ಸಂದರ್ಶನದಲ್ಲಿ ಮಾತಾಡಿದ್ದ ಯಶ್, 'ನನಗೆ ಯಾವಾಗಲೂ ನಟನಾಗಬೇಕೆಂಬ ಕನಸಿತ್ತು. ನನಗೆ ಬಾಲ್ಯದಿಂದಲೂ ಸೂಪರ್ ಸ್ಟಾರ್ ಆಗಬೇಕೆಂಬ ಆಸೆ ಇತ್ತು. ಶಾಲಾ ದಿನಗಳಲ್ಲಿ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆ ಮತ್ತು ನಟಿಸುತ್ತಿದ್ದೆ. ಆದರೆ, ಆಗ ನನಗೆ ಸ್ಟಾರ್ ಡಮ್ ಏನೆಂದು ತಿಳಿದಿರಲಿಲ್ಲ. ನಾನು ನನ್ನ ಕನಸಿನ ಹಿಂದೆ ಓಡುತ್ತಿದ್ದೆ. ಅಷ್ಟೇ ಅಲ್ಲದೇ ನನ್ನ ಕನಸು ಹಾಗೂ ನನ್ನ ಮೇಲೆ ನನಗೆ ಸಂಪೂರ್ಣ ನಂಬಿಕೆ ಇತ್ತು.
300 ರೂಪಾಯಿ ಜೇಬಿನಲ್ಲಿ ಇಟ್ಟುಕೊಂಡು ಸೂಪರ್ ಸ್ಟಾರ್ ಆಗುವ ಆಸೆಯಿಂದ ಬೆಂಗಳೂರಿಗೆ ಬಂದಿದ್ದೆ ಎಂದು ಯಶ್ ಹೇಳಿದ್ದಾರೆ. ಇದೆಲ್ಲಾ ತುಂಬಾ ಕಷ್ಟ ಅನ್ನೋದು ನನಗೆ ಆಗ ಅರ್ಥವಾಯಿತು. ನಾನು ರಂಗಭೂಮಿಗೆ ಸೇರಿಕೊಂಡ ಬಗ್ಗೆ ನನಗೆ ಸಂತೋಷವಿದೆ. ಅದು ನನಗೆ ನಟನೆ ಬಗ್ಗೆ ಅನೇಕ ವಿಚಾರ ಕಲಿಸಿಕೊಟ್ಟಿದೆ. ನಾನು ವಾಪಸ್ ಮನೆಗೆ ಹೋದ್ರೆ ನನ್ನ ಮನೆಯವರು ನನ್ನನ್ನು ಇಲ್ಲಿಗೆ ಕಳುಹಿಸಲ್ಲ ಅನ್ನೋದು ಗೊತ್ತಿತ್ತು.
ನಂತರ ಬೆನಕ ನಾಟಕ ತಂಡಕ್ಕೆ ಸೇರಿ 50 ರೂಪಾಯಿ ಸಂಬಳಕ್ಕೆ ತೆರೆಮರೆಯಲ್ಲಿ ಕೆಲಸ ಮಾಡ್ತಿದೆ ಎಂದು ಯಶ್ ಹೇಳಿದ್ದಾರೆ. ಈ ಸಮಯದಲ್ಲಿ, ನಾನು ಟೀ ಕೊಡುವುದು ಸೇರಿದಂತೆ ಅನೇಕ ಪ್ರೊಡಕ್ಷನ್ ಕೆಲಸವನ್ನು ಕೂಡ ಮಾಡಿದ್ದೇನೆ. ಜೊತೆಗೆ ಅಲ್ಲಿ ಬಹಳಷ್ಟು ಕಲಿತಿದ್ದೇನೆ ಎಂದ್ರು. 2004 ರಲ್ಲಿ ಅವರು ನಾಟಕದಲ್ಲಿ ಬಲರಾಮನ ಪಾತ್ರವನ್ನು ನಿರ್ವಹಿಸಿದ್ರು, ಇದು ಯಶ್ ನಟನೆ ಗುರುತಿಸಿತು.
ಇನ್ನು ಯಶ್ ನನಗೆ ಟಿವಿಯಲ್ಲಿ ಕೆಲಸ ಮಾಡುವ ಆಸೆ ಇರಲಿಲ್ಲ. ನಾನು ತಕ್ಷಣ ಹೀರೋ ಆಗುತ್ತೇನೆ ಎಂದು ಭಾವಿಸಿದ್ದೆ. ಆದರೆ ಜೀವನವು ಪ್ರತಿ ಕ್ಷಣವೂ ಹೊಸ ಪಾಠಗಳನ್ನು ಕಲಿಸುತ್ತಿತ್ತು. ನಂತರ ನನ್ನ ಮನೆಯವರೂ ಕೂಡ ಬೆಂಗಳೂರಿಗೆ ಬಂದರು. ನಾನು ಮನೆಗೂ ಹಣ ಕೊಡ್ಬೇಕಿತ್ತು. ರಂಗಭೂಮಿ ಹೆಚ್ಚು ಹಣ ಸಂಪಾದಿಸಲು ಆಗದೆ. ನಾನು ಟಿವಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ನನ್ನ ಸಂಪಾದನೆಯ 1 ಭಾಗವನ್ನು ಕುಟುಂಬಕ್ಕೆ ನೀಡುತ್ತಿದ್ದೆ. ನನ್ನ ಬಟ್ಟೆ ಮತ್ತು ಇತರ ವಸ್ತುಗಳನ್ನು ಖರೀದಿಸಲು ಬಳಸುತ್ತಿದ್ದೆ. ಈ ಮಧ್ಯೆ, ಸಿನಿಮಾ ಆಫರ್ಗಳು ಬರಲಾರಂಭಿಸಿದವು. ಇಲ್ಲಿಂದ ನನ್ನ ಪ್ರಯಾಣ ಪ್ರಾರಂಭವಾಯಿತು