Kichcha Sudeep: ಕಿಚ್ಚನ ನೆಕ್ಸ್ಟ್ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್! ಆ್ಯಕ್ಷನ್ ಕಟ್ ಹೇಳೋದ್ಯಾರು ಗೊತ್ತಾ?
ಕಿಚ್ಚ ಸುದೀಪ್ ಸಿನಿಮಾಗೋಸ್ಕರ ಕಾಯುತ್ತಿದ್ದೀರಾ? ಹಾಗಿದ್ದರೆ ಅತ್ಯಂತ ಎಕ್ಸೈಟಿಂಗ್ ಆಗಿರೋ ಅಪ್ಡೇಟ್ ಇಲ್ಲಿದೆ.
1/ 9
ವಿಕ್ರಾಂತ್ ರೋಣ ಸಿನಿಮಾದ ನಂತರ ಕಿಚ್ಚ ಸುದೀಪ್ ಅಭಿನಯದ ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ.
2/ 9
ಹೊಂಬಾಳೆ ಬ್ಯಾನರ್ ಜೊತೆಗೆ ಗುರುತಿಸಿಕೊಂಡಿರುವ ಕಾರ್ತಿಕ್ ಗೌಡ ಅವರ ಕೆಆರ್ಜಿ ಕನೆಕ್ಟ್ ಜೊತೆಗೆ ಕಿಚ್ಚ ಅವರು ಸಿನಿಮಾ ಮಾಡೋದು ಪಕ್ಕಾ ಆಗಿದೆ.
3/ 9
ಈ ವಿಷಯವನ್ನ ಕೆಆರ್ಜಿ ಕನೆಕ್ಟ್ ತನ್ನ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು ಚಿತ್ರಕ್ಕೆ ನಂದಕಿಶೋರ್ ಆ್ಯಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ.
4/ 9
ಕೆಲವು ತಿಂಗಳುಗಳ ಹಿಂದೆ ಸುದೀಪ್ ಕಾರ್ತಿಕ್ ಗೌಡ ಜೊತೆಗಿನ ಪೋಟೋ ಒಂದನ್ನು ಹಂಚಿಕೊಂಡಿದ್ದರು. ಈಗ ಇವರು ಸಿನಿಮಾ ಮಾಡೋದು ಕನ್ಫರ್ಮ್ ಆಗಿದೆ.
5/ 9
ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ಸಂಪೂರ್ಣ ಮಾಹಿತಿಯನ್ನ ಚಿತ್ರ ತಂಡ ಹಂಚಿಕೊಳ್ಳಲಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಕಿಚ್ಚನ ಅಭಿಮಾನಿಗಳು ಖುಷ್ ಆಗಿದ್ದಾರೆ.
6/ 9
ಕೆಆರ್ಜಿ ಕನೆಕ್ಟ್ ಶೇರ್ ಮಾಡಿರುವ ಫೋಟೋದಲ್ಲಿ ಕಿಚ್ಚ ಸುದೀಪ್ ಜೊತೆ ಚಿತ್ರತಂಡ ಮಾತುಕತೆ ನಡೆಸುವುದರನ್ನು ಕಾಣಬಹುದು.
7/ 9
ಈ ಸಿನಿಮಾಗೆ ಹೀರೋಯಿನ್ ಯಾರಾಗಲಿದ್ದಾರೆ? ಯಾರು ನಟಿಸಲಿದ್ದಾರೆ? ಕಿಚ್ಚನಿಗೆ ಜೋಡಿಯಾಗೋದು ಯಾರು ಎನ್ನುವ ಬಗ್ಗೆ ಅವರ ಅಭಿಮಾನಿಗಳಲ್ಲಿ ಭಾರೀ ಕುತೂಹಲವಿದೆ.
8/ 9
ಕಿಚ್ಚ ಸುದೀಪ್ ಅವರು ಕೊನೆಯದಾಗಿ ನಟಿಸಿದ ವಿಕ್ರಾಂತ್ ರೋಣ ಸಿನಿಮಾ ಆಸ್ಕರ್ ನಾಮನಿರ್ದೇಶನಕ್ಕೆ ಕ್ವಾಲಿಫೈ ಆಗಿದೆ. ಈ ಮೂಲಕ ಆಸ್ಕರ್ ರೇಸ್ಗೆ ಸಜ್ಜಾಗಿದೆ.
9/ 9
ವಿಕ್ರಾಂತ್ ರೋಣ ಸಿನಿಮಾದ ನಂತರ ಕಿಚ್ಚ ಸುದೀಪ್ ಅವರು ಕನ್ನಡ ಬಿಗ್ಬಾಸ್ ಸೀಸನ್ 9ನ್ನು ನಡೆಸಿಕೊಟ್ಟರು. ಶೋ ಹೋಸ್ಟ್ ಮಾಡುವ ಮೂಲಕ ಅವರು ಬ್ಯುಸಿಯಾಗಿದ್ದರು.
First published: