Adipurush: KRG ಸ್ಟುಡಿಯೋಗೆ ಸಿಕ್ತು ಆದಿಪುರುಷ್ ವಿತರಣೆ ಹಕ್ಕು

Adipurush: ಬಹುನಿರೀಕ್ಷಿತ ಸಿನಿಮಾ ಆದಿಪುರುಷ್ ಜೂನ್ 16ರಂದು ರಿಲೀಸ್ ಆಗಲಿದೆ. ಈ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಿಸೋದ್ಯಾರು ಗೊತ್ತಾ?

First published:

  • 18

    Adipurush: KRG ಸ್ಟುಡಿಯೋಗೆ ಸಿಕ್ತು ಆದಿಪುರುಷ್ ವಿತರಣೆ ಹಕ್ಕು

    ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್ ಜೂನ್ 16ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಸಿನಿಮಾದ ಕುರಿತು ಈಗಾಗಲೇ ಬಹಳಷ್ಟು ಹೈಪ್ ಕ್ರಿಯೇಟ್ ಆಗಿದೆ. ರಾಜ್ಯದಲ್ಲಿ ಆದಿಪುರುಷ್ ವಿತರಣೆ ಹಕ್ಕನ್ನು ಕೆಅರ್​​ಜಿ ಸ್ಟೂಡಿಯೋ ಪಡೆದುಕೊಂಡಿದೆ.

    MORE
    GALLERIES

  • 28

    Adipurush: KRG ಸ್ಟುಡಿಯೋಗೆ ಸಿಕ್ತು ಆದಿಪುರುಷ್ ವಿತರಣೆ ಹಕ್ಕು

    ಆದಿಪುರುಷ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಲೀಸ್​ಗೆ ರೆಡಿಯಾಗಿದೆ. ಸಿನಿಮಾದಲ್ಲಿ ಪ್ರಭಾಸ್, ಕೃತಿ ಸನೋನ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಲಂಕೇಶ ರಾವಣನಾಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.

    MORE
    GALLERIES

  • 38

    Adipurush: KRG ಸ್ಟುಡಿಯೋಗೆ ಸಿಕ್ತು ಆದಿಪುರುಷ್ ವಿತರಣೆ ಹಕ್ಕು

    ಕಾರ್ತಿಕ್ ಗೌಡ ಹಾಗೂ ಯೋಗಿ ಜಿರಾಜ್ ದುಬಾರಿ ಮೊತ್ತಕ್ಕೆ ಕರ್ನಾಟಕದಲ್ಲಿ ಆದಿಪುರುಷ ವಿತರಣೆ ಹಕ್ಕು ಖರೀದಿಸಿದ್ದಾರೆ. ಕರ್ನಾಟಕದಲ್ಲಿ ಕೆಅರ್ ಜಿ ಸ್ಟೂಡಿಯೋ ಕನ್ನಡ , ತೆಲುಗು ಸೇರಿದಂತೆ ಎಲ್ಲಾ ಭಾಷೆಯ ಹಕ್ಕು ಖರೀದಿಸಿದೆ.

    MORE
    GALLERIES

  • 48

    Adipurush: KRG ಸ್ಟುಡಿಯೋಗೆ ಸಿಕ್ತು ಆದಿಪುರುಷ್ ವಿತರಣೆ ಹಕ್ಕು

    ಆದಿಪುರುಷ ಕೆಅರ್​ಜಿ ಪಾಲಾದ ಕಾರಣ ಸಿನಿಮಾದ ಕುರಿತು ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ಈಗಾಗಲೇ ದೊಡ್ಡ ಚಿತ್ರಗಳನ್ನ ರಿಲೀಸ್ ಮಾಡಿ ದೊಡ್ಡ ಮಟ್ಟದಲ್ಲಿ ಗೆದ್ದಿರುವ ಕೆಆರ್​ಜಿ ಈಗ ಆದಿಪುರುಷ್ ಸಿನಿಮಾ ವಿತರಿಸಲಿದೆ.

