ಕಿರಿಕ್ ಪಾರ್ಟಿಯ ಕೇಸ್ ಕಿರಿಕ್ ಮುಗಿದಿಲ್ಲ, ಅವರು ಗೆದ್ದೂ ಇಲ್ಲ..!

First published:

  • 111

    ಕಿರಿಕ್ ಪಾರ್ಟಿಯ ಕೇಸ್ ಕಿರಿಕ್ ಮುಗಿದಿಲ್ಲ, ಅವರು ಗೆದ್ದೂ ಇಲ್ಲ..!

    ಸ್ಯಾಂಡಲ್​ವುಡ್​ ನಟ ನಿರ್ದೇಶಕ ರಕ್ಷಿತ್​ ಶೆಟ್ಟಿ, ಪರಂವಾ ಸ್ಟುಡಿಯೋ ಮತ್ತು ಅಜನೀಶ್ ಲೋಕನಾಥ್‍ಗೆ ವಿರುದ್ಧ ಬಂಧನದ ವಾರೆಂಟ್​ ಜಾರಿಯಾಗಿದೆ. 

    MORE
    GALLERIES

  • 211

    ಕಿರಿಕ್ ಪಾರ್ಟಿಯ ಕೇಸ್ ಕಿರಿಕ್ ಮುಗಿದಿಲ್ಲ, ಅವರು ಗೆದ್ದೂ ಇಲ್ಲ..!

    'ಕಿರಿಕ್​ ಪಾರ್ಟಿ' ಸಿನಿಮಾದಲ್ಲಿ ಲಹರಿ ಸಂಸ್ಥೆಯ ಆಡಿಯೋವನ್ನು ಬಳಸಲಾಗಿದೆ ಎಂಬ ಆರೋಪದಡಿ ನ್ಯಾಯಾಲಯ​ ರಕ್ಷಿತ್​ ಶೆಟ್ಟಿ ಅವರ ವಿರುದ್ಧ ಬಂಧನ ವಾರೆಂಟ್​ ಜಾರಿ ಮಾಡಿದೆ. ಆದರೆ ಮತ್ತೊಂದೆಡೆ ಈ ಕೇಸ್ ಮುಗಿದ ಅಧ್ಯಾಯ ಎಂಬ ಮಾತು ಕೂಡ ಕೇಳಿ ಬಂದಿತ್ತು.

    MORE
    GALLERIES

  • 311

    ಕಿರಿಕ್ ಪಾರ್ಟಿಯ ಕೇಸ್ ಕಿರಿಕ್ ಮುಗಿದಿಲ್ಲ, ಅವರು ಗೆದ್ದೂ ಇಲ್ಲ..!

    2016ರಲ್ಲಿ ಬಿಡುಗಡೆಯಾಗಿದ್ದ 'ಕಿರಿಕ್​ ಪಾರ್ಟಿ' ಚಿತ್ರದಲ್ಲಿ "ಹೇ.... ಹೂ ಆರ್​ ಯೂ" ಎಂಬ ಹಾಡಿತ್ತು. ಈ ಹಾಡು ರವಿಚಂದ್ರನ್​ ನಟನೆಯ 'ಶಾಂತಿ ಕ್ರಾಂತಿ' ಚಿತ್ರಕ್ಕೆ ಬಳಸಿದ್ದ 'ಮಧ್ಯರಾತ್ರಿಲಿ' ಹಾಡಿನ ಮ್ಯೂಸಿಕ್​ ಟ್ರ್ಯಾಕ್​ ಅನ್ನು ನಕಲು ಮಾಡಿ ಈ ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ ಎಂದು ಲಹರಿ ಆಡಿಯೋ ಸಂಸ್ಥೆ ಚಿತ್ರ ತಂಡದ ಮೇಲೆ ಆಪಾದನೆ ಹೊರಿಸಿತ್ತು.

