Kotigobba 3: ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ: ಕೋಟಿಗೊಬ್ಬ 3 ಚಿತ್ರದ ಕುರಿತು ಅಪ್ಡೇಟ್ ಕೊಟ್ಟ ಸುದೀಪ್..!
ಕಿಚ್ಚ ಸುದೀಪ್ ಚಿತ್ರಮಂದಿರಗಳು ತೆಗೆಯುವವರೆಗೂ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಲು ಸಖತ್ತಾಗಿ ಸಿದ್ಧತೆ ಮಾಡಿಕೊಂಡಂತೆ ಇದೆ. ಅದಕ್ಕೆ ಇರಬೇಕು ಒಂದರ ಹಿಂದೆ ಒಂದಂತೆ ಸಿಹಿ ಸುದ್ದಿಗಳನ್ನು ನೀಡುತ್ತಿದ್ದಾರೆ. ಈಗ ಅವರ ಕೋಟಿಗೊಬ್ಬ 3 ಚಿತ್ರದ ಕುರಿತಾದ ಅಪ್ಡೇಟ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆ)
ಕಿಚ್ಚ ಸುದೀಪ್ ಇತ್ತೀಚೆಗೆ ತಮ್ಮ ಹೊಸ ಸಿನಿಮಾ ಫ್ಯಾಂಟಮ್ ಕುರಿತಾಗಿ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ, ಅದರ ಅಪ್ಡೇಟ್ ಕೊಡುತ್ತಲೇ ಇದ್ದಾರೆ.
2/ 13
ಆದರೆ ಕಿಚ್ಚನ ಅಭಿಮಾನಿಗಳಿಗೆ ಈಗ ‘ಕೋಟಿಗೊಬ್ಬ-3‘ ಸಿನಿಮಾದ ಕುರಿತಾಗಿ ಅಪ್ಡೇಟ್ ಬೇಕಂತೆ.
3/ 13
ಅದಕ್ಕೆ ಅಭಿಮಾನಿಗಳಿಗಾಗಿ ಸುದೀಪ್ ಕೋಟಿಗೊಬ್ಬ 3 ಸಿನಿಮಾ ಕುರಿತಾದ ಸಖತ್ ಅಪ್ಡೇಟ್ ಕೊಟ್ಟಿದ್ದಾರೆ.
4/ 13
ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣ ಎಲ್ಲಿಯವರೆಗೆ ಬಂದಿದೆ. ಅದರ ಕೆಲಸಗಳು ಹೇಗೆ ನಡೆಯುತ್ತಿವೆ ಹಾಗೂ ಬಾಕಿ ಏನೆಲ್ಲ ಉಳಿದಿದೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
5/ 13
ಕೋಟಿಗೊಬ್ಬ 3 ಸಿನಿಮಾ ಕುರಿತಾದ ಮಾಹಿತಿ ನೀಡುವಂತೆ ಫ್ಯಾನ್ಸ್ ತುಂಬಾ ಟ್ವೀಟ್ಸ್ ಮಾಡಿದ್ದರಂತೆ. ಅದಕ್ಕಾಗಿ ಈ ಮಾಹಿತಿ ನೀಡುತ್ತಿರುವುದಾಗಿ ಸುದೀಪ್ ಹೇಳಿದ್ದಾರೆ.
6/ 13
ಕೋಟಿಗೊಬ್ಬ 3 ಸಿನಿಮಾ ಚಿತ್ರೀಕರಣ ಮುಗಿದಿದೆ. ಸ್ವಲ್ಪ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮಾತ್ರ ಬಾಕಿ ಇವೆಯಂತೆ. ಅದೂ ಸಹ ಈಗಿರುವ ಪರಿಸ್ಥಿತಿಯಿಂದಾಗಿ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
7/ 13
ನಾನು ಹಾಗೂ ಕೋಟಿಗೊಬ್ಬ-3 ಚಿತ್ರತಂಡ ಉಳಿದಿರುವ ಕೊಂಚ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಸಿನಿಮಾವನ್ನು ರಿಲೀಸ್ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ ಸುದೀಪ್.
8/ 13
ಚಿತ್ರತಮಂದಿರಗಳು ತೆರೆಯುತ್ತಿದ್ದಂತೆಯೇ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾವನ್ನು ಬೆಳ್ಳಿ ತೆರೆಯಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.
9/ 13
ಕೋಟಿಗೊಬ್ಬ-3 ಸಿನಿಮಾ ಏಪ್ರಿಲ್ನಲ್ಲಿ ತೆರೆಕಾಣಲಿದೆ ಎನ್ನಲಾಗಿತ್ತು. ಆದರೆ ಕೊರೋನಾ ಲಾಕ್ಡೌನ್ನಿಂದಾಗಿ ಅದು ಮುಂದಕ್ಕೆ ಹೋಯಿತು.
10/ 13
ಶಿವ ಕಾರ್ತಿಕ್ ನಿರ್ದೇಶಿಸಿರುವ ಈ ಸಿನಿಮಾ, ಟೀಸರ್ ಮತ್ತು ಪೋಸ್ಟರ್ ಮೂಲಕ ಬಾದ್ಷಾ ಅಭಿಮಾನಿಗಳ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
11/ 13
ಅರ್ಜುನ್ ಜನ್ಯ ಅವರ ಸಂಗೀತ ಸಿನಿಪ್ರಿಯರನ್ನು ಹುಚ್ಚೆಬ್ಬಿಸುತ್ತಿದೆ. ಈ ಹಿಂದೆ ರಿಲೀಸ್ ಆದ ಆಕಾಶಾನೆ ಅದರಿಸುವ ಹಾಡು ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿತ್ತು.