ಹಿಂದಿಯಲ್ಲೂ ಈ ಸಿನಿಮಾ ಸಾರ್ವಕಾಲಿಕ ಮೊದಲ ದಿನದ ದಾಖಲೆ ನಿರ್ಮಿಸಿದೆ. ಈ ಚಿತ್ರ ದಾಖಲೆಯ 83.88 ಕೋಟಿ ಮೊದಲ ದಿನವೇ ಕಲೆಕ್ಷನ್ ಮಾಡಿದೆ. ಕೆಜಿಎಫ್ 2 ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಮೊದಲ ವಾರ 268.63 ಕೋಟಿ ಗಳಿಸಿ ಇತಿಹಾಸ ನಿರ್ಮಿಸಿದೆ. 2ನೇ ವಾರ 80 ಕೋಟಿ. 3ನೇ ವಾರ 49.14 ಕೋಟಿ, 4ನೇ ವಾರ 22.75 ಕೋಟಿ ಹಾಗೂ 35 ದಿನಗಳಲ್ಲಿ ಒಟ್ಟು 430.95 ಕೋಟಿ ರೂ.ಗಳ ಸಂಗ್ರಹದೊಂದಿಗೆ ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.