ಸುಮಲತಾ ಅಂಬರೀಶ್: ಮಂಡ್ಯ ಲೋಕಸಭಾ ಚುನಾವಣಾ ಕಣ ರಂಗೇಲು ಮೂಲ ಕಾರಣ ಸುಮಲತಾ ಅಂಬರೀಶ್. ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಮಗ ನಿಖಿಲ್ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧಿಸಿದ್ದರು. ಇವರ ವಿರುದ್ಧ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
2/ 8
ಊರ್ಮಿಳಾ ಮಾತೋಂಡ್ಕರ್: ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಮಾರ್ಚ್ 27ರಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ಸೇರಿದ ನಂತರ ಮುಂಬೈ ಉತ್ತರದಿಂದ ಅವರು ಸ್ಪರ್ಧಿಸಲಿದ್ದಾರೆ ಎನ್ನುವ ಮಾತು ಜೋರಾಗಿತ್ತು. ಅಂತೆಯೇ ಅವರು ಮುಂಬೈ ಉತ್ತರದಿಂದ ಕಣಕ್ಕೆ ಇಳಿದಿದ್ದರು. ಬಿಜೆಪಿ ಸಂಸದ ಗೋಪಾಲ್ ಶೆಟ್ಟಿಗೆ ಪೈಪೋಟಿ ನೀಡಿದ್ದಾರೆ.
3/ 8

4/ 8
ನುಸ್ರತ್ ಜಹಾನ್: ಮಾಡೆಲ್ ಹಾಗೂ ನಟಿ ನುಸ್ರತ್ ಜಹಾನ್ ಟಿಎಂಸಿ ಅಭ್ಯರ್ಥಿಯಾಗಿ ಬಸಿರ್ಹಟ್ನಿಂದ ಕಣಕ್ಕೆ ಇಳಿದಿದ್ದರು. ರಾಜ್ ಚಕ್ರವರ್ತಿ ಅವರ ‘ಶೋತ್ರು’ ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟರು. ಇವರು ಚುನಾವಣಾ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಭಾರೀ ಸುದ್ದಿಯಾಗಿತ್ತು.
5/ 8
ಮಿಮಿ ಚಕ್ರವರ್ತಿ: 2008ರಿಂದ ಬೆಂಗಾಳಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ಮಿಮಿ ಚಕ್ರವರ್ತಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಜಾಧವ್ಪುರ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಇವರು ಕಣಕ್ಕೆ ಇಳಿದಿದ್ದರು.
6/ 8
ಪ್ರಕಾಶ್ ರಾಜ್: ವಿಲನ್ ಪಾತ್ರಗಳ ಮೂಲಕವೇ ಹೆಚ್ಚು ಗಮನ ಸೆಳೆದ ನಟ ಪ್ರಕಾಶ್ ರಾಜ್ ಬೆಂಗಳೂರು ಕೇಂದ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಿರಂತರವಾಗಿ ಅವರು ಹರಿಹಾಯ್ದಿದ್ದರು.
7/ 8
ದೇವ್: ಬೆಂಗಾಳಿ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ದೇವ್ ಕಳೆದ ಬಾರಿ ಸಂಸದನಾಗಿ ಆಯ್ಕೆಯಾಗಿದ್ದರು. ಈ ಬಾರಿಯೂ ಅವರು ಟಿಎಂಸಿಯಿಂದ ಸ್ಪರ್ಧೆ ಮಾಡಿದ್ದಾರೆ.
8/ 8
ಪವನ್ ಕಲ್ಯಾಣ್: ಜನಸೇನಾ ಪಕ್ಷದ ಮುಖ್ಯಸ್ಥ ಹಾಗೂ ಟಾಲಿವುಡ್ ನಟ ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಗಾಜುವಾಕ ಮತ್ತು ಭೀಮಾವರಂ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು, ಗೆಲುವು ಖಚಿತ ಎನ್ನಲಾಗಿದೆ.