ಚಿತ್ರರಂಗದಲ್ಲಿ ಸಕ್ಸಸ್ ಪಡೆದಿರುವ ಕಿಚ್ಚ ಸುದೀಪ್ ಅವರು ಪಾಲಿಟಿಕ್ಸ್ಗೆ ಎಂಟ್ರಿ ಕೊಡ್ತಾರಾ? ಕಾಂಗ್ರೆಸ್ನಿಂದ ಕಿಚ್ಚ ಸುದೀಪ್ ಅವರಿಗೆ ಆಹ್ವಾನ ಕೊಡಲಾಗಿದೆ ಎನ್ನುವ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ.
2/ 7
ಕಾಂಗ್ರೆಸ್ ಮಾಜಿ ಸಂಸದೆ, ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಕಿಚ್ಚ ಸುದೀಪ್ ಅವರಿಗೆ ಓಪನ್ ಆಹ್ವಾನ ಕೊಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
3/ 7
ಈ ಸಂಬಂಧ ನಟಿ ರಮ್ಯಾ ಅವರು ಈಗಾಗಲೇ ಕಿಚ್ಚ ಸುದೀಪ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ನಟಿ ಮಾತನಾಡಿದ್ದಾರೆ ಎನ್ನಲಾಗಿದೆ.
4/ 7
ವಿಧಾನಸಭಾ ಚುನಾವಣೆ ಸಮೀಪಿಸಿರುವ ಸಂದರ್ಭ ಕಿಚ್ಚ ಸುದೀಪ್ಗೆ ಆಫರ್ ಕೊಡಲಾಗಿದೆ. ನಟ ಸುದೀಪ್ ಅವರನ್ನು ಪಕ್ಷಕ್ಕೆ ಸೆಳೆಯುವ ತಂತ್ರ ಶುರುವಾಗಿದೆ.
5/ 7
ಕಿಚ್ಚ ಅವರನ್ನು ಸೆಳೆಯೋ ಮೂಲಕ ಎಸ್ಟಿ ಸಮುದಾಯದ ಮತಗಳನ್ನು ಗಳಿಸುವ ಪ್ಲಾನ್ ಶುರುವಾಗಿದೆ ಎನ್ನಲಾಗಿದೆ. ರಾಜಕೀಯ ರಣರಂಗದಲ್ಲಿ ಕಿಚ್ಚ ಅವರು ಎಂಟ್ರಿ ಕೊಡುವುದು ಪಕ್ಕಾ ಎನ್ನುವಷ್ಟು ಚರ್ಚೆ ಶುರುವಾಗಿದೆ.
6/ 7
ಒಂದು ವೇಳೆ ಕಿಚ್ಚ ಸುದೀಪ್ ಅವರು ಅವರು ರಾಜಕೀಯಕ್ಕೆ ಎಂಟ್ರಿ ಕೊಡುವುದಾದರೆ ಅವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ? ಕಿಚ್ಚನಿಗೆ ಟಿಕೆಟ್ ಸಿಗೋದು ಪಕ್ಕಾ ಎನ್ನುವಷ್ಟರ ಮಟ್ಟಿಗೆ ಜನರು ಮಾತನಾಡುತ್ತಿದ್ದಾರೆ.
7/ 7
ಚಿತ್ರರಂಗದಲ್ಲಿ ಮಿಂಚುತ್ತಿರುವ ನಟ ರಾಜಕೀಯಕ್ಕೆ ಎಂಟ್ರಿ ಕೋಡೋದು ಪಕ್ಕಾ ಎಂದು ಮಾತನಾಡುತ್ತಿದ್ದಾರೆ ಜನ. ಆದರೆ ಈ ಬಗ್ಗೆ ಕಿಚ್ಚ ಸುದೀಪ್ ಇನ್ನೂ ಪ್ರತಿಕ್ರಿಯಿಸಿಲ್ಲ.