ಮಾಧುರಿಯನ್ನು ಮೊದಲು ಕಾಶ್ಮೀರದಲ್ಲಿ ಚಿತ್ರನಿರ್ಮಾಪಕ-ನಿರ್ದೇಶಕ ಸುಭಾಷ್ ಘಾಯ್ ನೋಡಿದರು ಮತ್ತು ಅವರನ್ನು ತಮ್ಮ ಚಿತ್ರದ ನಾಯಕಿಯನ್ನಾಗಿ ಮಾಡಿದರು. ಮಾಧುರಿಯ ಪ್ರತಿಭೆಯನ್ನು ತೆರೆಯ ಮೇಲೆ ತರುವಲ್ಲಿ ಸುಭಾಷ್ ಅವರದ್ದು ಪ್ರಮುಖ ಪಾತ್ರವಾಗಿದೆ. ಅವರು 1984ರಲ್ಲಿ ತೆರೆಕಂಡ 'ಅಬೋದ್' ಸಿನಿಮಾದ ಮೂಲಕ ಬಾಲಿವುಡ್ಗೆ ಎಂಟ್ರಿ ನೀಡಿದರು. ಅಂದಿನಿಂದ ಇಂದಿನವರೆಗೂ ಅವರು ಸೌಂದರ್ಯ ದೇವತೆಯಾಗಿ ಮೆರೆಯುತ್ತಿದ್ದಾರೆ.