Athiya Shetty-KL Rahul: ಅಥಿಯಾ-ರಾಹುಲ್ ಅದ್ಧೂರಿ ಕಲ್ಯಾಣ; ಕನ್ಯಾದಾನ ಮಾಡಲು ಸೌತ್ ಸ್ಟೈಲ್ನಲ್ಲಿ ಪಂಚೆಯುಟ್ಟು ಬಂದ ಸುನೀಲ್ ಶೆಟ್ಟಿ!
ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳ ಮದುವೆ ಸಂಭ್ರಮದಲ್ಲಿದ್ದಾರೆ. ಅಥಿಯಾ ಶೆಟ್ಟಿ-ಕೆ ಎಲ್ ರಾಹುಲ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮಗಳ ಮದುವೆ ಸಂಭ್ರಮದಲ್ಲಿರುವ ಸುನೀಲ್ ಶೆಟ್ಟಿ, ಸೌತ್ ಸ್ಟೈಲ್ನಲ್ಲಿ ರೆಡಿಯಾಗಿದ್ದಾರೆ.
ಬಾಲಿವುಡ್ ನಟ ಸುನೀಲ್ ಶೆಟ್ಟಿಗೆ ಇಂದು ಸ್ಪೆಷಲ್ ಡೇ ಆಗಿದೆ. ಮುದ್ದು ಮಗಳ ಮದುವೆ ಸಂಭ್ರಮದಲ್ಲಿರು ಸುನೀಲ್ ಶೆಟ್ಟಿ, ಪಂಚೆ ಹಾಕಿಕೊಂಡು ಕ್ಯಾಮೆರಾ ಮುಂದೆ ಬಂದಿದ್ದಾರೆ. ಮಗಳ ಮದುವೆ ಅಪ್ಪ ಸ್ಟೈಲಿಶ್ ಲುಕ್ ಫೋಟೋಗಳು ವೈರಲ್ ಆಗಿದೆ.
2/ 8
ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
3/ 8
ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಐಷಾರಾಮಿ ಫಾರ್ಮ್ ಹೌಸ್ ನಲ್ಲಿ ಇಬ್ಬರೂ ವಿವಾಹ ಮಹೋತ್ಸವ ನಡೆಯುತ್ತಿದೆ.
4/ 8
ಅಥಿಯಾ ಮದುವೆಯಲ್ಲಿ ದಕ್ಷಿಣ ಭಾರತ ಉಡುಗೆ ಪಂಚೆ, ಶರ್ಟ್ ಹಾಕಿಕೊಂಡು ನಟ ಸುನೀಲ್ ಶೆಟ್ಟಿ ಮಿಂಚಿದ್ದಾರೆ. ಮಗ ಅಹಾನ್ ಶೆಟ್ಟಿ ಕೂಡ ಸಹೋದರಿ ಮದುವೆಗೆ ಸಖತ್ ಆಗಿಯೇ ರೆಡಿಯಾಗಿದ್ದಾರೆ.
5/ 8
ಸುನೀಲ್ ಶೆಟ್ಟಿ ಮತ್ತು ಮಗ ಅಹಾನ್ ಶೆಟ್ಟಿ ಪಾಪರಾಜಿಗಳ ಮುಂದೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
6/ 8
4ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ, ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
7/ 8
ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಐಷಾರಾಮಿ ಬಂಗಲೆಯಲ್ಲಿ ಅಥಿಯಾ ಮತ್ತು ಕೆಎಲ್ ರಾಹುಲ್ ವಿವಾಹ ನಡೆಯುತ್ತಿದೆ.
8/ 8
ಅನೇಕ ಬಾಲಿವುಡ್ ತಾರೆಯರು ಹಾಗೂ ಕೆಲವು ಕ್ರಿಕೆಟಿಗರು ಸಹ ಅಥಿಯಾ ಮತ್ತು ರಾಹುಲ್ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.