ಲೀಸಾ ರೇ ಈ ಹೆಸರು ಕನ್ನಡಿಗರಿಗಂತು ಚಿರಪರಿಚಿತ. ಏಕೆಂದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಯುವರಾಜ ಚಿತ್ರದಲ್ಲಿ ಯುವರಾಣಿಯಾಗಿ ಕಾಣಿಸಿಕೊಂಡಿದ್ದರು.
2/ 13
ಆ ಬಳಿಕ ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ನತ್ತ ಮುಖ ಮಾಡಿದ ಚೆಲುವೆ ಮತ್ತೆ ಸುದ್ದಿಯಾಗಿದ್ದು ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯ ಮೂಲಕ.
3/ 13
ಹೌದು, ಬಣ್ಣದ ಲೋಕದಲ್ಲಿ ಮಿಂಚುವ ತಾರೆಯಾಗಿ ಕಂಗೊಳಿಸುತ್ತಿದ್ದ ಲೀಸಾ ರೇ ಬೆನ್ನ ಹಿಂದೆ ಕಗ್ಗತ್ತಲಿನ ಕಾರ್ಮೋಡವೊಂದು ಅಡಗಿ ಕೂತಿತ್ತು. ಆರಂಭದಲ್ಲಿ ಉಂಟಾಗಿದ್ದ ಅನಾರೋಗ್ಯದ ಬಗ್ಗೆ ವೈದ್ಯರಲ್ಲಿ ಪರೀಕ್ಷಿಸಿದಾಗ ಸಾಮಾನ್ಯ ಕ್ಯಾನ್ಸರ್ ಆಗಿತ್ತು. ಚಿಕಿತ್ಸೆ ಮೂಲಕ ಈ ಕಾಯಿಲೆಯಿಂದ ಪಾರಾಗಿದ್ದೆ.
4/ 13
ಆದರೆ ವಿವಾಹವಾಗಿ ಒಂದು ತಿಂಗಳಲ್ಲೇ ಮತ್ತೆ ಮಾರಕ ಮಹಾಮಾರಿ ಮರುಕಳಿಸಿತು. ಇನಿಯನೊಂದಿಗೆ ದಾಂಪತ್ಯ ಜೀವನದ ರಸ ನಿಮಿಷಗಳನ್ನು ಆರಂಭಿಸುವ ಮೊದಲೇ ಕ್ಯಾನ್ಸರ್ ಎದುರಿಗೆ ಬಂದು ನಿಂತಿತು.
5/ 13
ಏಕೆಂದರೆ ನನಗೆ ಕ್ಯಾನ್ಸರ್ ಫಸ್ಟ್ ಸ್ಟೇಜ್ನಲ್ಲಿದೆ ಎಂದು ತಿಳಿದಾಗ ನಾನು ಸಿಂಗಲ್ ಆಗಿದ್ದೆ. ಚಿಕಿತ್ಸೆಯ ಮೂಲಕ ಗುಣಮುಖಳಾಗಿದ್ದೆ. ಹೀಗಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆ.
6/ 13
ಈ ವೇಳೆ ನನಗೆ ಏನು ಮಾಡಬೇಕು ಎಂಬುದೇ ತೋಚಲಿಲ್ಲ. ಕ್ಯಾನ್ಸರ್ ವಿಷಯ ಹೇಳಿದ್ರೆ ಅದು ನಮ್ಮ ವೈವಾಹಿಕ ಜೀವನದ ಮೇಲೆ ಪ್ರಭಾವ ಬೀರಬಹುದು ಎಂದು ನಾನು ಗೆಳೆಯನಿಂದ ಈ ವಿಷಯ ಮುಚ್ಚಿಟ್ಟಿದ್ದೆ.
