Puneeth Rajkumar: ಪುನೀತ್-ಅಶ್ವಿನಿ ವಿವಾಹ ದಿನ! ಅಪರೂಪದ ಫೋಟೋಸ್ ನೋಡಿ
ಇಂದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ವಿವಾಹ ವಾರ್ಷಿಕೋತ್ಸವದ ದಿನ. ಇವರ ಲವ್ಸ್ಟೋರಿ, ಮ್ಯಾರೇಜ್, ದಾಂಪತ್ಯದ ಬಗ್ಗೆ ಇಲ್ಲಿದೆ ವಿಶೇಷ ಮಾಹಿತಿ.
1999 ಡಿಸೆಂಬರ್ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಅಶ್ವಿನಿ ಹಾಗೂ ಪುನೀತ್ ರಾಜ್ಕುಮಾರ್. ಇದೀಗ ಇವರ ಮದುವೆಯಾಗಿ 23 ವರ್ಷಗಳಾಗಿವೆ. ಸ್ಯಾಂಡಲ್ವುಡ್ನ ಮಾದರಿ ದಂಪತಿಯಾಗಿದ್ದರು ಪುನೀತ್-ಅಶ್ವಿನಿ
2/ 7
ಕಾಮನ್ ಫ್ರೆಂಡ್ ಮೂಲಕ ಭೇಟಿಯಾದ ಪುನೀತ್ ರಾಜ್ಕುಮಾರ್ ಹಾಗೂ ಅಶ್ವಿನಿ ಅವರ ಮದುವೆ ಅದ್ಧೂರಿಯಾಗಿ ಅಪ್ತರ ಸಮ್ಮುಖದಲ್ಲಿ ನಡೆದಿತ್ತು. ಕುಟುಂಬಸ್ಥರು ಹಾಗೂ ಆಪ್ತರಷ್ಟೇ ಈ ಮದುವೆಯಲ್ಲಿ ಭಾಗಿಯಾಗಿದ್ದರು.
3/ 7
ಆರಂಭದಲ್ಲಿ ಅಶ್ವಿನಿ ಅವರ ಮನೆಯವರು ಈ ಮದುವೆಗೆ ಒಪ್ಪಿರಲಿಲ್ಲ, ಆದರೆ ಕೊನೆಗೂ ಪುನೀತ್ ಹಾಗೂ ಅಶ್ವಿನಿ ಪೋಷಕರನ್ನು ಒಪ್ಪಿಸಿ ಖುಷಿ ಖುಷಿಯಾಗಿ ಮದುವೆಯಾಗಲು ಸಾಧ್ಯವಾಯ್ತು.
4/ 7
ಆರಂಭದಲ್ಲಿ ದೊಡ್ಮನೆಯಲ್ಲಿ ಹೊಂದಿಕೊಳ್ಳಲು ಕಷ್ಟಪಟ್ಟಿದ್ರಂತೆ ಅಶ್ವಿನಿ. ಆದರೆ ಬರು ಬರುತ್ತಾ ತುಂಬು ಮನೆಯ ಸಂಸಾರ ಆಪ್ತವಾಗಿಬಿಟ್ಟಿತ್ತು.
5/ 7
ಅಶ್ವಿನಿ ಅವರು ಹೊರಗೆ ಮಾಧ್ಯಮದ ಮುಂದೆ ಕಾಣಿಸಿಕೊಳ್ಳುತ್ತಿದ್ದದ್ದು ಕಡಿಮೆ. ಆದರೆ ಪತಿಯೊಂದಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.
6/ 7
ಅಶ್ವಿನಿ ಅವರು ಭಾನುವಾರ ತಪ್ಪದೆ ಮಾವ ರಾಜ್ಕುಮಾರ್ ಅವರಿಗೆ ಸಿಹಿ ಅಡುಗೆ ಮಾಡಿ ಬಡಿಸುತ್ತಿದ್ದರಂತೆ. ಸಿಹಿ ಇಷ್ಟಪಡುತ್ತಿದ್ದ ಮಾವನಿಗಾಗಿ ಖುದ್ದು ಸಿಹಿ ತಿನಿಸು ಅಡುಗೆ ಮಾಡ್ತಿದ್ರಂತೆ ಅಶ್ವಿನಿ.
7/ 7
ಅಶ್ವಿನಿ ಹಾಗೂ ಪುನೀತ್ ರಾಜ್ಕುಮಾರ್ ಮದುವೆಯ ಸುಂದರವಾದ ಫೋಟೊ ಈಗ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.