Kichcha Sudeep: ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ್ ತಾಯಿಯ ಚಿಕಿತ್ಸೆಗೆ ಧನ ಸಹಾಯ ಮಾಡಿದ ಕಿಚ್ಚ ಸುದೀಪ್..!
Bigg Boss Fame Sonu Patil: ಕಷ್ಟ ಎಂದವರಿಗೆ ಕಿಚ್ಚ ಸುದೀಪ್ ಸಹಾಯ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಈಗಲೂ ಸಹ ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಸೋನು ಪಾಟೀಲ್ ಅವರ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ನಟ ಕಿಚ್ಚ ಸುದೀಪ್ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ವಿಷಯವನ್ನು ಸೋನು ಪಾಟೀಲ್ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದು, ಕಿಚ್ಚನಿಗೆ ಧನ್ಯವಾದ ತಿಳಿಸಿದ್ದಾರೆ. (ಚಿತ್ರಗಳು ಕೃಪೆ: ಸೋನು ಪಾಟೀಲ್ ಇನ್ಸ್ಟಾಗ್ರಾಂ ಖಾತೆ)
ಸಂಕಷ್ಟದಲ್ಲಿರುವ ಮಂದಿಗೆ ಕಿಚ್ಚ ಸುದೀಪ್ ಸಹಾಯ ಮಾಡುತ್ತಿರುತ್ತಾರೆ. ಇನ್ನು ಅವರ ಅಭಿಮಾನಿಗಳೂ ಸಹ ನಟನ ಹೆಸರಿನಲ್ಲಿ ಸಹಾಯ ಹಸ್ತ ಚಾಚುತ್ತಿರುತ್ತಾರೆ.
2/ 12
ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿಯಾಗಿದ್ದ ಸೋನು ಪಾಟೀಲ್ ಅವರ ಕಷ್ಟಕ್ಕೆ ಸುದೀಪ್ ನೆರವಾಗಿದ್ದಾರೆ.
3/ 12
ಸೋನು ಪಾಟೀಲ್ ಬಿಗ್ ಬಾಸ್ ಸೀಸನ್ 6ರಲ್ಲಿ ಸ್ಪರ್ಧಿಯಾಗಿ ಮನೆಗೆ ಎಂಟ್ರಿ ಕೊಟ್ಟಿದ್ದರು. ಆಗ ಸೋನು ತಾನು ಬಿಗ್ ಬಾಸ್ ಮನೆಯಿಂದ ಹೊರ ಬರುವವರೆಗೂ ತಮ್ಮ ಮನೆಯವರ ಜವಾಬ್ದಾರಿ ಕಿಚ್ಚ ಸುದೀಪ್ ಅವರದ್ದು ಎಂದಿದ್ದರು.
4/ 12
ಅಂದು ಸೋನು ಅವರ ಮನೆಯವರ ಜವಾಬ್ದಾರಿ ತನ್ನದು ಎಂದು ಹೇಳಿದ್ದ ಸುದೀಪ್ ಆ ಮಾತನ್ನು ಉಳಿಸಿಕೊಂಡಿದ್ದಾರೆ.
5/ 12
ಸೋನು ಪಾಟೀಲ್ ಅವರ ತಾಯಿ ಮಹದೇವಿ ಅವರಿಗೆ ನ್ಯೂಮೊನಿಯಾ ಆಗಿತ್ತು. ಅದಕ್ಕಾಗಿ ಅವರನ್ನು ಬಾಗಲಕೋಟೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
6/ 12
ಸೋನು ಅವರ ತಾಯಿ ಚಿಕಿತ್ಸೆ ಕೊಡಿಸುತ್ತಿದ್ದು, ಹಣವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
7/ 12
ಈ ವಿಷಯ ಕಿಚ್ಚ ಸುದೀಪ್ ಅವರಿಗೆ ತಿಳಿದು, ಕೂಡಲೇ ತಮ್ಮ ಚಾರಿಟಬಲ್ ಟ್ರಸ್ಟ್ ವತಯಿಂದ ಸೋನು ಅವರ ತಾಯಿತ ಚಿಕಿತ್ಸೆಗೆ ಹಣ ಸಹಾಯ ಮಾಡಿದ್ದಾರೆ.
8/ 12
ಈ ವಿಷಯವನ್ನು ಸೋನು ಪಾಟೀಲ್ ವಿಡಿಯೋ ಮೂಲಕ ಕಣ್ಣೀರಿಡುತ್ತಾ ಹೇಳಿಕೊಂಡಿದ್ದಾರೆ.
9/ 12
ಸೋನು ಪಾಟೀಲ್ ಹಂಚಿಕೊಂಡಿರುವ ಈ ವಿಡಿಯೋ ವೈರಲ್ ಆಗುತ್ತಿದೆ.
10/ 12
ಸಹಾಯ ಮಾಡಿದ್ದಕ್ಕೆ ಕಿಚ್ಚ ಸುದೀಪ್ ಅವರಿಗೆ ಸೋನು ಪಾಟೀಲ್ ಧನ್ಯವಾದ ತಿಳಿಸಿದ್ದಾರೆ.
11/ 12
ಅಂದಾಜು 5 ಲಕ್ಷದ ವರೆಗೂ ಸೋನು ಪಾಟೀಲ್ ಅವರ ಅಮ್ಮನ ಚಿಕಿತ್ಸೆಗೆ ವೆಚ್ಚ ಮಾಡಿದ್ದಾರಂತೆ ಸುದೀಪ್.
12/ 12
ಸುದೀಪ್ ಅವರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
First published:
112