಹೆಚ್ಚು ಸಮಯ ಇರಬೇಕು ಎಂದು ತಿಳಿಸಿದ್ದಾರೆ.
5/ 8
ಬಹಳಷ್ಟು ವಿಷಯಗಳು ನನ್ನನ್ನು ವಿವಿಧ ದಿಕ್ಕುಗಳಲ್ಲಿ ಎಳೆಯುತ್ತಿವೆ. ಆದರೆ ಎಲ್ಲಾ ವಿಚಾರಗಳು ಸರಿಯಾಗಿ ಒಂದೆಡೆ ನೆಲೆಗೊಂಡ ನಂತರ ಬಹುಶಃ ನಾನು ನಿರ್ದೇಶನ ಅಥವಾ ಬರವಣಿಗೆಯ ಬಗ್ಗೆ ಯೋಚಿಸಬಹುದು. ನಾನು ನಿರ್ದೇಶನ ಮಾಡುವುದೇ ಇಲ್ಲ ಎನ್ನಲಾರೆ ಎಂದು ಹೇಳಿದ್ದಾರೆ.
6/ 8
ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಕರಣ್ ಜೋಹರ್ ನಿರ್ಮಾಣದ ವೆಬ್ ಶೋ ದಿ ಫೇಮ್ ಗೇಮ್ನಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು. "ನಾನು ಫೇಮ್ ಗೇಮ್ನ ಪ್ರತಿಯೊಂದು ಅಂಶವನ್ನು ಇಷ್ಟಪಟ್ಟಿದ್ದಾನೆ, ಏಕೆಂದರೆ ಅದು ಎಲ್ಲದರ ಬಗ್ಗೆ ಮತ್ತು ಬಹಳ ಸಂವೇದನಾಶೀಲ, ನಿಜವಾದ ಮತ್ತು ಪ್ರಾಮಾಣಿಕ ರೀತಿಯಲ್ಲಿ ವಿವರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
7/ 8
ಇದು ಲೈಂಗಿಕತೆ, ಮಾನಸಿಕ ಆರೋಗ್ಯ ಸಮಸ್ಯೆಗಳು, ಲಿಂಗಭೇದಭಾವ, ವಯೋಮಾನದ ಬಗ್ಗೆ ಸಹ ವಿವಿರಿಸುತ್ತದೆ. ಇದು ಎಲ್ಲದರ ಬಗ್ಗೆ ಆದರೆ ನಿಜವಾದ, ಪ್ರಾಮಾಣಿಕ ರೀತಿಯಲ್ಲಿ ಮಾತನಾಡುತ್ತದೆ ಎಂದು ನಟಿ ಹೇಳಿದ್ದಾರೆ.
8/ 8
ಈ ಮಧ್ಯೆ, ಅವರ ಮುಂದಿನ ನಿರ್ಮಾಣದ ಮರಾಠಿ ಚಿತ್ರ ಪಂಚಕ್ ಬಿಡುಗಡೆಗೆ ಸಿದ್ಧವಾಗಿದೆ. "ನಾವು ಯಾವ ದಾರಿಯಲ್ಲಿ ಹೋಗಬೇಕೆಂದು ನೋಡಬೇಕು, ಆದರೆ ಅದು ನಿರ್ಮಾಪಕಿಯಾಗಿ ನನ್ನ ಮುಂದಿನ ಚಿತ್ರವಾಗಿದೆ. ಈಗ ನನ್ನ ಅಮೆಜಾನ್ ಪ್ರೈಮ್ ಚಿತ್ರವೂ ಬರಲಿದೆ. ಈ ವರ್ಷಾಂತ್ಯದೊಳಗೆ ಎಲ್ಲೋ ಸಿನಿಮಾ ತೆರೆಗೆ ಬರಬೇಕು. ನಾವು ಶೂಟಿಂಗ್ ಮುಗಿಸಿದ್ದೇವೆ” ಎಂದು ಮಾಧುರಿ ಹೇಳಿದ್ದಾರೆ.