Vijay Antony: ಕೋಮಾಗೆ ಜಾರಿದ ಕಾಲಿವುಡ್ ಸೂಪರ್ ಸ್ಟಾರ್, ಸಾವು ಬದುಕಿನ ನಡುವೆ ವಿಜಯ್ ಹೋರಾಟ!
Vijay Antony Health Update: ಮಲೇಷ್ಯಾದ ಆಸ್ಪತ್ರೆಯಲ್ಲಿ ವಿಜಯ್ ಅವರಿಗೆ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ವಿಜಯ್ ಕುಟುಂಬ ಮಲೇಷ್ಯಾಗೆ ಪ್ರಯಾಣ ಬೆಳೆಸಿತ್ತು
ಪಿಚ್ಚೈಕಾರನ್ 2 (Picchaikaran 2) ಸಿನಿಮಾದ ಶೂಟಿಂಗ್ ವೇಳೆ ದೋಣಿ (boat) ಅಪಘಾತದಲ್ಲಿ (accident) ತೀವ್ರ ಗಾಯಗೊಂಡಿದ್ದ ತಮಿಳಿನ ಖ್ಯಾತ ನಟ ವಿಜಯ್ ಆಂಟನಿ (Vijay Antony) ಸ್ಥಿತಿ ಗಂಭೀರ ಎಂದು ಹೇಳಲಾಗ್ತಿದೆ.
2/ 8
ಕೋಮಾ ಸ್ಥಿತಿಗೆ ನಟ ವಿಜಯ್ ಜಾರಿದ್ದಾರೆ ಅಂತ ವರದಿಯಾಗ್ತಿದೆ. ಅವರ ಗಲ್ಲಕ್ಕೆ ಹೆಚ್ಚಿನ ಗಾಯವಾಗಿದ್ದು, ಮುಖದ ಗುರುತೇ ಸಿಗದಂತಾಗಿದೆ ಎಂದು ಹೇಳಲಾಗ್ತಿದೆ. ಈ ವಿಚಾರ ತಿಳಿದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
3/ 8
ವಿಜಯ್ ಆಂಟನಿ ಅವರನ್ನು ಮಲೇಷ್ಯಾದಿಂದ ಚೆನ್ನೈಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿತ್ತು. ವಿಜಯ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು ಎಂದು ಹೇಳಲಾಗಿತ್ತು. ಆದರೆ ಈಗಿನ ಮಾಹಿತಿ ಪ್ರಕಾರ ಇನ್ನೂ ಕೋಮಾ ಸ್ಥಿತಿಯಲ್ಲಿ ಇದ್ದಾರೆ ಅಂತ ವರದಿಯಾಗಿದೆ.
4/ 8
‘ಪಿಚ್ಚೈಕಾರನ್ 2’ ಸಿನಿಮಾದ ಶೂಟಿಂಗ್ ದೋಣಿಯೊಂದರಲ್ಲಿ ನಡೆಯುತ್ತಿದ್ದ ಸಾಹಸ ಸನ್ನಿವೇಶದ ದೃಶ್ಯದಲ್ಲಿ ದೋಣಿ ಅಪಘಾತಕ್ಕೀಡಾಗಿತ್ತು.
5/ 8
ಕೂಡಲೇ ವಿಜಯ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿತ್ರೀಕರಣದಲ್ಲಿ ಭಾಗಿಯಾಗಿದ್ದವರ ಹೇಳಿಕೆಯ ಪ್ರಕಾರ, ‘ಸಮುದ್ರ ಮಧ್ಯ ದೋಣಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಒಂದು ದೋಣಿ ಮತ್ತೊಂದು ದೋಣಿಯನ್ನು ಅಟ್ಟಿಸಿಕೊಂಡು ಬರುವ ದೃಶ್ಯ ಅದಾಗಿತ್ತು.
6/ 8
ರಭಸವಾಗಿ ದೋಣಿಗಳು ಬರುವ ವೇಳೆಯಲ್ಲಿ ಒಂದು ದೋಣಿ ನಿಯಂತ್ರಣ ತಪ್ಪಿ ಮತ್ತೊಂದು ದೋಣಿಗೆ ಢಿಕ್ಕಿ ಹೊಡೆದಿದೆ. ಈ ವೇಳೆ ವಿಜಯ್ ಆಂಟನಿ ತೀವ್ರವಾಗಿ ಗಾಯಗೊಂಡಿದ್ದರು.
7/ 8
ಮಲೇಷ್ಯಾದ ಆಸ್ಪತ್ರೆಯಲ್ಲಿ ವಿಜಯ್ ಅವರಿಗೆ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ವಿಜಯ್ ಕುಟುಂಬ ಮಲೇಷ್ಯಾಗೆ ಪ್ರಯಾಣ ಬೆಳೆಸಿತ್ತು
8/ 8
ಸದ್ಯ ವಿಜಯ್ ಅವರನ್ನು ಚೆನ್ನೈಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೊದಲು ಸ್ಥಿತಿ ಚಿಂತಾಜನಕವಾಗಿದ್ದರಿಂದ ವಿಜಯ್ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.