    MORE
    GALLERIES

  • 411

    ಕಿರಿಕ್ ಪಾರ್ಟಿಯ ಕೇಸ್ ಕಿರಿಕ್ ಮುಗಿದಿಲ್ಲ, ಅವರು ಗೆದ್ದೂ ಇಲ್ಲ..!

    ಅಲ್ಲದೆ ಕಿರಿಕ್ ಪಾರ್ಟ್ ಬಿಡುಗಡೆಗೆ 2 ದಿನ ಬಾಕಿ ಇರುವ ಸಂದರ್ಭದಲ್ಲಿ ಚಿತ್ರದಲ್ಲಿರುವ ಹಾಡಿನ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಆ ಬಳಿಕ ಕೋರ್ಟ್ ಆಜ್ಞೆಯಂತೆ ಚಿತ್ರತಂಡವು ಸಿನಿಮಾವನ್ನು ಬಿಡುಗಡೆ ಮಾಡಿತ್ತು. ಇನ್ನು ಚಿತ್ರದಲ್ಲೂ "ಹೇ.... ಹೂ ಆರ್​ ಯೂ" ಹಾಡನ್ನು ಕೋರ್ಟ್​ ತೀರ್ಪಿನಂತೆ ಹಾಗೆಯೇ ಉಳಿಸಲಾಗಿತ್ತು.

    MORE
    GALLERIES

  • 511

    ಕಿರಿಕ್ ಪಾರ್ಟಿಯ ಕೇಸ್ ಕಿರಿಕ್ ಮುಗಿದಿಲ್ಲ, ಅವರು ಗೆದ್ದೂ ಇಲ್ಲ..!

    ಆದರೆ ಇದೀಗ ದಿಢೀರಣೆ ವಾರೆಂಟ್ ಜಾರಿಯಿಂದ ರಕ್ಷಿತ್ ಮತ್ತು ಟೀಂ ಶಾಕ್ ಆಗಿದ್ದಾರೆ. ನಾವು ಈಗಾಗಲೇ ಕೇಸ್ ಗೆದ್ದಿದ್ದೇವೆ. ಆ ಕೇಸ್ ಇತ್ಯರ್ಥವಾದ ಬಳಿಕವಷ್ಟೇ ನಾವು ಕಿರಿಕ್ ಪಾರ್ಟಿ ಚಿತ್ರದ ಗೆಲುವನ್ನು ಸಂಭ್ರಮಿಸಿರುವುದು ಎಂದು ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.

    MORE
    GALLERIES

  • 611

    ಕಿರಿಕ್ ಪಾರ್ಟಿಯ ಕೇಸ್ ಕಿರಿಕ್ ಮುಗಿದಿಲ್ಲ, ಅವರು ಗೆದ್ದೂ ಇಲ್ಲ..!

    ಇದೀಗ ಎಲ್ಲವೂ ಮುಗಿದ ಮೇಲೆ ಮತ್ತೆ ಕೇಸಿನ ಹೊಸ ವಾರೆಂಟ್, ನೋಟಿಸ್, ಸಮನ್ಸ್ ಎಲ್ಲಿಂದ ಬರೋಕೆ ಸಾಧ್ಯ ಎಂದು ಕಿರಿಕ್ ಕರ್ಣ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 711

    ಕಿರಿಕ್ ಪಾರ್ಟಿಯ ಕೇಸ್ ಕಿರಿಕ್ ಮುಗಿದಿಲ್ಲ, ಅವರು ಗೆದ್ದೂ ಇಲ್ಲ..!

    ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಲಹರಿ ಸಂಸ್ಥೆ ಪರ ವಕೀಲ ಯೋವಿನಿ ರಾಜೇಶ್ 'ಅವರೇನು ಕೇಸ್ ಗೆದ್ದಿಲ್ಲ. 2016ರಲ್ಲಿ ನಾವು ಕೋರ್ಟ್​ ಮೆಟ್ಟಿಲೇರಿದಾಗ ಪರಂವಾ ಸ್ಟುಡಿಯೋಸ್‍ನವರು ನಾವು ಕೇಸ್‍ನ್ನು ವಾದಿಸುತ್ತೇವೆ ಎಂದರು.

