PHOTOS: ಶುಕ್ರವಾರ(ಜ.11) ದರ್ಶನ ನೀಡಲಿದ್ದಾನೆ ನಿಮ್ಮ ಈ 'ಲಂಬೋದರ'..!

ಲೂಸ್ ಮಾದ ಯೋಗಿ ಅಭಿನಯದ ಔಟ್ ಅಂಡ್ ಔಟ್ ಕಾಮಿಡಿ ಲವ್ ಡ್ರಾಮಾ ಈ 'ಲಂಬೋದರ'. ಈ ಸಿನಿಮಾ ಇದೇ 11ರಂದು ಬಿಡುಗಡೆಯಾಗಲಿದೆ. ಈಗಾಗಲೇ ಸಿಂಗಲ್ ಟೀಸರ್ ಮತ್ತು ವಿಶಿಷ್ಟ ಹಾಡುಗಳಿಂದ ಗಮನ ಸೆಳೆದಿರುವ 'ಲಂಬೋದರ' ಉದ್ಯಮದಲ್ಲಿ ಮತ್ತು ಸಿನಿಪ್ರಿಯರಲ್ಲಿ ವಿಶೇಷವಾದ ಕುತೂಹಲವನ್ನ ಹುಟ್ಟಿಸಿದ್ದಾನೆ. ಕೆ.ಕೃಷ್ಣರಾಜ್ ನಿರ್ದೇಶನ, ವಿಶ್ವೇಶ್ವರ್ ಹಾಗೂ ರಾಘವೇಂದ್ರ ಭಟ್ ನಿರ್ಮಾಣವಿರುವ ಈ ಚಿತ್ರದಲ್ಲಿ ಲೂಸ್ ಮಾದ ಯೋಗಿಗೆ ಆಕಾಂಕ್ಷ ನಾಯಕಿಯಾಗಿ ಕಾಣಿಸಿಕೊಂಡರೆ, ಅಚ್ಯುತ್ ಕುಮಾರ್, ಧರ್ಮಣ್ಣ, ಭೂಮಿಕಾ ಶೆಟ್ಟಿ, ಸಿದ್ದು ಮೂಲಿ ಮನಿ ಸೇರಿದಂತೆ, ಪ್ರತಿಭಾವಂತ ತಾರಾಬಳಗವೇ ಈ ಚಿತ್ರದಲ್ಲಿದೆ. 

  • News18
  • |
First published: