Kiara-Sidharth: ಕೈ ತುಂಬಾ ಬಳೆ, ಸಿಂಧೂರದಲ್ಲಿ ಕಂಗೊಳಿಸಿದ ಕಿಯಾರಾ! ಮದುವೆ ಬಳಿಕ ಕ್ಯಾಮೆರಾ ಕಣ್ಣಿಗೆ ಬಿತ್ತು ಜೋಡಿ
Kiara Advani-Sidharth Malhotra: ಬಾಲಿವುಡ್ ಲವ್ ಬರ್ಡ್ಸ್ ಕಿಯಾರಾ ಅಡ್ವಾಣಿ ಹಾಗೂ ನಟ ಸಿದ್ದಾರ್ಥ್ ಮಲ್ಹೋತ್ರಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ನವ ಜೋಡಿಗೆ ಶುಭಾಶಯಗಳು ಹರಿದು ಬರ್ತಿದೆ. ಮದುವೆ ಬಳಿಕ ಮೊದಲ ಬಾರಿಗೆ ಈ ಜೋಡಿ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.
ಕಿಯಾರಾ ಅಡ್ವಾಣಿ ಹಾಗೂ ನಟ ಸಿದ್ದಾರ್ಥ್ ಮಲ್ಹೋತ್ರಾ ಫೆಬ್ರವರಿ 7ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.. ರಾಜಸ್ಥಾನದ ಜೈಸಲ್ಮೇರ್ ಬಳಿಯ ಸೂರ್ಯಗಡ ಪ್ಯಾಲೇಸ್ನಲ್ಲಿ ಅದ್ದೂರಿಯಾಗಿ ಮದುವೆ ನಡೆಯಿತು.
2/ 8
ಮದುವೆ ಕಾರ್ಯದ ಬಳಿಕ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮೊದಲ ಬಾರಿಗೆ ಜೈಸಲ್ಮೇರ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
3/ 8
ಮದುವೆ ನಂತರ ಮೊದಲ ಬಾರಿಗೆ ಕಾಣಿಸಿಕೊಂಡ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ಫೋಟೋ ಕ್ಲಿಕ್ಕಿಸಲು ಪಾಪರಾಜಿಗಳು ಮುಗಿಬಿದ್ದರು.
4/ 8
ಜೈಸಲ್ಮೇರ್ ವಿಮಾನ ನಿಲ್ದಾಣದಿಂದ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಮುಂಬೈಗೆ ಹೊರಟಿದ್ದಾರೆ. (ಫೋಟೋ ಕೃಪೆ: ವೈರಲ್ ಭಯಾನಿ)
5/ 8
ಮದುವೆ ಬಳಿಕ ಕಾಣಿಸಿಕೊಂಡ ನಟಿ ಕಿಯಾರಾ ಅಡ್ವಾಣಿ, ಕೈ ತುಂಬ ಬಳೆ ಹಾಗೂ ಸಿಂಧೂರದೊಂದಿಗೆ ಕಂಗೊಳಿಸುತ್ತಿದ್ರು. (ಫೋಟೋ ಕೃಪೆ: ವೈರಲ್ ಭಯಾನಿ)
6/ 8
ಬ್ಲ್ಯಾಕ್ ಕಲರ್ ಡ್ರೆಸ್ ಜೊತೆಗೆ ಮೈ ತುಂಬಾ ಶಾಲು ಹೊಂದಿಕೊಂಡಿದ್ದ ಕಿಯಾರಾ ಕೆಲ ಕಾಲ ಕ್ಯಾಮೆರಾಗೆ ಪೋಸ್ ಕೊಟ್ಟು ಫ್ಲೈಟ್ ಹತ್ತಿದ್ದಾರೆ. (ಫೋಟೋ ಕೃಪೆ: ವೈರಲ್ ಭಯಾನಿ)
7/ 8
ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ - ಕಿಯಾರಾ ಅಡ್ವಾಣಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಾಲಿವುಡ್ ಸೆಲೆಬ್ರೆಟಿಗಳು ಸಹ ಭಾಗಿಯಾಗಿದ್ರು.
8/ 8
ಮದುವೆ ಫೋಟೋಗಳನ್ನು ನಟಿ ಕಿಯಾರಾ ಅಡ್ವಾಣಿ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದರು. ಅಬ್ ಹುಮಾರಿ ಪರ್ಮನೆಂಟ್ ಬುಕಿಂಗ್ ಹೋ ಗಯಿ ಹೈ , "ನಮ್ಮ ಮುಂದಿನ ಪ್ರಯಾಣದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ಬಯಸುತ್ತೇವೆ ಎಂದು ಕಿಯಾರಾ ಅಡ್ವಾಣಿ ಬರೆದುಕೊಂಡಿದ್ದರು.
First published:
18