Sini Shetty: ಕರಾವಳಿ ಸುಂದರಿಗೆ ಮಿಸ್ ಇಂಡಿಯಾ ಪಟ್ಟ, ಸಿನಿ ಶೆಟ್ಟಿಯ ಕಿರು ಪರಿಚಯ ಇಲ್ಲಿದೆ
Miss India 2022: ಮುಂಬೈನ ಜಿಯೋ ವಲ್ಡ್ ಕನ್ವೆಂನ್ಷನ್ ಸೆಂಟರ್ ನಲ್ಲಿ ಜುಲೈ 3 ಎಂದು ನಡೆದ 'ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ -2022 ಕಿರೀಟವನ್ನು ಕರ್ನಾಟಕದ (Karnataka ) ಸಿನಿ ಶೆಟ್ಟಿ (Sini Shetty) ಮುಡಿಗೇರಿಸಿಕೊಂಡಿದ್ದಾರೆ. ಮೂಲತಃ ಉಡುಪಿಯವರಾದ ಈ ಸುಂದರಿಯ ಬಗ್ಗೆ ಕೆಲ ಮಾಹಿತಿಗಳು ಇಲ್ಲಿದೆ.
ಸಿನಿ ಶೆಟ್ಟಿ, ಸದ್ಯ ಎಲ್ಲೆಡೆ ಟ್ರೆಂಡಿಂಗ್ ಇರುವ ಹೆಸರು. ಮಿಸ್ ಇಂಡಿಯಾ 2022ರ ಕಿರೀಟವನ್ನು ಮುಡಿಗೇರಿಸಿಕೊಂಡ ಈ ಸುಂದರಿ ಮೂಲತಃ ಕರ್ನಾಟಕದ ಉಡುಪಿಯವರು.
2/ 8
ಹೌದು, 21 ವರ್ಷದ ಈ ಚೆಲುವೆ ಹುಟ್ಟಿದ್ದು ಬೆಳೆದಿದ್ದು ಮುಂಬೈನಲ್ಲಿ ಅಕೌಂಟಿಂಗ್ ಹಾಗೂ ಫೈನಾನ್ಸ್ನಲ್ಲಿ ಮಾಸ್ಟರ್ಸ್ ಪದವಿ ಪಡೆದಿದ್ದು ಈಗ ಸಿಎಫ್ ಎ (ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್) ಕೋರ್ಸ್ ಮಾಡುತ್ತಿದ್ದಾರೆ.
3/ 8
ಇಷ್ಟೇ ಅಲ್ಲದೇ ಸಿನಿ ಶೆಟ್ಟಿ ಭರತನಾಟ್ಯದಲ್ಲಿ ತರಬೇತಿ ಪಡೆದಿದ್ದು, ಅವರಿಗೆ ಬೇರೆ ಪ್ರಕಾರದ ಡ್ಯಾನ್ಸ್ಗಳು ಸಹ ಬಹಳ ಇಷ್ಟವಂತೆ. ಇವರನ್ನು ಬಹುಮುಖ ಪ್ರತಿಭೆ ಎಂದರೆ ತಪ್ಪಾಗಲ್ಲ.
4/ 8
ಸಿನಿ ಶೆಟ್ಟಿ ಅವರ ಗೆಲುವು ಕರ್ನಾಟಕ ರಾಜ್ಯಕ್ಕೆ ಮತ್ತೊಂದು ಕೀರ್ತಿ ರತ್ನವನ್ನು ಸೇರಿಸಿದೆ, ಸಿನಿಗಿಂತ ಮೊದಲು ಕರ್ನಾಟಕದ ಲಾರಾ ದತ್ತಾ, ಸಾರಾ ಜೇನ್ ಡಯಾಸ್, ಮತ್ತು ಸಂಧ್ಯಾ ಚಿಬ್, ನಫೀಸಾ ಜೋಸೆಫ್, ರೇಖಾ ಹಂದೆ, ಮತ್ತು ಲೈಮರೈನಾ ಡಿಸೋಜಾ ಸೇರಿದಂತೆ ಅನೇಕ ಸುಂದರಿಯರು ಈ ಮೈಲುಗಲ್ಲನ್ನು ಸಾಧಿಸಿದ್ದಾರೆ.
5/ 8
ಸಿನಿ ಶೆಟ್ಟಿ Instagram ನಲ್ಲಿ ಹೆಚ್ಚು ಆಕ್ಟೀವ್ ಆಗಿದ್ದು, 66.6 ಸಾವಿರ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಅವರು ಆಗಾಗ ತಮ್ಮ ಸುಂದರವಾದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
6/ 8
ಅವರಿಗೆ ಬಹಳಷ್ಟು ಅಭಿಮಾನಿಗಳಿದ್ದು, ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ನಂತರ ಅವರ ಹೆಸರಿನಲ್ಲಿ ಹಲವಾರು ಫ್ಯಾನ್ ಪೇಜ್ಗಳು ಹುಟ್ಟಿಕೊಂಡಿದೆ.
7/ 8
ಇನ್ನು ಮಿಸ್ ವರ್ಲ್ಡ್ 2000 ಕಿರೀಟವನ್ನು ಅಲಂಕರಿಸಿದ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಸ್ಫೂರ್ತಿ ಎಂದು ಸಿನಿ ಬಹಿರಂಗಪಡಿಸಿದ್ದಾರೆ. ನೀವು ಒಬ್ಬ ವ್ಯಕ್ತಿಯನ್ನು ನೋಡಿದಾಗ, ಅವರ ಕೆಲವು ಮಾತುಗಳು ನಿಮಗೆ ಬಹಳ ಇಷ್ಟವಾಗುತ್ತದೆ ಎಂದಿದ್ದು, ಪ್ರಿಯಾಂಕಾ ಅವರ ಕೆಲ ಮಾತುಗಳು ನನಗೆ ಬಹಳ ಕಾಡಿದೆ ಎಂದಿದ್ದಾರೆ.
8/ 8
ಇನ್ನು ಸಿನಿ ಶೆಟ್ಟಿ 71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅಭಿಮಾನಿಗಳು ಅಲ್ಲಿಯೂ ಸಹ ಕಿರೀಟ್ ಮುಡಿಗೇರಿಸಿಕೊಳ್ಳಲಿ ಎಂದು ವಿಶ್ ಮಾಡಿದ್ದಾರೆ.