ಮರಾಠಿ ಬ್ರಾಹ್ಮಣ ಕುಟುಂಬದಲ್ಲಿ ಬೆಳೆದ ಕೇವಲ 16 ವರ್ಷದ ಬಾಲಕಿ ಮನೆಗೆ ರಾಜಶ್ರೀ ಪ್ರೊಡಕ್ಷನ್ಸ್ ಸಿನಿಮಾ ಆಫರ್ ನೀಡಿತು. ಈ ಬಾಲಕಿ 12 ಕ್ಲಾಸ್ ಪರೀಕ್ಷೆ ಬರೆದಿದ್ದರು. ರಜಾ ದಿನಗಳನ್ನು ಆನಂದಿಸುತ್ತಿದ್ದರು. ಮಗಳು ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ಹುಡುಗಿಯ ಕುಟುಂಬದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ರಾಜಶ್ರೀ ಪ್ರೊಡಕ್ಷನ್ ಹೇಗಾದರೂ ಕುಟುಂಬ ಸದಸ್ಯರ ಮನವೊಲಿಸಿತು. ಈ ಸುಂದರ ಹುಡುಗಿ ಬೇರೆ ಯಾರೂ ಅಲ್ಲ ಮಾಧುರಿ ದೀಕ್ಷಿತ್.
'ಅಬೋಧ್' ನಂತರ ಮಾಧುರಿ ಅಭಿನಯದ 'ಸ್ವಾತಿ', 'ಮಾನವ್ ಹತಿಯಾ', 'ಹಿಫಾಜತ್' ಮತ್ತು 'ಉತ್ತರ ದಕ್ಷಿಣ' ಚಿತ್ರಗಳು ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಸೋತಿವೆ. ನಟಿಯ ಆರಂಭಿಕ 5 ಚಿತ್ರಗಳು ಸೋತಿದ್ದವು. ನಂತರ ಅವರು ನಟ ವಿನೋದ್ ಖನ್ನಾ ಅವರೊಂದಿಗೆ 'ದಯಾವನ್' ಚಿತ್ರದಲ್ಲಿ ಕಾಣಿಸಿಕೊಂಡರು. ಅದು ಅವರ ಮೊದಲ ಹಿಟ್ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ತನಗಿಂತ 21 ವರ್ಷದ ಹಿರಿಯ ನಟ ವಿನೋದ್ ಅವರೊಂದಿಗಿನ ಮಾಧುರಿ ರೊಮ್ಯಾನ್ಸ್ ಮಾಡಿದ್ದಾರೆ. ಮಾಧುರಿಯ ಅದೃಷ್ಟ ಈ ಸಿನಿಮಾದಿಂದ ಬದಲಾಗಿದೆ. (ಫೋಟೋ ಕ್ರೆಡಿಟ್ಗಳು: Instagram @shriyasaran11)
ಮದುವೆಯ ನಂತರ ಕಡಿಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ಅವರು ದೀರ್ಘಕಾಲದವರೆಗೆ ರಿಯಾಲಿಟಿ ಡ್ಯಾನ್ಸ್ ಶೋಗಳಿಗೆ ತೀರ್ಪುಗಾರರಾಗಿದ್ದಾರೆ. ಅವರು ತಮ್ಮ ಹಿಂದಿನ ಸರಣಿ ದಿ ಫೇಮ್ ಗೇಮ್ ಮತ್ತು ಮಜಾ ಮಾ ಚಿತ್ರದಲ್ಲಿ ಸವಾಲಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಮಾಧುರಿ ಇಬ್ಬರು ಗಂಡು ಮಕ್ಕಳ ತಾಯಿಯಾಗಿದ್ದರೂ ಸಖತ್ ಫಿಟ್ ಆಗಿದ್ದಾರೆ. Instagram @rishikapoor_forever)