Vijay Deverakond: 200 ಕೋಟಿ ತುಂಬಾ ಕಡಿಮೆ ಅಂದಿದ್ದೇಕೆ ಲೈಗರ್ ಸಿನಿಮಾ ಖ್ಯಾತಿಯ ನಟ ವಿಜಯ್ ದೇವರಕೊಂಡ..!
Liger OTT Release: ಟಾಲಿವುಡ್ ರೌಡಿ ಎಂದೇ ಖ್ಯಾತರಾಗಿರುವ ನಟ ವಿಜಯ್ ದೇವರಕೊಂಡ ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅರ್ಜುನ್ ರೆಡ್ಡಿ ಸಿನಿಮಾದ ನಂತರ ವಿಜಯ್ ದೇವರಕೊಂಡ ರಾತ್ರೋರಾತ್ರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು. ಇಂತಹ ನಟ ಈಗ 200 ಕೋಟಿ ತುಂಬಾ ಕಡಿಮೆ ಅಂತ ಟ್ವೀಟ್ ಮಾಡಿದ್ದಾರೆ. ಅಷ್ಟುಕ್ಕೂ ವಿಜಯ್ ಹೀಗೆ ಟ್ವೀಟ್ ಮಾಡಲು ಕಾರಣವೇನು ಅಂತೀರಾ..! ಮುಂದಿದೆ ವಿವರ ಓದಿ. (ಚಿತ್ರಗಳು ಕೃಪೆ: Vijay Deverakonda - Instagram )
ವಿಜಯ್ ದೇವರಕೊಂಡ ಎಂದ ಕೂಡಲೇ ನೆನಪಾಗೋದು ರೌಡಿ ಅನ್ನೋ ಪದ. ಹೌದು ಅಭಿಮಾನಿಗಳು ಅವರನ್ನು ರೌಡಿ ಎಂದೇ ಕರೆಯುತ್ತಾರೆ.
2/ 11
ತಮ್ಮ ಸ್ಟೈಲ್ ಹಾಗೂ ಅಭಿನಯದ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ವಿಜಯ್ ದೇವರಕೊಂಡ ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ.
3/ 11
ಲೈಗರ್ ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ.
4/ 11
ಲೈಗರ್ ಸಿನಿಮಾಗೆ ಚಾರ್ಮಿ, ಕರಣ್ ಜೋಹರ್ ಹಾಗೂ ಪೂರಿ ಜಗನ್ನಾಥ್ ಹಣ ಹೂಡಿದ್ದಾರೆ.
5/ 11
ನಟಿ ಅನನ್ಯಾ ಪಾಂಡೆ ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ.
6/ 11
ವಿಜಯ್ ಹಾಗೂ ಅನನ್ಯಾ ಪಾಂಡೆ ಅಭಿನಯದ ಸಿನಿಮಾ ಲೈಗರ್ ತೆರೆಗೆ ಬರಲು ಸಿದ್ಧವಾಗಿದೆ.
7/ 11
ಇದರ ಬೆನ್ನಲ್ಲೇ ಈಗ ಈ ಸಿನಿಮಾ ಕುರಿತಾಗಿ ಒಂದು ಸುದ್ದಿ ಹರಿದಾಡುತ್ತಿದೆ.
8/ 11
ಅದೇ ಲೈಗರ್ ಸಿನಿಮಾ ಒಟಿಟಿ ಮೂಲಕ ರಿಲೀಸ್ ಆಗಲಿದೆ ಅನ್ನೋದು.
9/ 11
ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ ಒಟಿಟಿಯಲ್ಲಿ ತೆರೆ ಕಾಣಲಿದ್ದು, 200 ಕೋಟಿ ಆಫರ್ ಬಂದಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.
10/ 11
ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ತೆರೆ ಕಾಣಲಿರುವ ಲೈಗರ್ ಒಟಿಟಿ ರಿಲೀಸ್ ಸುದ್ದಿ ಕುರಿತಾಗಿ ವಿಜಯ್ ದೇವರಕೊಂಡ ಸ್ಪಷ್ಟನೆ ನೀಡಿದ್ದಾರೆ.
11/ 11
ಹೌದು, ಟ್ವೀಟ್ ಮಾಡಿರುವ ವಿಜಯ್ ದೇವರಕೊಂಡ, 200 ಕೋಟಿ ತೀರಾ ಕಡಿಮೆ. ಚಿತ್ರಮಂದಿರದಲ್ಲಿ ನಾನು ಅದಕ್ಕಿಂತ ಹೆಚ್ಚು ಗಳಿಸುತ್ತೇನೆ ಎಂದು ತಮ್ಮದೇ ಆದ ರೌಡಿ ಸ್ಟೈಲ್ನಲ್ಲಿ ಪ್ರತಿಕ್ರಿಯಿಸುವ ಮೂಲಕ ಒಟಿಟಿ ರಿಲೀಸ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.