Kichcha Sudeep: ತಮ್ಮ ಆರೋಗ್ಯ-ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಅಪ್ಡೇಟ್ ಕೊಟ್ಟ ಕಿಚ್ಚ ಸುದೀಪ್
Bigg Boss 8 Kannada: ಕಿಚ್ಚ ಸುದೀಪ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದಾಗಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೇ ಕಾರಣದಿಂದ ಸುದೀಪ್ ವಾರಾಂತ್ಯದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಸಹ ಮಾಡಲಿಲ್ಲ. ಇನ್ನು ಸುದೀಪ್ ಅವರಿಗೆ ಏನಾಯ್ತು ಎಂದು ತಿಳಿದೆ ಆತಂಕದಲ್ಲಿದ್ದ ಅಭಿಮಾನಿಗಳು ದೇವಾಲಯಗಳಲ್ಲಿ ನಟನ ಹೆಸರಿನಲ್ಲಿ ಪೂಜೆ-ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಕೆಲವೇ ಗಂಟೆಯ ಹಿಂದೆ ಸುದೀಪ್ ತಮ್ಮ ಆರೋಗ್ಯ ಹಾಗೂ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಸುದೀಪ್ ಅಭಿಮಾನಿಗಳ ಟ್ವಿಟರ್ ಖಾತೆ ಹಾಗೂ ಕಲರ್ಸ್ ಕನ್ನಡ ಇನ್ಸ್ಟಾಗ್ರಾಂ ಖಾತೆ)