Bellbottom Trailer: ಬೆಲ್ ಬಾಟಮ್ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿರುವ ಈ ಖ್ಯಾತ ನಟಿ ಯಾರು ಗೊತ್ತಾ..?
ಆಗಸ್ಟ್ 19ರಂದು ವಿರ್ಶವದಾದ್ಯಂತ ತೆರೆ ಕಾಣಲಿರುವ ಅಕ್ಷಯ್ ಕುಮಾರ್ (Akshay Kumar) ಅಭಿನಯದ ಬಹುನಿರೀಕ್ಷಿತ ಸಿನಿಮಾ ಬೆಲ್ ಬಾಟಮ್ (Bell Bottom) ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಅಭಿನಯಿಸಿರುವ ನಟಿಯ ಬಗ್ಗೆ ಚರ್ಚೆಯಾಗುತ್ತಿದೆ. ಹೌದು, ಬಾಲಿವುಡ್ನ ಖ್ಯಾತ ನಟಿ ಈ ಪಾತ್ರದಲ್ಲಿ ನಟಿಸಿದ್ದು, ಟ್ರೇಲರ್ನಲ್ಲಿ ಈ ಪಾತ್ರ ಹೆಚ್ಚು ಗಮನ ಸೆಳೆದಿದೆ. (ಚಿತ್ರಗಳು ಕೃಪೆ: ಟ್ವಿಟರ್ ಇನ್ಸ್ಟಾಗ್ರಾಂ ಖಾತೆ)
80ರ ದಶಕದ ಸೈ ಏಜೆಂಟ್ ಆಗಿ ಅಕ್ಷಯ್ ಕುಮಾರ್ ನಟಿಸಿರುವ ಸಿನಿಮಾ ಬೆಲ್ ಬಾಟಮ್. ಆಗಸ್ಟ್ 19ರಂದು ಈ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಹೀಗಿರುವಾಗಲೇ ಸಿನಿಮಾದ ಟ್ರೇಲರ್ ಸಹ ರಿಲೀಸ್ ಆಗಿದೆ.
2/ 11
ಸಿನಿಮಾದ ಟ್ರೇಲರ್ ರಿಲೀಸ್ ಆಗುತ್ತಿದ್ದಂತೆಯೇ ಅದರಲ್ಲಿ ಪ್ರೇಕ್ಷಕರ ಗಮನ ಸೆಳೆದಿರುವ ಪಾತ್ರ ಅಂದರೆ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರದ್ದು.
3/ 11
ಹೌದು, ಅಕ್ಷಯ್ ಕುಮಾರ್ ಅವರನ್ನು ಹೊರತುಪಡಿಸಿದರೆ ಇಂದಿರಾ ಗಾಂಧಿ ಪಾತ್ರದಲ್ಲಿ ಅಭಿನಯಿಸಿರುವ ಈ ನಟಿ ಯಾರೆಂದು ಸಿನಿಪ್ರಿಯರು ಹುಡಕಾಟ ತೊಡಗಿದ್ದರು.
4/ 11
ಈ ಪಾತ್ರವನ್ನು ಬಾಲಿವುಡ್ನ ಖ್ಯಾತ ನಟಿಯೊಬ್ಬರು ನಿರ್ವಹಿಸಿದ್ದಾರೆ.
5/ 11
ಹೌದು, ಬೆಲ್ ಬಾಟಮ್ ಸಿನಿಮಾದಲ್ಲಿ ಇಂದಿರಾ ಗಾಂಧಿಯಾಗಿ ಕಾಣಿಸಿಕೊಂಡಿರುವ ಆ ನಟಿ ಮತ್ತಾರೂ ಅಲ್ಲ ಲಾರಾ ದತ್ತಾ.
6/ 11
ಲಾರಾ ದತ್ತ ಯಾರೂ ಗುರುತಿಸಲಾಗಷ್ಟು ಬದಲಾಗಿದ್ದಾರೆ. ಅವರ ಪಾತ್ರದ ಫೋಟೋಗಳನ್ನು ನೋಡಿದರೆ ಇದು ಲಾರಾ ದತ್ತಾ ಎಂದು ಹೇಳಲು ಸಾಧ್ಯವೇ ಇಲ್ಲ.
7/ 11
ಈ ಪಾತ್ರದ ಬಗ್ಗೆ ಹೇಳಿದ ಕೂಡಲೇ ಸ್ಕ್ರಿಪ್ಟ್ ಕೆಳದೆಯೇ ಒಪ್ಪಿಗೆ ಸೂಚಿಸಿದ್ದಾಗಿ ಲಾರಾ ದತ್ತಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
8/ 11
ಲಾರಾ ದತ್ತಾ ಅವರ ಮೇಕೋವರ್ ನೋಡಿದವರು ಆಶ್ಚರ್ಯ ಪಡುತ್ತಿದ್ದಾರೆ.
9/ 11
ಲಾರಾ ಅವರ ಮೇಕೋವರ್ ಬಗ್ಗೆ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದು, ಮೇಕಪ್ ಮಾಡಿದ ಮೇಕಪ್ ಮ್ಯಾನ್ಗೆ ಈಗಲೇ ಪ್ರಶಸ್ತಿ ಸಿಕ್ಕಿದೆ ಎನ್ನುತ್ತಿದ್ದಾರೆ.
10/ 11
ಟ್ರೇಲರ್ ನೋಡಿ ಇಷ್ಟಪಟ್ಟ ಎಲ್ಲರಿಗೂ ಲಾರಾ ದತ್ತಾ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ತಿಳಿಸಿದ್ದಾರೆ.
11/ 11
ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರಿಗೆ ವಾಣಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ.