Sudeep Meets Pawan Kalyan: ನಟ ಪವನ್ ಕಲ್ಯಾಣ್ ಭೇಟಿಯಾದ ಕಿಚ್ಚ ಸುದೀಪ್; ಕಾರಣ ಬಹಿರಂಗ !
ನಟ ಕಿಚ್ಚ ಸುದೀಪ್ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತು ತಮ್ಮ ಟ್ವೀಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿರುವ ಕಿಚ್ಚ, ಪವನ್ ಕಲ್ಯಾಣ್ ನಿಜಕ್ಕೂ ಒಬ್ಬ ಸರಳ ವ್ಯಕ್ತಿ ಎಂದು ವ್ಯಾಖ್ಯಾನಿಸಿದ್ದಾರೆ. ಈ ನಟರಿಬ್ಬರ ಅಚಾನಕ್ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.
News18 Kannada | October 5, 2020, 9:28 PM IST
1/ 7
ನಟ ಸುದೀಪ್ ಇದೇ ಮೊದಲ ಬಾರಿ ಪವನ್ ಕಲ್ಯಾಣ್ ಭೇಟಿಯಾಗಿದ್ದಾರೆ. ಸದ್ಯ ಹೈದ್ರಾಬಾದ್ನಲ್ಲಿ ಶೂಟಿಂಗ್ ನಡೆಸುತ್ತಿರುವ ಕಿಚ್ಚ ಈ ವೇಳೆ ತೆಲುಗಿನ ಪವರ್ ಸ್ಟಾರ್ ಜೊತೆ ಮಾತುಕತೆ ನಡೆಸಿದ್ದಾರೆ.
2/ 7
ಈ ಭೇಟಿ ವೇಳೆ ಅವರು, ಗಿಡವನ್ನು ಉಡುಗೊರೆಯಾಗಿ ನೀಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.
3/ 7
ಪವನ್ ಜೊತೆ ಸಿನಿಮಾ ಸೇರಿದಂತೆ ಸಾಕಷ್ಟು ವಿಚಾರಗಳ ಕುರಿತು ಹರಟಿದ್ದಾರೆ ಸುದೀಪ್.