ಅಜಯ್ ಜಡೇಜಾ ರಾಜಮನೆತನಕ್ಕೆ ಸೇರಿದವರು. ಮಾಧುರಿ ಬ್ರಾಹ್ಮಣ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಹೀಗಿರುವಾಗ ಅಜಯ್ ಮನೆಯವರು ಈ ಸಂಬಂಧವನ್ನು ಒಪ್ಪಿರಲಿಲ್ಲ. 1999ರಲ್ಲಿ ಮೊಹಮ್ಮದ್ ಅಜರುದ್ದೀನ್ ಜೊತೆಗೆ ಕ್ರಿಕೆಟಿಗರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ತಪ್ಪಿತಸ್ಥರೆಂದು ಸಾಬೀತಾದಾಗ, ಅಜಯ್ ಜಡೇಜಾ ಕೂಡ ನಿಷೇಧಕ್ಕೊಳಗಾದರು. ಅತ್ತ ಮಾಧುರಿ ಮತ್ತು ಅಜಯ್ ಅವರ ಸಂಬಂಧವು ಕೊನೆಗೊಂಡಿತು.