ನಟ ಕಿಚ್ಚ ಸುದೀಪ್ ಅವರು ಮಲ್ಟಿ ಸ್ಟಾರರ್ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಪೋಷಕ ನಟನಾಗಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದರು. ಆದರೂ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೆಲವು ಪ್ರಮುಖ ರೋಲ್ ಒಪ್ಪಿಕೊಂಡಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತೇ?
2/ 8
ಕಿಚ್ಚ ಸುದೀಪ್ ನಾನಿ ಜೊತೆ 'ಈಗ' ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಾಗ ಅವರ ಖ್ಯಾತಿ ಬೇರೆ ಲೆವೆಲ್ಗೆ ಹೋಯಿತು. ಪರಭಾಷೆಗಳಲ್ಲಿ ಗೆಸ್ಟ್ ರೋಲ್ಗಳಿಗೆ ಡಿಮ್ಯಾಂಡ್ ಹೆಚ್ಚಾಯಿತು.
3/ 8
ಕನ್ನಡದಲ್ಲಿ ಶಿವರಾಜ್ಕುಮಾರ್ ಜೊತೆ ವಿಲನ್ನಲ್ಲಿ ಕಾಣಿಸಿಕೊಂಡರೂ ಆ ನಂತರ ಸಿನಿಮಾ ಬಿಡುಗಡೆಯಾಗುವ ಮೊದಲೇ ಇನ್ನು ಬೇರೆ ಮಲ್ಟಿಸ್ಟಾರರ್ ಸಿನಿಮಾ ಮಾಡುವುದಿಲ್ಲ ಎಂದು ಹೇಳಿದ್ದರು.
4/ 8
ತೆಲುಗು ಗ್ಲಿಟ್ಜ್ ಯೂಟ್ಯೂಬ್ ಚಾನಲ್ಗೆ ಕೊಟ್ಟ ಸಂದರ್ಶನದಲ್ಲಿ ನಟ ಇದಕ್ಕೆ ಕಾರಣ ರಿವೀಲ್ ಮಾಡಿದ್ದಾರೆ. ಮಲ್ಟಿ ಸ್ಟಾರರ್ ಸಿನಿಮಾ ಮಾಡುವುದಿಲ್ಲ. ಕಬ್ಜದಲ್ಲಿ ಮಾಡಿದ್ದು ತುಂಬಾ ಚಿಕ್ಕ ಪಾತ್ರ. ಆದರೆ ಬೇರೆ ಭಾಷೆಯಲ್ಲಿ ಮಲ್ಟಿ ಸ್ಟಾರರ್ ಸಿನಿಮಾ ಮಾಡಲ್ಲ ಎಂದಿದ್ದಾರೆ.
5/ 8
ಹಾಗಾದರೆ ಮತ್ತೆ ಹೀರೋ ಆಗಿ ಬರುವುದಿಲ್ಲ, ಬದಲಾಗಿ ಒಬ್ಬ ನಟನಾಗಿ ಬರುತ್ತೇನೆ ಎಂದಿದ್ದಾರೆ ಕಿಚ್ಚ. ಇನ್ನು ಬೇರೆ ಭಾಷೆಯಿಂದ ಬರುವ ಆಫರ್ಗಳ ಬಗ್ಗೆಯೂ ಮಾತನಾಡಿದ್ದಾರೆ.
6/ 8
ವಿಜಯ್, ಚಿರು ಸಿನಿಮಾಗೆ ನಾನು ಬೇಕಾಗಿತ್ತು. ಅವರು ಕಾಲ್ ಮಾಡಿ ಕೇಳಿಕೊಂಡಿದ್ದರು. ಅವರಿಗೆ ಆಗುವುದಿಲ್ಲ ಎನ್ನವಷ್ಟು ದೊಡ್ಡವ ನಾನಲ್ಲ. ಅದರಿಂದ ಅವರಿಗೆ ಅನುಕೂಲವಾದರೆ ನನ್ನ ಅಭ್ಯಂತರ ಇಲ್ಲ ಎಂದಿದ್ದಾರೆ.
7/ 8
ದುಡ್ಡು ಕೊಡ್ತೀನಿ ಎಂದ ಕೂಡಲೇ ಸಿನಿಮಾ ಮಾಡಲ್ಲ. ಬದಲಾಗಿ ಸಂಬಂಧಗಳಿಗಾಗಿ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ. ಆದರೆ ಸದ್ಯ ಬಹಳಷ್ಟು ಪ್ರಾಜೆಕ್ಟ್ ಮುಗಿಸುವುದಕ್ಕೆ ಇರುವುದರಿಂದ ಬೇರೆ ಸಿನಿಮಾ ಮಾಡಲ್ಲ ಎಂದಿದ್ದಾರೆ.
8/ 8
ಈಗ ಬಹಳಷ್ಟು ಸಿನಿಮಾ ಕೈಯಲ್ಲಿದೆ. ಹಾಗಾಗಿ ಬೇರೆ ಸಿನಿಮಾಗಳನ್ನು ಮಾಡುವುದಿಲ್ಲ. ನನ್ನ ಸಿನಿಮಾಗಳನ್ನು ಮೊದಲು ಮುಗಿಸಿಕೊಳ್ಳಬೇಕು ಎಂದಿದ್ದಾರೆ.