KGF Chapter-1: ಕೆಜಿಎಫ್ ಚಿತ್ರಕ್ಕೆ 4 ವರ್ಷ; ವಿಶೇಷ ಪೋಸ್ಟ್ ಶೇರ್ ಮಾಡಿದ ಹೊಂಬಾಳೆ ಫಿಲ್ಮ್ಸ್
ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಕೆಜಿಎಫ್ ಪಾರ್ಟ್1 ಸಿನಿಮಾ ತೆರೆ ಕಂಡು ಇಂದಿಗೆ 4 ವರ್ಷವಾಗಿದೆ. ಈ ಸಿನಿಮಾ ತೆರೆಕಂಡ ಈ ದಿನ ಅಂದ್ರೆ 4 ವರ್ಷಗಳ ಹಿಂದೆ ಯಾರಿಗೂ ತಿಳಿದಿರಲಿಲ್ಲ, ದೇಶಾದ್ಯಂತ ಈ ಸಿನಿಮಾ ಸಂಚಲನ ಸೃಷ್ಟಿಸಿತ್ತು ಎಂದು. ಸಿನಿಮಾ ರಿಲೀಸ್ ದಿನವನ್ನು ಹೊಂಬಾಳೆ ಫಿಲ್ಮ್ಸ್ ನೆನಪು ಮಾಡಿಕೊಂಡಿದೆ.
ಡಿಸೆಂಬರ್ 21 ರಂದು 2018ರಲ್ಲಿ ಕೆಜಿಎಫ್ ಸಿನಿಮಾ ತೆರೆಕಂಡಿತ್ತು.ಪ್ರತಾಂತ್ ನೀಲ್ ನಿರ್ದೇಶನದ ಈ ಕೆಜಿಎಫ್ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರ ಹೊಮ್ಮಿತು. ಕನ್ನಡ, ತಮಿಳು, ತೆಲುಗು, ಹಿಂದಿಯಲ್ಲಿ ಕೆಜಿಎಫ್ ಧೂಳೆಬ್ಬಿಸಿತ್ತು.
2/ 8
ಸಿನಿಮಾದ ಟೀಸರ್ ಹಾಗೂ ಟ್ರೇಲರ್ ನೋಡಿ ಪ್ರೇಕ್ಷಕರು ಥ್ರಿಲ್ ಆದರು. ಯಶ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿ ರಾಕಿ ಭಾಯ್ ಎಂದು ಶಿಳ್ಳೆ ಹೊಡೆದರು.
3/ 8
ಕೆಜಿಎಫ್ ಸಿನಿಮಾ ಮೂಲಕ ನಟ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು. ಯಶ್ ಕೆಜಿಎಫ್ ಚಿತ್ರಕ್ಕಾಗಿ ಅನೇಕ ವರ್ಷಗಳನ್ನು ಮುಡಿಪಿಟ್ಟಿದ್ದರು.
4/ 8
ಕನ್ನಡ ಚಿತ್ರರಂಗದಲ್ಲೇ ಈ ಸಿನಿಮಾ ನೂರಾರು ಕೋಟಿ ಬಿಸಿನೆಸ್ ಮಾಡಿತು. ಬಾಲಿವುಡ್ನಲ್ಲೂ ಈ ಸಿನಿಮಾ ರಿಲೀಸ್ ಮಾಡಲಾಯಿತು. ಹಿಂದಿಯಲ್ಲಿ ಈ ಚಿತ್ರ 44 ಕೋಟಿ ರೂಪಾಯಿ ಬಾಚಿತ್ತು.
5/ 8
ಕನ್ನಡ ಸಿನಿಮಾವಾದರೂ ತೆಲುಗಿನಲ್ಲಿ ಈ ಸಿನಿಮಾ ಸುಮಾರು ರೂ. 15 ಕೋಟಿಗೂ ಹೆಚ್ಚು ಶೇರ್ ಕಲೆಕ್ಷನ್ ಮಾಡಿ ಮಾಡಿತ್ತು. KGF ವಿಶ್ವಾದ್ಯಂತ ರೂ. ಒಟ್ಟು 240 ಕೋಟಿ ಕಲೆಕ್ಷನ್ ಮಾಡಿದೆ.
6/ 8
ಚಿನ್ನದ ಗಣಿ ಸುತ್ತ ಹೆಣೆದ ಕಥೆಯುಳ್ಳ ಈ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಯಶ್ ಗೆ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ನೀಡಿದೆ.
7/ 8
ಯಶ್ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ರು. ಚೊಚ್ಚಲ ಚಿತ್ರದಲ್ಲೇ ಶ್ರೀನಿಧಿ ಎಲ್ಲರ ಗಮನ ಸೆಳೆದರು.
8/ 8
ಈ ಸಿನಿಮಾ ಮಾಡಿದ ಮೋಡಿ ನೋಡಿ ಎರಡನೇ ಚಾಪ್ಟರ್ನಲ್ಲಿ ನಟಿಸಲು ಬಾಲಿವುಡ್ನ ಖ್ಯಾತ ಕಲಾವಿದರಾದ ಸಂಜಯ್ ದತ್, ರವೀನಾ ಟಂಡನ್ ಕೂಡ ಒಪ್ಪಿಕೊಂಡರು.