ಮಾರ್ಕೆಟ್​ಗೆ ಬಂದ KGF​ ದೊಡ್ಡಮ್ಮ! ಹೋಳಿ ಹಬ್ಬಕ್ಕೆ ಫುಲ್ ಜೋಶ್

ಮಾರ್ಕೆಟ್​ನ ಬಣ್ಣದ ಅಂಗಡಿಗಳಲ್ಲಿ ದೊಡ್ಡಮ್ಮ ಪಿಚ್ಕಾರಿ ಸೌಂಡ್ ಮಾಡ್ತಿದೆ. ಕೆಜಿಎಫ್ ಸಿನಿಮಾದಲ್ಲಿ ಕಲಶ್ನಿಕೋವ್ ಗನ್ ಪ್ರಾಮುಖ್ಯತೆ ಹೆಚ್ಚಿದೆ. ಅದೇ ರೀತಿ ಈ ಬಾರಿ ಹೋಳಿ ಸಂದರ್ಭ ಈ ದೊಡ್ಡಮ್ಮ ಗನ್ ಹವಾ ಕೂಡಾ ಜೋರಾಗಿದೆ.

First published:

  • 115

    ಮಾರ್ಕೆಟ್​ಗೆ ಬಂದ KGF​ ದೊಡ್ಡಮ್ಮ! ಹೋಳಿ ಹಬ್ಬಕ್ಕೆ ಫುಲ್ ಜೋಶ್

    ಕೆಜಿಎಫ್​ನ ದೊಡ್ಡಮ್ಮ ಯಾರಿಗೆ ನೆನಪಿಲ್ಲ ಹೇಳಿ? ಆ್ಯಕ್ಷನ್ ಮೂವಿ ಇಷ್ಟಪಡುವ ಯಾರೇ ಆದರೂ ಇದನ್ನು ಮರೆಯಲು ಸಾಧ್ಯವೇ ಇಲ್ಲ. ಇದೀಗ ಪಶ್ಚಿಮ ಬಂಗಾಳದ ಜಲ್ಪೈಗುರಿಯ ಮಾರ್ಕೆಟ್​ಗೆ ಕೆಜಿಎಫ್​ನ ದೊಡ್ಡಮ್ಮ ಕಾಣೋಕೆ ಸಿಗುತ್ತಿದ್ದಾರೆ. ಪ್ರತಿ ಶಾಪ್​ನಲ್ಲೂ ದೊಡ್ಡಮ್ಮನ ಹವಾ.

    MORE
    GALLERIES

  • 215

    ಮಾರ್ಕೆಟ್​ಗೆ ಬಂದ KGF​ ದೊಡ್ಡಮ್ಮ! ಹೋಳಿ ಹಬ್ಬಕ್ಕೆ ಫುಲ್ ಜೋಶ್

    ಕೆಜಿಎಫ್ ಸಿನಿಮಾದಲ್ಲಿ ದೊಡ್ಡಮ್ಮನ ಸೀನ್ ಪ್ರೇಕ್ಷಕರಿಗೆ ಭಾರೀ ಇಷ್ಟವಾಗಿತ್ತು. ಬೃಹತ್ ಗನ್ ಹಿಡಿದು ಅದನ್ನು ಯಶ್ ಆಪರೇಟ್ ಮಾಡುವ ರೀತಿಯೂ ಇಷ್ಟವಾಗಿತ್ತು. ಇದೀಗ ಅದೇ ಕಾನ್ಸೆಪ್ಟ್​ನಲ್ಲಿ ಈ ಬಣ್ಣದ ಗನ್ ತಯಾರಿಸಲಾಗಿದೆ.

    MORE
    GALLERIES

  • 315

    ಮಾರ್ಕೆಟ್​ಗೆ ಬಂದ KGF​ ದೊಡ್ಡಮ್ಮ! ಹೋಳಿ ಹಬ್ಬಕ್ಕೆ ಫುಲ್ ಜೋಶ್

    ಹೋಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು ಎಲ್ಲೆಡೆ ಬಣ್ಣದ ಹಬ್ಬದ ಅಬ್ಬರ ಶುರುವಾಗಿದೆ. ಸುಂದರವಾದ ಬಣ್ಣದ ರಾಶಿ, ಪಿಚ್ಕಾರಿಗಳು ಅಂಗಡಿ ಮುಂದೆ ತೂಗುತ್ತಿದೆ. ಈ ಸಂದರ್ಭ ಪಶ್ಚಿಮ ಬಂಗಾಳದ ಹೋಳಿ ಮಾತ್ರ ಸ್ಪೆಷಲ್ ಆಗಿದೆ.

    MORE
    GALLERIES

  • 415

    ಮಾರ್ಕೆಟ್​ಗೆ ಬಂದ KGF​ ದೊಡ್ಡಮ್ಮ! ಹೋಳಿ ಹಬ್ಬಕ್ಕೆ ಫುಲ್ ಜೋಶ್

    ಜಲ್ಪೈಗುರಿಯ ಮಾರ್ಕೆಟ್​ನ ಬಣ್ಣದ ಅಂಗಡಿಗಳಲ್ಲಿ ದೊಡ್ಡಮ್ಮ ಪಿಚ್ಕಾರಿ ಸೌಂಡ್ ಮಾಡ್ತಿದೆ. ಕೆಜಿಎಫ್ ಸಿನಿಮಾದಲ್ಲಿ ಕಲಶ್ನಿಕೋವ್ ಗನ್ ಪ್ರಾಮುಖ್ಯತೆ ಹೆಚ್ಚಿದೆ. ಅದೇ ರೀತಿ ಈ ಬಾರಿ ಹೋಳಿ ಸಂದರ್ಭ ಈ ದೊಡ್ಡಮ್ಮ ಗನ್ ಹವಾ ಕೂಡಾ ಜೋರಾಗಿದೆ.

    MORE
    GALLERIES

  • 515

    ಮಾರ್ಕೆಟ್​ಗೆ ಬಂದ KGF​ ದೊಡ್ಡಮ್ಮ! ಹೋಳಿ ಹಬ್ಬಕ್ಕೆ ಫುಲ್ ಜೋಶ್

    ಇದೀಗ ಮಾರ್ಕೆಟ್​, ಬಜಾರ್​ಗಳಲ್ಲಿ ಕಾಣಸಿಗುತ್ತಿರುವ ಬೃಹತ್ ಗಾತ್ರದ ದೊಡ್ಡಮ್ಮ ಪಿಚ್ಕಾರಿ ಹೈಪ್ ಪಡೆದುಕೊಂಡಿದೆ. ವಿಶೇಷವಾಗಿ ಚಿಕ್ಕ ಮಕ್ಕಳು ಹಾಗೂ ಯುವಜನರನ್ನು ತನ್ನತ್ತ ಆಕರ್ಷಿಸುತ್ತಿದೆ.

    MORE
    GALLERIES

  • 615

    ಮಾರ್ಕೆಟ್​ಗೆ ಬಂದ KGF​ ದೊಡ್ಡಮ್ಮ! ಹೋಳಿ ಹಬ್ಬಕ್ಕೆ ಫುಲ್ ಜೋಶ್

    ಸದ್ಯದಲ್ಲಿಯೇ ಡೋಲ್ ಉತ್ಸವ ನಡೆಯಲಿದ್ದು ಈ ಬಣ್ಣಗಳ ಹಬ್ಬವನ್ನು ವಿಶೇಷವಾಗಿ ಮಕ್ಕಳು ತುಂಬಾ ಎಂಜಾಯ್ ಮಾಡುತ್ತಾರೆ. ಮಕ್ಕಳು ಬೆಳಗ್ಗಿನಿಂದಲೇ ಬಣ್ಣ ಹಾಗೂ ಪಿಚ್ಕಾರಿ ಹಿಡಿದು ಬಣ್ಣದ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.

