ಪ್ರೇಕ್ಷಕರೇ ಹುಷಾರ್...ಯಾರೂ ಕೂಡ ಯಾಮಾರಬೇಡಿ ಅಂದ್ರೂ ಕೆ.ಜಿ.ಎಫ್ ನಿರ್ದೇಶಕ

First published:

 • 111

  ಪ್ರೇಕ್ಷಕರೇ ಹುಷಾರ್...ಯಾರೂ ಕೂಡ ಯಾಮಾರಬೇಡಿ ಅಂದ್ರೂ ಕೆ.ಜಿ.ಎಫ್ ನಿರ್ದೇಶಕ

  ದಿಯಾ ಮತ್ತು ಲವ್ ಮಾಕ್ಟೇಲ್. ಈ ಎರಡು ಸಿನಿಮಾಗಳಿಗೆ ಕನ್ನಡ ಸಿನಿಪ್ರಿಯರು ಫಿದಾ ಆಗಿದ್ದಾರೆ. ಅದರಲ್ಲೂ ತ್ರಿಕೋನ ಪ್ರೇಮಕಥೆಯ ದಿಯಾ ಪ್ರೇಕ್ಷಕರ ಹೃದಯಕ್ಕೆ ಲಗ್ಗೆಯಿಟ್ಟಿದೆ.

  MORE
  GALLERIES

 • 211

  ಪ್ರೇಕ್ಷಕರೇ ಹುಷಾರ್...ಯಾರೂ ಕೂಡ ಯಾಮಾರಬೇಡಿ ಅಂದ್ರೂ ಕೆ.ಜಿ.ಎಫ್ ನಿರ್ದೇಶಕ

  ಫೆಬ್ರವರಿ 7 ರಂದು ಬಿಡುಗಡೆಯಾಗಿದ್ದ ದಿಯಾ ಬಗ್ಗೆ ಆರಂಭದಲ್ಲೇ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದವು. ರಕ್ಷಿತ್ ಶೆಟ್ಟಿ, ಯಶ್ ಸೇರಿದಂತೆ ಒಂದಷ್ಟು ಸ್ಟಾರ್ ನಟರುಗಳು ಕೂಡ ಚಿತ್ರವನ್ನು ಹಾಡಿ ಹೊಗಳಿದ್ದರು.

  MORE
  GALLERIES

 • 311

  ಪ್ರೇಕ್ಷಕರೇ ಹುಷಾರ್...ಯಾರೂ ಕೂಡ ಯಾಮಾರಬೇಡಿ ಅಂದ್ರೂ ಕೆ.ಜಿ.ಎಫ್ ನಿರ್ದೇಶಕ

  ಇದರ ಬೆನ್ನಲ್ಲೇ ಮಲ್ಟಿಪ್ಲೆಕ್ಸ್​ ಚಿತ್ರಮಂದಿರಗಳಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಾರಂಭಿಸಿತು. ಆದರೆ ಥಿಯೇಟರುಗಳ ಸಮಸ್ಯೆಯಿಂದ ದಿಯಾ ಮೂವಿ ತುಂಬಾ ದಿನಗಳು ಚಿತ್ರಮಂದಿರದಲ್ಲಿ ಉಳಿಯಲಿಲ್ಲ.

  MORE
  GALLERIES

 • 411

  ಪ್ರೇಕ್ಷಕರೇ ಹುಷಾರ್...ಯಾರೂ ಕೂಡ ಯಾಮಾರಬೇಡಿ ಅಂದ್ರೂ ಕೆ.ಜಿ.ಎಫ್ ನಿರ್ದೇಶಕ

  ಒಂದಷ್ಟು ಪ್ರೇಕ್ಷಕರು ಥಿಯೇಟರ್​ನತ್ತ ಮುಖ ಮಾಡುತ್ತಿದ್ದಂತೆ ದಿಯಾ ಚಿತ್ರಮಂದಿರದಿಂದ ಮಾಯವಾಗಿತ್ತು. ಆ ಬಳಿಕ ದಿಯಾ ಪ್ರತ್ಯಕ್ಷಗಳಾಗಿದ್ದು ಅಮೆಜಾನ್ ಪ್ರೈಮ್ ಮೂಲಕ.