    MORE
    GALLERIES

  • 58

    Adipurush: KRG ಸ್ಟುಡಿಯೋಗೆ ಸಿಕ್ತು ಆದಿಪುರುಷ್ ವಿತರಣೆ ಹಕ್ಕು

    ಇದೇ ಮೊದಲ ಬಾರಿಗೆ ಆದಿಪುರುಷ್ ಸಿನಿಮಾ ತಂಡ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಅದೇನೆಂದರೆ ಆದಿಪುರುಷ್ ಸಿನಿಮಾ ರಿಲೀಸ್ ಆಗುವ ಪ್ರತಿ ಚಿತ್ರಮಂದಿರಲ್ಲಿ ಒಂದು ಖಾಲಿ ಸೀಟ್ ಇರಲಿದೆಯಂತೆ. ಪ್ರಿ ರಿಲೀಸ್ ಇವೆಂಟ್​ನಲ್ಲಿ ನಿರ್ದೇಶಕ ಓಂ ರಾವತ್ ಅವರು ಎಲ್ಲಾ ಥಿಯೇಟರ್ ಮಾಲೀಕರಲ್ಲಿ ಈ ಬೇಡಿಕೆ ಇಟ್ಟಿದ್ದಾರೆ.

    MORE
    GALLERIES

  • 68

    Adipurush: KRG ಸ್ಟುಡಿಯೋಗೆ ಸಿಕ್ತು ಆದಿಪುರುಷ್ ವಿತರಣೆ ಹಕ್ಕು

    ವಿದೇಶ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಒಂದು ಸೀಟ್​ನನ್ನು ಹನುಮಾನ್ ದೇವರಿಗಾಗಿ ಖಾಲಿ ಇಡಿ ಎಂದು ಆದಿಪುರುಷ್ ಸಿನಿಮಾದ ನಿರ್ದೇಶಕ ಓಂ ರಾವತ್ ಅವರು ಬೇಡಿಕೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಸಿನಿಮಾ ರಿಲೀಸ್ ದಿನ ಎಲ್ಲಾ ಥಿಯೇಟರ್​ನಲ್ಲಿ ಒಂದು ಸೀಟ್ ಖಾಲಿ ಇರಲಿದೆಯಂತೆ.

    MORE
    GALLERIES

  • 78

    Adipurush: KRG ಸ್ಟುಡಿಯೋಗೆ ಸಿಕ್ತು ಆದಿಪುರುಷ್ ವಿತರಣೆ ಹಕ್ಕು

    ಬಹು ಕೋಟಿ ವೆಚ್ಚದ ಆದಿಪುರುಷ್ ಸಿನಿಮಾಕ್ಕೆ ಸೆನ್ಸಾರ್ ಆಗಿದೆ. ಈ ಮೂಲಕ ಚಿತ್ರದ ಒಟ್ಟು ಅವಧಿ ಕೂಡ ರಿವೀಲ್ ಆಗಿದೆ. ಈಗಿನ ದಿನಗಳಲ್ಲಿ ಸುದೀರ್ಘ ಸಮಯದ ಸಿನಿಮಾಗಳು ಬರೋದೇ ಇಲ್ಲ. ಅಷ್ಟೊಂದು ಸಹನೆ ಜನಕ್ಕೂ ಇಲ್ಲ ಬಿಡಿ. ಆದರೆ ಆದಿಪುರುಷ್ 2 ಗಂಟೆ 59 ನಿಮಿಷದ ಚಿತ್ರವೇ ಆಗಿದೆ.

    MORE
    GALLERIES

  • 88

    Adipurush: KRG ಸ್ಟುಡಿಯೋಗೆ ಸಿಕ್ತು ಆದಿಪುರುಷ್ ವಿತರಣೆ ಹಕ್ಕು

    ಆದಿಪುರುಷ್ ಚಿತ್ರದ ಹಿಂದೆ ದೊಡ್ಡ ತಂಡವೇ ಇದೆ. ವರ್ಷಾನುಗಟ್ಟಲೆ ಈ ಚಿತ್ರಕ್ಕಾಗಿಯೇ ಕೆಲಸ ಮಾಡಿದೆ. ವಿಎಫ್‌ಎಕ್ಸ್ ಎಫೆಕ್ಟ್‌ ಅಂತೂ ಜೋರಾಗಿಯೇ ಇದೆ. ನೋಡುವ ಮನಸುಗಳೂ ಈ ಚಿತ್ರದಿಂದ ಹೊಸ ಅನುಭವ ಪಡೆದುಕೊಳ್ಳಬಹುದು.

    MORE
    GALLERIES