4ನೇ ದಿನಕ್ಕೆ 29 ದಾಖಲೆ ರಾಕಿ ಬಾಯ್ ಹೆಸರಲ್ಲಿ: ಕೆಜಿಎಫ್ 2 ಬಿಡುಗಡೆಯಾಗಿ 4ನೇ ದಿನಕ್ಕೆ ಬರೋಬ್ಬರಿ 500 ಕೋಟಿ ಕ್ಲಬ್ ಸೇರಿದೆ. ರಾಕಿ ಬಾಯ್ ಹೋಗುತ್ತಿರುವ ಸ್ಪೀಡ್ ನೋಡಿದರೆ ಕೆಲವೇ ದಿನಗಳ್ಲಲಿ 1000 ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಿನಿಪಂಡಿತರು ಹೇಳುತ್ತಿದ್ದಾರೆ. ಇದರ ನಡುವೆ ಚಿತ್ರ ಬಿಡುಗಡೆಯಾಗಿ ನಾಲ್ಕೇ ದಿನಕ್ಕೆ ಬರೋಬ್ಬರಿ 29 ದಾಖಲೆಗಳನ್ನು ಅಳಿಸಿಹಾಕಿದೆ.