    MORE
    GALLERIES

  • 811

    ಕಿರಿಕ್ ಪಾರ್ಟಿಯ ಕೇಸ್ ಕಿರಿಕ್ ಮುಗಿದಿಲ್ಲ, ಅವರು ಗೆದ್ದೂ ಇಲ್ಲ..!

    ಅದರಂತೆ ನ್ಯಾಯಾಲಯ 10 ಲಕ್ಷ ಡೆಪಾಸಿಟ್ ಇಟ್ಟು ಸಿನಿಮಾ ರಿಲೀಸ್ ಮಾಡಲು ಅನುವು ಮಾಡಿಕೊಟ್ಟಿತ್ತು. ಈಗ ನಾವು ನಮ್ಮ ಹಕ್ಕನ್ನು ಪ್ರತಿಪಾದಿಸಿದ್ದೇವೆ. ಅವರು ಕೇಸು ಗೆದ್ದಿದ್ದಾರೆ ಅಂದರೆ ಅದರ ದಾಖಲೆಗಳನ್ನು ತೋರಿಸಲಿ. 

    MORE
    GALLERIES

  • 911

    ಕಿರಿಕ್ ಪಾರ್ಟಿಯ ಕೇಸ್ ಕಿರಿಕ್ ಮುಗಿದಿಲ್ಲ, ಅವರು ಗೆದ್ದೂ ಇಲ್ಲ..!

    ಇದೊಂದು ಕ್ರಿಮಿನಲ್ ಪ್ರಕರಣ, ಅವರು ಫೆ.20 ರಂದು ಕೋರ್ಟ್​ಗೆ ಹಾಜರಾಗಬೇಕಿತ್ತು. ಆದರೆ ಯಾರೂ ಬರಲಿಲ್ಲ. ಹೀಗಾಗಿ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 1011

    ಕಿರಿಕ್ ಪಾರ್ಟಿಯ ಕೇಸ್ ಕಿರಿಕ್ ಮುಗಿದಿಲ್ಲ, ಅವರು ಗೆದ್ದೂ ಇಲ್ಲ..!

    ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಹಾಜರಾಗುವಂತೆ ನ್ಯಾಯಾಲಯ ಹಲವಾರು ಬಾರಿ ನಟ ರಕ್ಷಿತ್​ ಶೆಟ್ಟಿ ಅವರಿಗೆ ಸಮನ್ಸ್​ ಜಾರಿ ಮಾಡಿತ್ತು. 

    MORE
    GALLERIES

  • 1111

    ಕಿರಿಕ್ ಪಾರ್ಟಿಯ ಕೇಸ್ ಕಿರಿಕ್ ಮುಗಿದಿಲ್ಲ, ಅವರು ಗೆದ್ದೂ ಇಲ್ಲ..!

    ಆದರೆ, ರಕ್ಷಿತ್​ ಶೆಟ್ಟಿ ನ್ಯಾಯಾಲಯದ ಸಮನ್ಸ್​ಗೆ ಲಿಖಿತ ಉತ್ತರ ನೀಡಿರಲಿಲ್ಲ. ಅಲ್ಲದೆ, ವಿಚಾರಣೆಗೂ ಹಾಜರಾಗಿರಲಿಲ್ಲ. ಹೀಗಾಗಿ ನಗರದ  9ನೇ ಎಸಿಎಂಎಂ ನ್ಯಾಯಾಲಯ ಫೆ.25 ರಂದು ರಕ್ಷಿತ್​ ಶೆಟ್ಟಿ ಮತ್ತು ತಂಡದ ವಿರುದ್ಧ ಬಂಧನದ ವಾರೆಂಟ್​ ಹೊರಡಿಸಿದೆ.

    MORE
    GALLERIES