  MORE
  GALLERIES

 • 511

  ಪ್ರೇಕ್ಷಕರೇ ಹುಷಾರ್...ಯಾರೂ ಕೂಡ ಯಾಮಾರಬೇಡಿ ಅಂದ್ರೂ ಕೆ.ಜಿ.ಎಫ್ ನಿರ್ದೇಶಕ

  ದೀಕ್ಷಿತ್‌ ಶೆಟ್ಟಿ, ಪೃಥ್ವಿ ಅಂಬರ್‌ ಹಾಗೂ ಖುಷಿ ಅಭಿನಯದ ಈ ಚಿತ್ರವು ಡಿಜಿಟಲ್ ಫ್ಲಾಟ್​ಫಾರ್ಮ್​ನಲ್ಲಿ ಸೂಪರ್ ಹಿಟ್ ಲೀಸ್ಟ್​ಗೆ ಸೇರಿತು. ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದವರು ಅಮೆಜಾನ್​ನಲ್ಲಿ ನೋಡಿ ಹಾಡಿ ಹೊಗಳಿದ್ದರು.

  MORE
  GALLERIES

 • 611

  ಪ್ರೇಕ್ಷಕರೇ ಹುಷಾರ್...ಯಾರೂ ಕೂಡ ಯಾಮಾರಬೇಡಿ ಅಂದ್ರೂ ಕೆ.ಜಿ.ಎಫ್ ನಿರ್ದೇಶಕ

  ಅಷ್ಟೇ ಅಲ್ಲದೆ ದಿನ ಕಳೆದಂತೆ ಅಮೆಜಾನ್​ನಲ್ಲಿ ದಿಯಾಳ ಮೋಡಿ ಮುಗಿಲೆತ್ತರಕ್ಕೇರಿದೆ. ಅನೇಕರು ಮತ್ತೊಮ್ಮೆ ಚಿತ್ರವನ್ನು ರಿಲೀಸ್ ಮಾಡುವಂತೆ ಕೇಳಿ ಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಇಂತಹ ಅದ್ಭುತ ಚಿತ್ರವನ್ನು ನೀಡಿದ ನಿರ್ಮಾಪಕರು ನಷ್ಟ ಹೊಂದಬಾರದು ಎಂದು ಭಾವಿಸುತ್ತಿದ್ದಾರೆ.

  MORE
  GALLERIES

 • 711

  ಪ್ರೇಕ್ಷಕರೇ ಹುಷಾರ್...ಯಾರೂ ಕೂಡ ಯಾಮಾರಬೇಡಿ ಅಂದ್ರೂ ಕೆ.ಜಿ.ಎಫ್ ನಿರ್ದೇಶಕ

  ಹೀಗಾಗಿಯೇ ಚಿತ್ರವನ್ನು ಮತ್ತೊಮ್ಮೆ ರಿಲೀಸ್ ಮಾಡಿ, ಅಥವಾ ನಿಮ್ಮ ಬ್ಯಾಂಕಿಂಗ್ ಖಾತೆಯನ್ನು ತಿಳಿಸಿ ನಾವು ಟಿಕೆಟ್ ದುಡ್ಡನ್ನು ಕೊಡುತ್ತೇವೆ ಅನ್ನುತ್ತಿದ್ದಾರೆ.

  MORE
  GALLERIES

 • 811

  ಪ್ರೇಕ್ಷಕರೇ ಹುಷಾರ್...ಯಾರೂ ಕೂಡ ಯಾಮಾರಬೇಡಿ ಅಂದ್ರೂ ಕೆ.ಜಿ.ಎಫ್ ನಿರ್ದೇಶಕ

  ಸಿನಿಪ್ರೇಮಿಗಳ ಈ ವಿಶಾಲ ಹೃದಯ ವ್ಯಕ್ತವಾಗುತ್ತಿದ್ದಂತೆ ಇತ್ತ ಸೈಬರ್ ಕಳ್ಳರು ಲೂಟಿ ಹೊಡೆಯಲು ಅಣಿಯಾಗಿದ್ದಾರೆ. ಈ ಬಗ್ಗೆ ದಿಯಾ ನಿರ್ಮಾಪಕ ಕೃಷ್ಣ ಚೈತನ್ಯ ಫೇಸ್​ಬುಕ್ ಮೂಲಕ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ.