    MORE
    GALLERIES

  • 715

    ಮಾರ್ಕೆಟ್​ಗೆ ಬಂದ KGF​ ದೊಡ್ಡಮ್ಮ! ಹೋಳಿ ಹಬ್ಬಕ್ಕೆ ಫುಲ್ ಜೋಶ್

    ಎದುರು ಯಾರೇ ಸಿಕ್ಕಿದರೂ ಅಂದು ಬಣ್ಣ ಎರಚುವ ಸ್ವಾತಂತ್ರ್ಯವಿದೆ. ಜನರು ಬಣ್ಣದ ನೀರನ್ನು ಎರಚುತ್ತಾ, ಬಣ್ಣವನ್ನು ಚೆಲ್ಲುತ್ತಾ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

    MORE
    GALLERIES

  • 815

    ಮಾರ್ಕೆಟ್​ಗೆ ಬಂದ KGF​ ದೊಡ್ಡಮ್ಮ! ಹೋಳಿ ಹಬ್ಬಕ್ಕೆ ಫುಲ್ ಜೋಶ್

    ಬೀದಿಯಲ್ಲಿರುವ ಬಣ್ಣದ ಅಂಗಡಿಗಳೆಲ್ಲ ಕಲರ್​ಫುಲ್ ಆಗಿ ಕಂಗೊಳಿಸುತ್ತವೆ. ಬಹಳಷ್ಟು ರೀತಿಯ, ಶೇಪ್​ನಲ್ಲಿರುವಂತಹ ಪಿಚ್ಕಾರಿಗಳು ಸಹ ಮಾರ್ಕೆಟ್​ಗೆ ಬಂದಿವೆ.

    MORE
    GALLERIES

  • 915

    ಮಾರ್ಕೆಟ್​ಗೆ ಬಂದ KGF​ ದೊಡ್ಡಮ್ಮ! ಹೋಳಿ ಹಬ್ಬಕ್ಕೆ ಫುಲ್ ಜೋಶ್

    ಕೆಂಪು, ನೀಲಿ ಬಣ್ಣದ ಹೇರ್​ಮಾಸ್ಕ್​ಗಳು ಡಿಫರೆಂಟ್ ಡಿಸೈನ್​ನಲ್ಲಿ ಬಂದಿವೆ. ಹೀಗಾಗಿ ಯುವಜನರೆಲ್ಲ ಅಂಗಡಿಗಳ ಮುಂದೆ ಶಾಪಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 1015

    ಮಾರ್ಕೆಟ್​ಗೆ ಬಂದ KGF​ ದೊಡ್ಡಮ್ಮ! ಹೋಳಿ ಹಬ್ಬಕ್ಕೆ ಫುಲ್ ಜೋಶ್

    ಆದರೆ ಇವುಗಳಲ್ಲಿ ಎಲ್ಲದರಲ್ಲೂ ಸದ್ಯ ಅತ್ಯಧಿಕ ಸೇಲ್ ಆಗುತ್ತಿರುವುದು ಕೆಜಿಎಫ್ ದೊಡ್ಡಮ್ಮನಂತಿರುವ ಪಿಚ್ಕಾರಿ. ದೊಡ್ಡಮ್ಮ ಎಂದೇ ಹೇಳಿಕೊಂಡು ಈ ಗನ್ ಗ್ರಾಹಕರನ್ನು ಸೆಳೆಯುತ್ತಿದೆ.

    MORE
    GALLERIES

  • 1115

    ಮಾರ್ಕೆಟ್​ಗೆ ಬಂದ KGF​ ದೊಡ್ಡಮ್ಮ! ಹೋಳಿ ಹಬ್ಬಕ್ಕೆ ಫುಲ್ ಜೋಶ್

    ಅದೇ ರೀತಿ ಪಿಚ್ಕಾರಿಗಳಂತೆ ಇಲ್ಲಿ ಮಾಸ್ಕ್​ಗಳಿಗೂ ಬೇಡಿಕೆ ಹೆಚ್ಚಾಗಿದೆ. ಭರ್ಜರಿಯಾಗಿ ಜನರು ಈ ಮಾಸ್ಕ್ ಖರೀದಿ ಮಾಡಿಕೊಂಡು ಬಣ್ಣದ ಪಿಚ್ಕಾರಿ ಪರ್ಚೇಸ್ ಮಾಡುತ್ತಿದ್ದಾರೆ.

