Athiya Shetty: ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಅತಿಯಾ ಶೆಟ್ಟಿ-ರಾಹುಲ್! ಮದ್ವೆ ಡೇಟ್ ಕೂಡ ಫಿಕ್ಸ್ ಆಗಿದ್ಯಂತೆ
Athiya Shetty : ಈ ನಡುವೆ ಮದುವೆಯ ಹೊಸ ಸುದ್ದಿಯೊಂದು ಸದ್ದು ಮಾಡುತ್ತಿದೆ. ಬಾಲಿವುಡ್ ಹಿರಿಯ ಹೀರೋ ಸುನೀಲ್ ಶೆಟ್ಟಿ ಪುತ್ರಿ, ನಾಯಕಿ ಅಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಸದ್ಯದಲ್ಲೇ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ
ಅಥಿಯಾ ಶೆಟ್ಟಿ ಬಾಲಿವುಡ್ ಆಕ್ಷನ್ ಹೀರೋ ಸುನಿಲ್ ಶೆಟ್ಟಿ ಅವರ ಪ್ರೀತಿಯ ಮಗಳು. ‘ಹೀರೋ’ ಚಿತ್ರದ ಮೂಲಕ ಎಲ್ಲರಿಗೂ ಪರಿಚಯವಾದವರು ಆತಿಯಾ.
2/ 8
ಆ ನಂತರ ‘ಮುಬಾರಕ್’ ಸಿನಿಮಾವಾಗಿ ನಟಿಸಿ ಸೈ ಎನಿಸಿಕೊಂಡರು. ‘ನವಾಬ್ ಜಡೆ’ಯಲ್ಲಿ ಅತಿಥಿ ಪಾತ್ರದಲ್ಲಿ ಮನರಂಜಿಸಿದರು.
3/ 8
ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಅವರನ್ನು ಕೆಲ ದಿನಗಳಿಂದ ಪ್ರೀತಿಸುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿದೆ.
4/ 8
ಆತಿಯಾ ಶೆಟ್ಟಿ ಹಾಗೂ ಕೆ ಎಲ್ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗಾಳಿಸುದ್ದಿಯು ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಕ್ರಿಕೆಟಿಗ ರಾಹುಲ್ ಜತೆ ಆತಿಯಾ ಕಾಲ ಕಳೆದದ್ದು ಹೆಚ್ಚು ಸುದ್ದಿಯಾಗಿತ್ತು.
5/ 8
ಈ ನಡುವೆ ಮದುವೆಯ ಹೊಸ ಸುದ್ದಿಯೊಂದು ಸದ್ದು ಮಾಡುತ್ತಿದೆ. ಬಾಲಿವುಡ್ ಹಿರಿಯ ಹೀರೋ ಸುನೀಲ್ ಶೆಟ್ಟಿ ಪುತ್ರಿ, ನಾಯಕಿ ಅಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಸದ್ಯದಲ್ಲೇ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ
6/ 8
ಕಳೆದ ಮೂರು ವರ್ಷಗಳಿಂದ ರಿಲೇಶನ್ ಶಿಪ್ ನಲ್ಲಿದ್ದ ಈ ಜೋಡಿ ಇದೇ ವರ್ಷ ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜನಪ್ರಿಯ ವೆಬ್ಸೈಟ್ ಲೇಖನವೊಂದರ ಪ್ರಕಾರ, ಸುನೀಲ್ ಶೆಟ್ಟಿ ಮತ್ತು ಅವರ ಪತ್ನಿ ಮನ ಶೆಟ್ಟಿ ದಕ್ಷಿಣ ಭಾರತದ ಸಾಂಪ್ರದಾಯಿಕ ವಿವಾಹ ಶೈಲಿಯಲ್ಲಿ ತಮ್ಮ ಮದುವೆಗೆ ಸಿದ್ಧರಾಗುತ್ತಿದ್ದಾರೆ ಎಂದು ತೋರುತ್ತದೆ.
7/ 8
2019 ಇಬ್ಬರೂ ಮೊದಲು ಭೇಟಿಯಾದರು. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರಿಂದ ಅದೇ ವರ್ಷದಿಂದ ಡೇಟಿಂಗ್ ಆರಂಭಿಸಿದರು.
8/ 8
ಖ್ಯಾತ ಬಾಲಿವುಡ್ ನಟ ಹಾಗೂ ಆತಿಯಾ ಶೆಟ್ಟಿ ತಂದೆ ಸುನಿಲ್ ಶೆಟ್ಟಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಈಗ ಸಾಕಷ್ಟು ಸಮಯ ಕಳೆದಿದ್ದು, ಅವರು ಏನು ಮಾಡಬೇಕು ಎನ್ನುವುದು ಅವರಿಗೆ ತಿಳಿದಿದೆ. ನನ್ನ ಮಗಳು ಹಾಗೂ ಮಗ ಈಗಾಗಲೇ ಸಾಕಷ್ಟು ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದಿದ್ದಾರೆ.