  MORE
  GALLERIES

 • 911

  ಪ್ರೇಕ್ಷಕರೇ ಹುಷಾರ್...ಯಾರೂ ಕೂಡ ಯಾಮಾರಬೇಡಿ ಅಂದ್ರೂ ಕೆ.ಜಿ.ಎಫ್ ನಿರ್ದೇಶಕ

  'ಅಮೆಜಾನ್‌ ಪ್ರೈಮ್‌ನಲ್ಲಿ ದಿಯಾ ಚಿತ್ರವನ್ನು ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದೀರಿ. ಇದರಿಂದ ನಮಗೆ ಖುಷಿ ಆಗಿದೆ. ಅಷ್ಟೇ ಅಲ್ಲದೆ ಥಿಯೇಟರ್‌ನಲ್ಲಿ ನೋಡಲಾಗಿಲ್ಲ ಎಂದು ಕೆಲವರು ಟಿಕೆಟ್ ಹಣ ಕಳಿಸಲು ಮುಂದಾಗಿದ್ದೀರಿ. ನಿಮ್ಮ ಈ ಪ್ರೀತಿಗೆ ಧನ್ಯವಾದಗಳು.

  MORE
  GALLERIES

 • 1011

  ಪ್ರೇಕ್ಷಕರೇ ಹುಷಾರ್...ಯಾರೂ ಕೂಡ ಯಾಮಾರಬೇಡಿ ಅಂದ್ರೂ ಕೆ.ಜಿ.ಎಫ್ ನಿರ್ದೇಶಕ

  ಆದರೆ ನಾವು ಗೂಗಲ್‌ ಪೇ ಅಥವಾ ಯಾವುದೇ ಯುಪಿಐ ಪ್ಲಾಟ್‌ಫಾರ್ಮ್‌ ಮೂಲಕ ಹಣ ಪಡೆಯುತ್ತಿಲ್ಲ. ಯಾವುದೇ ಗಾಳಿಸುದ್ದಿಗೆ ಕಿವಿಗೊಡಬೇಡಿ' ಎಂದು ದಿಯಾ ನಿರ್ಮಾಪಕರು ತಿಳಿಸಿದ್ದಾರೆ. ಈ ಮೂಲಕ ಯಾರಾದರೂ ದಿಯಾ ತಂಡಕ್ಕೆ ಹಣ ಕಳಿಸುವಂತೆ ಕೇಳಿಕೊಂಡರೆ ಮೋಸ ಹೋಗಬೇಡಿ ಅಂದಿದ್ದಾರೆ.

  MORE
  GALLERIES

 • 1111

  ಪ್ರೇಕ್ಷಕರೇ ಹುಷಾರ್...ಯಾರೂ ಕೂಡ ಯಾಮಾರಬೇಡಿ ಅಂದ್ರೂ ಕೆ.ಜಿ.ಎಫ್ ನಿರ್ದೇಶಕ

  ಈ ಬಗ್ಗೆ ಕೆ.ಜಿ.ಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಎಚ್ಚರಿಕೆ ನೀಡಿದ್ದು, ದಿಯಾ ನಿರ್ಮಾಪಕರು ಯಾವುದೇ ರೀತಿಯ ಹಣವನ್ನು ಪ್ರೇಕ್ಷಕರಿಂದ ಪಡೆಯುತ್ತಿಲ್ಲ. ಯಾರೂ ಕೂಡ ಯಾಮಾರಬೇಡಿ. ಹುಷಾರಾಗಿರಿ ಪ್ರೇಕ್ಷಕರೇ ಎಂದು ತಿಳಿಸಿದ್ದಾರೆ.

  MORE
  GALLERIES