7/ 13
ಒಂದೆಡೆ ಜೊತೆಗಾರನಿದ್ದರೂ ನನಗೆ ಏಕಾಂಗಿಯಾದ ಅನುಭವ. ಏನು ಮಾಡಬೇಕೆಂದು ಅರ್ಥವಾಗುತ್ತಿರಲಿಲ್ಲ. ನಮ್ಮ ಪ್ರೀತಿ ಪಾತ್ರರಿಗೆ ದುಃಖದ ವಿಷಯ ಹೇಳಿದ್ರೆ ಎಲ್ಲಿ ನೋವಾಗುತ್ತೋ ಎಂಬ ಭಯ ನನ್ನಲ್ಲಿ.
8/ 13
ಜೀವನದಲ್ಲಿ ಅನೇಕ ಏರಿಳಿತವನ್ನು ನೋಡಿದ್ದ ಲೀಸಾ ರೇ ಅವರು ಅತ್ತ ಕ್ಯಾನ್ಸರ್ ವಿರುದ್ಧ ಕೂಡ ಹೋರಾಡುವ ದೃಢ ಸಂಕಲ್ಪ ಮಾಡಿಕೊಂಡಿದ್ದರು. ಆದರೆ
9/ 13
ಎರಡನೇ ಸುತ್ತಿನ ಕ್ಯಾನ್ಸರ್ ನನ್ನ ಜೀವ ಹಿಂಡಿದಂತಿತ್ತು. ಪತಿ ನನ್ನ ಬೆಂಬಲಕ್ಕೆ ನಿಂತಿದ್ದ. ಅಂತಹ ವ್ಯಕ್ತಿಯೊಬ್ಬರು ನನಗೆ ಸಿಕ್ಕಿದ್ದ. ಮಾರಕ ಕಾಯಿಲೆಯ ನಡುವೆ ನನ್ನನ್ನು ಪ್ರೀತಿಸಿದ. .
10/ 13
ಕ್ಯಾನ್ಸರ್ ವಿರುದ್ಧ ಹೋರಾಡಲು ಆರಂಭಿಸಿದೆ. ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿಕೊಂಡೆ. ದಿನಗಳು ಕಳೆದಂತೆ ನಾನು ಬಳಲುತ್ತಿದ್ದೆ. ನನ್ನ ದೇಹ ನನ್ನ ಕಂಟ್ರೋಲ್ನಲ್ಲಿ ಇರಲಿಲ್ಲ. ಆದರೂ ಸೋಲಲು ನಾನು ತಯಾರಿರಲಿಲ್ಲ.
11/ 13
ಅಂತಿಮವಾಗಿ ನನ್ನನ್ನು ಪರೀಕ್ಷೆಗೆ ಒಳಪಡಿಸಿದಾಗ ವೈದ್ಯರು ಆಶ್ಚರ್ಯಚಕಿತರಾದರು. ಏಕೆಂದರೆ ನಾನು ಮಹಾಮಾರಿಯನ್ನು ಗೆದ್ದಿದ್ದೆ ಎಂದು ಲೀಸಾ ರೇ ತಿಳಿಸಿದರು.
12/ 13
ಅಂತಿಮವಾಗಿ ನನ್ನನ್ನು ಪರೀಕ್ಷೆಗೆ ಒಳಪಡಿಸಿದಾಗ ವೈದ್ಯರು ಆಶ್ಚರ್ಯಚಕಿತರಾದರು. ಏಕೆಂದರೆ ನಾನು ಮಹಾಮಾರಿಯನ್ನು ಗೆದ್ದಿದ್ದೆ ಎಂದು ಲೀಸಾ ರೇ ತಿಳಿಸಿದರು.
13/ 13
ಬಾಲಿವುಡ್ ನಟಿ ಕರೀನಾ ಕಪೂರ್ ಅವರ ರೇಡಿಯೋ ಶೋನಲ್ಲಿ ಮಾತನಾಡಿದ ಯುವರಾಜ ಚಿತ್ರದ ನಾಯಕಿ ತಮ್ಮ ಕ್ಯಾನ್ಸರ್ ವಿರುದ್ಧ ಹೋರಾಟವನ್ನು ನೆನಪಿಸಿಕೊಂಡರು.