ಒಮ್ಮೆ ಸಂದರ್ಶನದಲ್ಲಿ ಲತಾ ಅವರ ವೈಯಕ್ತಿಯ ಜೀವನದ ಕುರಿತು ಕೇಳಲಾಗಿತ್ತು. ಆ ಪತ್ರಕತ್ರ ಕೇಳಿದ ಪ್ರಶ್ನೆ ನೀವು ಯಾಕೆ ಇನ್ನೂ ಮದುವೆ ಆಗಿಲ್ಲ? ಎಂದಾಗಿತ್ತು. ಅತ್ಯಂತ ಶಾಂತಿಯಿಂದಾಗಿ ಲತಾ ಅವರು ಉತ್ತರಿಸಿದ್ರು. ಅಪ್ಪನನ್ನು ಕಳೆದುಕೊಂಡಾಗ ನನಗೆ 13 ವರ್ಷ. ಅಮ್ಮ, ಚಿಕ್ಕಮ್ಮ, ಐವರು ಒಡಹುಟ್ಟಿದವರು. ಇವರೆಲ್ಲರ ಜವಾಬ್ದಾರಿಯನ್ನ ನಿಭಾಯಿಸುವ ವೇಳೆಗೆ ನನ್ನ ಮದುವೆ ವಯಸ್ಸು ಮುಗಿದಿತ್ತು ಎಂದು ಹೇಳಿದ್ದಾರೆ.