ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಕಿಚ್ಚ ಸುದೀಪ್, ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಟೀಕೆಗಳು ಕೇಳಿ ಬರ್ತಿದೆ ಎಂದು ಹೇಳಿದ್ದಾರೆ.
2/ 8
ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಜನಪ್ರಿಯತೆ ಪಡೆದ ಬಳಿಕ ತಾನು ಬೆಳೆದ ಬೇರು ಕನ್ನಡ ಚಿತ್ರರಂಗವನ್ನೇ ಮರೆತಿದ್ದಾರೆ ಎಂದು ಸುದೀಪ್ ಕಿಡಿಕಾರಿದ್ದಾರೆ.
3/ 8
ರಶ್ಮಿಕಾ ಎಲ್ಲಾ ಊಹಾಪೋಹಗಳನ್ನು ತಳ್ಳಿ ಹಾಕಿದ್ದಾರೆ. ಕನ್ನಡ ಚಿತ್ರರಂಗವನ್ನು ಮರೆತಿದ್ದಾರೆ ಎನ್ನುವ ಅಪವಾದ ಮಾತ್ರ ರಶ್ಮಿಕಾ ಮೇಲೆ ಉಳಿದುಕೊಂಡಿದ್ದು, ಇದೇ ವಿಚಾರಕ್ಕೆ ನಟಿ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದಾರೆ.
4/ 8
ಇಡೀ ವಿವಾದದ ಬಗ್ಗೆ ಮಾತಾಡಿದ ಕಿಚ್ಚ ಸುದೀಪ್, ನೀವು ಜಗತ್ತನ್ನು ಹೇಗೆ ಬದಲಾಯಿಸಬಹುದು? ನೀವು 15-20 ವರ್ಷಗಳ ಹಿಂದೆ ಹೋದರೆ, ಅಲ್ಲಿ ನ್ಯೂಸ್ ಚಾನೆಲ್ಗಳು ನಮ್ಮನ್ನು ಸಂದರ್ಶಿಸುತ್ತಿದ್ದವು, ಆ ಸಮಯದಲ್ಲಿ ಅದು ತುಂಬಾ ಹೊಸದು ಎಂದ್ರು.
5/ 8
ಆದರೆ ಡಾ ರಾಜ್ಕುಮಾರ್ ಅವರ ಕಾಲಕ್ಕೆ ಹೋದರೆ ಟಿವಿ ಮತ್ತು ಪತ್ರಿಕೆಗಳನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಈಗ ಸೋಶಿಯಲ್ ಮೀಡಿಯಾ ಕಾಲವಾಗಿದೆ. ಸೆಲೆಬ್ರೆಟಿಗಳಿಗೆ ಹೂಮಾಲೆ ಇರುತ್ತೆ ಜೊತೆಗೆ ಟೊಮೆಟೊ, ಕಲ್ಲುಗಳು ಇರುತ್ತವೆ ಎಂದು ಹೇಳಿದ್ದಾರೆ.
6/ 8
ರಶ್ಮಿಕಾ ವಿರುದ್ಧ ಪರೋಕ್ಷವಾಗಿ ಕಿಡಿಕಾರಿರುವ ಕಿಚ್ಚ ಸುದೀಪ್, ನಾವು ಟೀಕೆಯನ್ನು ಎದುರಿಸಲು ಮತ್ತು ಬಲಶಾಲಿಯಾಗಲು ಕಲಿಯಬೇಕು ಎಂದ್ರು.
7/ 8
ನೀವು ಫೇಸ್ಬುಕ್ ಮತ್ತು ಟ್ವಿಟರ್ ನಲ್ಲಿ 2 ಅಥವಾ 10 ಮಿಲಿಯನ್ ಫಾಲೋವರ್ಸ್ ಬೇಕೆಂದು ಬಯಸುತ್ತೀರಿ ಆದ್ರೆ ಟೀಕೆಗಳು ಮಾತ್ರ ಬೇಡವೇ ಎಂದು ರಶ್ಮಿಕಾ ವಿರುದ್ಧ ಕಿಚ್ಚ ಸುದೀಪ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ ಎಂದು ತೆಲುಗು ಮಾಧ್ಯಮದಲ್ಲಿ ವರದಿಯಾಗಿದೆ.
8/ 8
ಕಾಂತಾರ ಸಿನಿಮಾ ನೋಡಿಲ್ಲ ಎಂದಿದ್ದ ರಶ್ಮಿಕಾ ಇತ್ತೀಚಿಗೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಜೊತೆ ಸಂದರ್ಶನವೊಂದರಲ್ಲಿ ಮೊದಲ ಚಿತ್ರದ ಪ್ರೊಡೆಕ್ಷನ್ ಹೆಸರು ಹೇಳದೆ ಸನ್ನೆ ಮಾಡಿ ಟ್ರೋಲ್ ಆಗಿದ್ದರು.