    MORE
    GALLERIES

  • 1215

    ಮಾರ್ಕೆಟ್​ಗೆ ಬಂದ KGF​ ದೊಡ್ಡಮ್ಮ! ಹೋಳಿ ಹಬ್ಬಕ್ಕೆ ಫುಲ್ ಜೋಶ್

    ಈ ನಡುವೆ ಹರ್ಬಲ್ ಬಣ್ಣ ಕೂಡಾ ಮಾರ್ಕೆಟ್​ಗೆ ಬಂದಿದೆ. ಆದರೆ ಬೆಲೆ ಸ್ವಲ್ಪ ಜಾಸ್ತಿಯೇ ಇದೆ. ಆದರೂ ಜನ ತಲೆಕೆಡಿಸಿಕೊಳ್ಳದೆ ಬಣ್ಣ ಖರೀದಿಸುತ್ತಿದ್ದಾರೆ.

    MORE
    GALLERIES

  • 1315

    ಮಾರ್ಕೆಟ್​ಗೆ ಬಂದ KGF​ ದೊಡ್ಡಮ್ಮ! ಹೋಳಿ ಹಬ್ಬಕ್ಕೆ ಫುಲ್ ಜೋಶ್

    ಕೊರೋನಾದಿಂದಾಗಿ ಕಳೆದ ಎರಡು ವರ್ಷ ಜನರು ಸರಿಯಾಗಿ ಹೋಳಿ ಹಬ್ಬವನ್ನು ಆಚರಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಜನ ಸಾಮಾನ್ಯರು ಚಿಂತೆ ಬಿಟ್ಟು ಈ ಸಲ ಖುಷಿಯಿಂದ ಹಬ್ಬ ಆಚರಿಸಲು ರೆಡಿಯಾಗಿದ್ದಾರೆ.

    MORE
    GALLERIES

  • 1415

    ಮಾರ್ಕೆಟ್​ಗೆ ಬಂದ KGF​ ದೊಡ್ಡಮ್ಮ! ಹೋಳಿ ಹಬ್ಬಕ್ಕೆ ಫುಲ್ ಜೋಶ್

    ಈ ಎಲ್ಲ ಸಿದ್ಧತೆಗಳ ಮಧ್ಯೆ ಕೆಜಿಎಫ್ ದೊಡ್ಡಮ್ಮ ಜನರ ಮೇಲೆ ಬಣ್ಣದ ನೀರು ಎರಚೋಕೆ ರೆಡಿಯಾಗಿದ್ದು ಯುವಜನರು ಆಸಕ್ತಿಯಿಂದ ಇದನ್ನು ಖರೀದಿಸುತ್ತಿದ್ದಾರೆ.

    MORE
    GALLERIES

  • 1515

    ಮಾರ್ಕೆಟ್​ಗೆ ಬಂದ KGF​ ದೊಡ್ಡಮ್ಮ! ಹೋಳಿ ಹಬ್ಬಕ್ಕೆ ಫುಲ್ ಜೋಶ್

    ತಮ್ಮ ಕುಟುಂಬ, ಸ್ನೇಹಿತರು ಹಾಗೂ ಆಪ್ತರೊಂದಿಗೆ ದೊಡ್ಡಮ್ಮನ ಜೊತೆ ಹೋಳಿ ಮಾಡೋ ಸಿದ್ಧತೆಯಲ್ಲಿ ಪಶ್ಚಿಮ ಬಂಗಾಳದ ಜನ. ಅಂತೂ ಈ ಸಲ ಹೋಳಿ ಸ್ಪೆಷಲ್ ಆಗೋದ್ರಲ್ಲಿ ಸಂದೇಹವೇ ಇಲ್ಲ.

    MORE
    GALLERIES