ನಟ ಚೇತನ್ ಅವರು ತಮ್ಮ ಹೇಳಿಕೆಗಳಿಂದ ಆಗಾಗ ಸುದ್ದಿ ಆಗುತ್ತಿದ್ದಾರೆ. ಅವರ ಮಾತುಗಳಿಗೆ ಪರ-ವಿರೋಧ ಚರ್ಚೆ ನಡೆಯುತ್ತಿರುತ್ತದೆ. ಇದೀಗ ಚಲನಚಿತ್ರ ನಟರ ಸ್ಮಾರಕ ವಿಚಾರದಲ್ಲೂ ಅದು ಮುಂದುವರಿದಿದೆ. ಆದರೆ ವಿಷ್ಣುಸ್ಮಾರಕ ಆದ ಬೆನ್ನಲ್ಲೇ ಸ್ಮಾರಕ ವಿಚಾರ ತೆಗೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಕೆಲವರು ಚೇತನ್ ಅವರ ಪರ ಹಾಗೂ ಕೆಲವರು ವಿರೋಧವಾಗಿ ಕಮೆಂಟ್ ಮಾಡಿದ್ದಾರೆ.