KL Rahul-Athiya: ಕೆಎಲ್ ರಾಹುಲ್-ಅಥಿಯಾಗೆ ಕೋಟಿ ಕೋಟಿ ಗಿಫ್ಟ್! ಸಲ್ಲು, ಕೊಹ್ಲಿ, ಧೋನಿ ಕೊಟ್ರು ಭರ್ಜರಿ ಉಡುಗೊರೆ!
ಕೆ ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿಗೆ ಗಿಫ್ಟ್ಗಳ ಸುರಿಮಳೆಯಾಗಿದೆ. ಜನವರಿ 23 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಜೊತೆಗೆ ಕೋಟಿ ಕೋಟಿ ಗಿಫ್ಟ್ ಕೂಡ ದಂಪತಿ ಕೈ ಸೇರಿದೆ.
ಸುನೀಲ್ ಶೆಟ್ಟಿ ಫಾರ್ಮ್ ಹೌಸ್ ನಲ್ಲಿ ನಡೆದ ಮದುವೆಗೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ರು. ಕೆಎಲ್ ರಾಹುಲ್, ಅಥಿಯಾ ಜೋಡಿಗೆ ಬಾಲಿವುಡ್ ಹಾಗೂ ಕ್ರಿಕೆಟಿಗರು ಕೋಟಿ ಕೋಟಿ ಉಡುಗೊರೆಯನ್ನೇ ನೀಡಿದ್ದಾರೆ.
2/ 6
ಮುದ್ದು ಮಗಳನ್ನು ಮದುವೆ ಮಾಡಿಕೊಟ್ಟ ಖುಷಿಯಲ್ಲಿರುವ ತಂದೆ ಸುನೀಲ್ ಶೆಟ್ಟಿ, ಅಥಿಯಾಗೆ ದುಬಾರಿ ಗಿಫ್ಟ್ ನನ್ನೇ ನೀಡಿದ್ದಾರೆ. ಮಗಳಿಗೆ ಮದುವೆಯ ಉಡುಗೊರೆಯಾಗಿ ಮುಂಬೈನಲ್ಲಿ ಅಪಾರ್ಟ್ಮೆಂಟ್ ನೀಡಿದ್ದಾರೆ. ಈ ಅಪಾರ್ಟ್ಮೆಂಟ್ 50 ಕೋಟಿ ಬೆಲೆ ಬಾಳುತ್ತದೆ.
3/ 6
ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಹಾಗೂ ಸುನೀಲ್ ಶೆಟ್ಟಿ ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಸಲ್ಮಾನ್ ತಮ್ಮ ಸ್ನೇಹಿತನ ಮಗಳಿಗೆ ಸುಮಾರು 1.63 ಕೋಟಿ ಬೆಲೆಯ ಆಡಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರಂತೆ.
4/ 6
ಜಾಕಿ ಶ್ರಾಫ್ ಮತ್ತು ಸುನೀಲ್ ಶೆಟ್ಟಿ ಕೂಡ ತುಂಬಾ ಕ್ಲೋಸ್ ಆಗಿದ್ದಾರೆ. ಜಾಕಿ ಶ್ರಾಫ್ ಕೂಡ ಅಥಿಯಾಳನ್ನು ತನ್ನ ಮಗಳಂತೆ ಕಾಣ್ತಾರೆ. ಈ ವಿಶೇಷ ಸಂದರ್ಭದಲ್ಲಿ ಸುಮಾರು 30 ಲಕ್ಷ ರೂಪಾಯಿ ಬೆಲೆ ಬಾಳುವ ಚೋಪಾರ್ಡ್ ಬ್ರಾಂಡ್ ವಾಚ್ ನೀಡಿದ್ದಾರೆ.
5/ 6
ಬಾಲಿವುಡ್ ಸ್ಟಾರ್ಸ್ ಮಾತ್ರವಲ್ಲ ಕ್ರಿಕೆಟ್ ಆಟಗಾರರು ಸಹ ರಾಹುಲ್-ಅಥಿಯಾ ಮದುವೆಗೆ ಆಗಮಿಸಿದ್ರು. ವಿರಾಟ್ ಕೊಹ್ಲಿ ಕೂಡ ಸ್ನೇಹಿತನಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. 2.17 ಕೋಟಿ ಬೆಲೆ ಬಾಳುವ BMW ಕಾರನ್ನು ತಮ್ಮ ಸ್ನೇಹಿತ ಕೆ.ಎಲ್ ರಾಹುಲ್ಗೆ ಗಿಫ್ಟ್ ಆಗಿ ನೀಡಿದ್ದಾರೆ.
6/ 6
ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಕೆಎಲ್ ರಾಹುಲ್ಗೆ ಕವಾಸಕಿ ನಿಂಜಾ ಬೈಕ್ನನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬೈಕ್ 80 ಲಕ್ಷ ರೂ ಬೆಲೆ ಬಾಳುತ್ತದೆ.